ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ : ಉದ್ರಿಕ್ತ ಏಷ್ಯನ್‌ ಯುವಕರಿಂದ ದಾಂಧಲೆ- ಬೆಂಕಿ

By Staff
|
Google Oneindia Kannada News

* ಶ್ಯಾಮ್‌ ಭಾಟಿಯಾ

ಲಂಡನ್‌ : ಏಷ್ಯನ್‌ ಟ್ಯಾಕ್ಸಿ ಚಾಲಕನ ಮೇಲೆ ಬಿಳಿಯರ ಗುಂಪೊಂದು ಶನಿವಾರ ರಾತ್ರಿ ದಾಳಿ ನಡೆಸಿರುವ ಪ್ರಕರಣ ವಿಕೋಪಕ್ಕೆ ಹೋಗಿದೆ. ರೊಚ್ಚಿಗೆದ್ದಿರುವ ಏಷ್ಯನ್‌ ಯುವಕರು ನ್ಯೂಸ್‌ ಏಜೆಂಟ್‌ ಷಾಪ್‌, ಪಬ್‌, ಸೆಕ್ಸ್‌ ಷಾಪ್‌ ಹಾಗೂ ಕಾರು- ಮತ್ತೆರಡು ವಾಹನಗಳಿಗೆ ಬೆಂಕಿ ತಾಗಿಸಿದ್ದು, ಬುರ್‌ನ್ಲೆ ನಗರ ಪ್ರದೇಶದಲ್ಲಿ ಎರಡನೇ ದಿನವೂ ಹಿಂಸಾಚಾರ ಮುಂದುವರಿದಿದೆ.

ಭಾನುವಾರ ಕೆಲ ಉದ್ರಿಕ್ತ ಏಷ್ಯನ್‌ ಯುವಕರು ಕಲ್ಲು ಹಾಗೂ ಇಟ್ಟಿಗೆ ತೂರಾಟದಲ್ಲಿ ತೊಡಗಿದ್ದರು. ಇದೇ ಮಂದಿ ಬಿಳಿಯರು ಹಾಗೂ ಪೊಲೀಸರ ವಿರುದ್ಧ ಘರ್ಷಣೆಯಲ್ಲಿ ತೊಡಗಿದ್ದಾರೆ. ಈ ನಡುವೆ ಜನಾಂಗೀಯ ನಾಯಕರು, ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸದಂತೆ ಪೊಲೀಸರು ತಡವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಮುದಾಯದ ಪ್ರಮುಖ ನಾಯಕರಲ್ಲೊಬ್ಬರಾದ ಷಹೀದ್‌ ಮಲಿಕ್‌ ಹಿಂಸಾಚಾರವನ್ನು ಖಂಡಿಸಿದರೂ, ಇದು ಗಂಭೀರ ಪ್ರಚೋದನೆಗೆ ಉಂಟಾದ ಪ್ರತಿಕ್ರಿಯೆ ಎಂದು ಏಷ್ಯನ್‌ ಯುವಕರ ಕೋಪವನ್ನು ಬಣ್ಣಿಸುತ್ತಾರೆ. ದಾಳಿಗೊಳಗಾದ ಎರಡು ಪಬ್‌ಗಳು ಅನೈತಿಕ ಚಟುವಟಿಕೆಯ ತಾಣಗಳಾಗಿದ್ದವು ಎನ್ನುವುದನ್ನು ಮಲಿಕ್‌ ಎತ್ತಿ ತೋರಿಸುತ್ತಾರೆ.

ಪರಿಸ್ಥಿತಿ ಹತೋಟಿಯಲ್ಲಿ - ಪೊಲೀಸ್‌
ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟಪಡಿಸಿರುವ ಪೊಲೀಸ್‌ ವಕ್ತಾರೆಯಾಬ್ಬರು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಸ್ಥಳೀಯರನ್ನು ಬಂಧಿಸಿರುವುದಾಗಿ ಹೇಳಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌ ಗಸ್ತು ಮುಂದುವರಿದಿದ್ದು , ಅಧಿಕಾರಿಗಳು ಬಾಗಿಲು ಬಾಗಿಲು ಎಡತಾಕಿ ವಿಚಾರಣೆ ನಡೆಸುತ್ತಿದ್ದಾರೆ.

ಉತ್ತರ ಇಂಗ್ಲೆಂಡ್‌ನಲ್ಲಿ ಏಷ್ಯನ್ನರು ಹಾಗೂ ಬಿಳಿಯರ ನಡುವೆ ಇತ್ತೀಚಿನ ತಿಂಗಳುಗಳಲ್ಲಿ ನಡೆಯುತ್ತಿರುವ ನಾಲ್ಕನೇ ಘರ್ಷಣೆಯ ಪ್ರಕರಣ ಇದಾಗಿದೆ. ಗರ್ಭಿಣಿ ಏಷ್ಯನ್‌ ಮಹಿಳೆಯಾಬ್ಬರ ಮೇಲೆ ನಡೆದ ದಾಳಿಯ ಪ್ರಕರಣದಲ್ಲಿ ಕಳೆದ ಮೇ ತಿಂಗಳಲ್ಲಿ ಸುಮಾರು 500 ಬ್ರಿಟನ್‌- ಪಾಕಿಸ್ತಾನಿ ಯುವಕರು ಪೊಲೀಸರೊಂದಿಗೆ ಕೈ ಕೈ ಮಿಲಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

(ಐಎಎನ್‌ಎಸ್‌)

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X