Get Updates
Get notified of breaking news, exclusive insights, and must-see stories!

ಭಾರತದ ಕೃಷಿ! ವರ್ಷಕ್ಕೆ 40,000 ಕೋಟಿ ರು. ದವಸ ಕೀಟಗಳಿಂದ ನಾಶ

ಮೋಗಾ : ಭಾರತದಲ್ಲಿ 40 ಸಾವಿರ ಕೋಟಿ ರುಪಾಯಿಗಳ ಮೌಲ್ಯದ ಆಹಾರಧಾನ್ಯಗಳು ಪ್ರತಿ ವರ್ಷ ಕೀಟಾಣುಗಳಿಂದ ಹಾಳಾಗುತ್ತಿವೆ ಎಂದು ಬೆಂಗಳೂರಿನ ಜೈವಿಕ ನಿಯಂತ್ರಣ ನಿರ್ದೇಶನಾಲಯದ ನಿರ್ದೇಶಕ ಡಾ.ಎಚ್‌.ಪಿ.ಸಿಂಗ್‌ ಹೇಳಿದ್ದಾರೆ.

ಇಲ್ಲಿ ನಡೆದ ಕೃಷಿ ವಿಜ್ಞಾನಿಗಳ ವಿಚಾರ ಸಂಕಿರಣವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಕೀಟಾಣುಗಳಿದ್ದ ಭಾರತದ ಕೃಷಿ ಸಂಕಷ್ಟಕ್ಕೆ ಈಡಾಗಿದೆ ಎಂದರು. ಕೃಷಿಗೆ ಸವಾಲು ಒಡ್ಡಿರುವ ಕೀಟಾಣುಗಳನ್ನು ನಿರ್ಮೂಲನಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ ಸಿಂಗ್‌, ಕೀಟಾಣುಗಳ ಉಪಟಳಕ್ಕೆ ಶಾಶ್ವತ ಪರಿಹಾರವೊಂದನ್ನು ಕಂಡು ಹಿಡಿಯುವಂತೆ ಕೃಷಿ ವಿಜ್ಞಾನಿಗಳಿಗೆ ಕರೆ ನೀಡಿದರು.

ಕೀಟಾಣುಗಳ ನಿರ್ಮೂಲನ ಸಾಧ್ಯವಾಗದೆ ಹೋದಲ್ಲಿ ಜಾಗತಿಕ ವಾಣಿಜ್ಯ ಒಡ್ಡಿರುವ ಸವಾಲುಗಳನ್ನು ಎದುರಿಸುವಲ್ಲಿ ಭಾರತದ ಕೃಷಿ ವಿಫಲವಾಗುವುದು ಮಾತ್ರವಲ್ಲದೆ ಡಬ್ಲ್ಯುಟಿಓ ನಿಗದಿಪಡಿಸಿದ ಉತ್ತಮ ಗುಣಮಟ್ಟದ ಆಹಾರಧಾನ್ಯಗಳನ್ನು ಉತ್ಪಾದಿಸುವುದು ಕೂಡ ಸಾಧ್ಯವಾಗುವುದಿಲ್ಲ ಎಂದು ಸಿಂಗ್‌ ಎಚ್ಚರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+