ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಚಿಗನ್‌ ವಿ.ವಿ.ಯಿಂದ ವಿಶ್ವ ಮೌಲ್ಯಗಳ ಸಮೀಕ್ಷಾ ಸಂಶೋಧನೆ

By Staff
|
Google Oneindia Kannada News

ಬೆಂಗಳೂರು: ವಿಶ್ವದಲ್ಲಿ ಘಟಿಸುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಬದಲಾವಣೆಗಳ ಬಗ್ಗೆ ಹಾಗೂ ಈ ಬದಲಾವಣೆಯಲ್ಲಿ ಸಾರ್ವಜನಿಕರ ಸ್ಪಂದನವೇನು ಎಂಬುದನ್ನು ಅರಿಯಲು ಮಿಚಿಗನ್‌ ವಿಶ್ವವಿದ್ಯಾಲಯ 65 ರಾಷ್ಟ್ರಗಳಲ್ಲಿ ವಿಶ್ವ ಮೌಲ್ಯಗಳ ಸಮೀಕ್ಷೆ - ಸಂಶೋಧನೆ ನಡೆಸುವ ಬೃಹತ್‌ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.

ಈ ಯೋಜನೆಯಡಿಯಲ್ಲಿ ಭಾರತದ ಅಧ್ಯಯನ ನಡೆಸಲು ಬೆಂಗಳೂರು ವಿಶ್ವ ವಿದ್ಯಾಲಯ ಆಯ್ಕೆಯಾಗಿದೆ. ಭಾರತದ 40 ಆಯ್ದ ಜಿಲ್ಲೆಗಳಲ್ಲಿ ನಡೆಯುವ ಈ ಸಮೀಕ್ಷೆಯಲ್ಲಿ ಹದಿನೆಂಟು ವಿಶ್ವವಿದ್ಯಾಲಯಗಳ ಅಧ್ಯಾಪಕರು ಹಾಗೂ ಸಂಶೋಧಕರು ಭಾಗವಹಿಸುತ್ತಿದ್ದಾರೆ. ಈ ಸಂಶೋಧನೆ ನಡೆಸಲು ಮಿಚಿಗನ್‌ ವಿ.ವಿ. ಸಾಮಾಜಿಕ ಸಂಶೋಧನೆ ಸಂಸ್ಥೆ (ಐಎಸ್‌ಆರ್‌) ಜತೆ ಒಪ್ಪಂದಕ್ಕೆ ಬೆಂಗಳೂರು ವಿ.ವಿ.ಯ ಕುಲಪತಿ ಡಾ. ಕೆ. ಸಿದ್ಧಪ್ಪ ಸಹಿ ಹಾಕಿದ್ದಾರೆ.

ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ಸಿದ್ಧಪ್ಪ ಅವರು, ಮಿಚಿಗನ್‌ನಲ್ಲಿ ಇರುವಂತೆ ಬೆಂಗಳೂರು ವಿವಿಯಲ್ಲಿ ಕೂಡ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ಕೇಂದ್ರ ತೆರೆಯಲಾಗುವುದು. ಅದು ವಿವಿಧ ಕಲಾ ವಿಭಾಗಗಳ ನಡುವೆ ಸಮನ್ವಯ ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.

ಈ ಸಂಶೋಧನಾ ಕಾರ್ಯದ ಸಂಯೋಜಕರಾಗಿ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಸಂದೀಪ್‌ ಶಾಸ್ತ್ರೀ ಆಯ್ಕೆಯಾಗಿದ್ದಾರೆ. ಶಾಸ್ತ್ರೀ ಹಾಗೂ ಅವರ ಸಹೋದ್ಯೋಗಿಗಳು ಸೇರಿ ಸಿದ್ಧಪಡಿಸಿರುವ ಪ್ರಶ್ನಾವಳಿ ಸರ್ವತ್ರ ಮೆಚ್ಚುಗೆ ಗಳಿಸಿದೆ. ಇದು ಏಷ್ಯಾ ಸೇರಿದಂತೆ ತೃತೀಯ ಜಗತ್ತಿನ ದೇಶಗಳಿಗೂ ಮಾದರಿ ಪ್ರಶ್ನಾವಳಿ ಆಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X