Get Updates
Get notified of breaking news, exclusive insights, and must-see stories!

ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಾಗಿ ವಿ.ವಿ.ಭಾಸ್ಕರ್‌

ಬೆಂಗಳೂರು - ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಾಗಿ ಹಿರಿಯ ಐಪಿಎಸ್‌ ಅಧಿಕಾರಿ ವಿ.ವಿ. ಭಾಸ್ಕರ್‌ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.

ಪ್ರಸ್ತುತ ಸಿಓಡಿ ಮಹಾ ನಿರ್ದೇಶಕರಾಗಿರುವ ಭಾಸ್ಕರ್‌ ಅವರನ್ನು ಈ ತಿಂಗಳ 31ರಿಂದ ಜಾರಿಗೆ ಬರುವಂತೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ ಹುದ್ದೆಗೆ ನೇಮಿಸಲಾಗಿದೆ. ಈಗ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಡಾ. ಕೆ. ಶ್ರೀನಿವಾಸನ್‌ ಅವರ ಅವಧಿ ಜುಲೈ 31ಕ್ಕೆ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಸೇವಾ ಹಿರಿತನದ ಆಧಾರದ ಮೇಲೆ ಈ ನೇಮಕ ಮಾಡಲಾಗಿದೆ.

1965ರಲ್ಲಿ ಭಾರತೀಯ ಪೊಲೀಸ್‌ ಸೇವೆಗೆ ಸೇರಿದ ಭಾಸ್ಕರ್‌, ಹಾಸನ, ಬಿಜಾಪುರ, ಬಳ್ಳಾರಿ, ಮಂಗಳೂರು ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಎಸ್‌ಪಿಯಾಗಿ ಪಶ್ಚಿಮ ಮತ್ತು ದಕ್ಷಿಣ ವಲಯಗಳ ಡಿಐಜಿಯಾಗಿ, ಮೈಸೂರು ನಗರ ಪೊಲೀಸ್‌ ಕಮಿಶನರ್‌ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಸಿಓಡಿ ಮಹಾನಿರ್ದೇಶಕ ಹುದ್ದೆಯ ಜೊತೆಗೆ ತರಬೇತಿ, ವಿಶೇಷ ಘಟಕ ಹಾಗೂ ಆರ್ಥಿಕ ಅಪರಾಧಗಳ ಇಲಾಖೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಭಾಸ್ಕರ್‌ ಮೇಲೆ ಚರ್ಚ್‌ ಸ್ಫೋಟ ಪ್ರಕರಣವೂ ಸೇರಿದಂತೆ ಅಂತರರಾಜ್ಯ ಮಟ್ಟದ ಹಲವು ಪ್ರಕರಣಗಳನ್ನು ಇತ್ಯರ್ಥ ಮಾಡುವ ಜವಾಬ್ದಾರಿಗಳಿವೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+