ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜುಲೈ 29 ರಂದು ಚೌಡಿಕೆ ಹಾಗೂ ತಮಟೆ ಕಲಾವಿದರ ಸಮಾವೇಶ
ಬೆಂಗಳೂರು : ದಲಿತರ ಪ್ರಾಚೀನ ಕಲೆಗಳಾದ ತಮಟೆ ಹಾಗೂ ಚೌಡಿಕೆ ಕಲಾವಿದರಿಗೆ ಪುನರ್ವಸತಿ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸುವ ‘ರಾಜ್ಯಮಟ್ಟದ ಚೌಡಿಕೆ ಹಾಗೂ ತಮಟೆ ಕಲಾವಿದರ ಸಮಾವೇಶ’ ಜುಲೈ 29 ರಂದು ನಡೆಯಲಿದೆ.
ಕಲಾವಿದರ ಸ್ಥಿತಿಗತಿಗಳನ್ನು ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು. ನಶಿಸಿ ಹೋಗುತ್ತಿರುವ ಚೌಡಿಕೆ- ತಮಟೆ ಜಾನಪದ ಕಲೆಗಳನ್ನು ಪೋಷಿಸಲು ಹಾಗೂ ಈ ಕಲಾವಿದರಿಗೆ ಪುನರ್ವಸತಿ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸ್ಮಮೇಳನದಲ್ಲಿ ಕೈಗೊಳ್ಳಲಾಗುವುದು.
ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು- ಕಾರ್ಯದರ್ಶಿ, ಕರ್ನಾಟಕ ಯುವ ಆದಿಜಾಂಬವ ಅಭಿವೃದ್ಧಿ ಸಂಘ, ಮೊದಲನೇ ಮಹಡಿ, ಬಾಪೂಜಿ ವಿದ್ಯಾರ್ಥಿ ನಿಲಯ, ಬೆಂಗಳೂರು - 23 ಈ ವಿಳಾಸವನ್ನು ರಜೆದಿನಗಳನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಸಂಪರ್ಕಿಸಬಹುದು. ಅಥವಾ ವಿವರಗಳಿಗೆ ನಾಲ್ಕು ರುಪಾಯಿ ಅಂಚೆ ಚೀಟಿ ಲಗತ್ತಿಸಿದ ಸ್ವ ವಿಳಾಸದ ಲಕೋಟೆ ಕಳುಹಿಸಬಹುದು.(ಇನ್ಫೋ ವಾರ್ತೆ)