ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜವಂಶ ದುರಂತದ ತನಿಖಾ ವರದಿ ಅಧ್ಯಯನಕ್ಕೆ ಸಮಿತಿ ರಚನೆ

By Staff
|
Google Oneindia Kannada News

ಕಠ್ಮಂಡು : ರಾಜವಂಶದ ದುರಂತ ಕುರಿತ ತನಿಖಾ ವರದಿಯನ್ನು ಅಧ್ಯಯನ ಮಾಡಲು ನೇಪಾಳ ಸರ್ಕಾರ ಉನ್ನತ ಮಟ್ಟದ ಸಮಿತಿಯಾಂದನ್ನು ರಚಿಸಿದೆ. ಮುಖ್ಯ ಕಾರ್ಯದರ್ಶಿ ಇದರ ನೇತೃತ್ವ ವಹಿಸುವರು.

ಅರಮನೆಯಲ್ಲಿ ಭದ್ರತೆ ಬಲಪಡಿಸುವುದು ಸೇರಿದಂತೆ ಇತರೆ ಮುಖ್ಯ ಹೆಜ್ಜೆಗಳನ್ನು ಇಡುವ ಕುರಿತು ಐದು ಸದಸ್ಯರ ಈ ಸಮಿತಿ ಇನ್ನೈದು ದಿನಗಳಲ್ಲಿ ವರದಿ ಸಲ್ಲಿಸಲಿದೆ ಎಂದು ನೇಪಾಳ ರೇಡಿಯೋ ವರದಿ ಮಾಡಿದೆ. ಮುಖ್ಯ ಕಾರ್ಯದರ್ಶಿ ಅಲ್ಲದೆ ರಕ್ಷಣಾ, ವಿದೇಶೀ ವ್ಯವಹಾರ, ವಾರ್ತಾ ಮತ್ತು ಸಂವಹನೆ ಖಾತೆ ಮಂತ್ರಿಗಳು ಸಮಿತಿಯಲ್ಲಿದ್ದಾರೆ. ಮುಖ್ಯ ನ್ಯಾಯಾಧೀಶ ಕೆ.ಪಿ.ಉಪಾಧ್ಯಾಯ ನೇತೃತ್ವದ ಸಮಿತಿ ಜೂನ್‌ 13ರಂದು ಅರಮನೆ ದುರಂತದ ಬಗ್ಗೆ ತನಿಖಾ ವರದಿಯನ್ನು ಪ್ರಕಟಿಸಿತ್ತು.

13ನೇ ದಿನದ ಕಾರ್ಯಕ್ಕೆ ಅರಮನೆ ಸಜ್ಜು : ದಿವಂಗತ ರಾಜ ಬೀಪೇಂದ್ರ ಹಾಗೂ ಯುವರಾಜ ದೀಪೇಂದ್ರ ಅವರ 13ನೇ ದಿನದ ಶ್ರಾದ್ಧ ಕಾರ್ಯಗಳಿಗೆ ನಾರಾಯಣ್‌ಹಿಟಿ ಅರಮನೆ ಸಜ್ಜಾಗುತ್ತಿದೆ. ಈವರೆಗೆ ಅರಮನೆಯಲ್ಲಿನ ಧ್ವಜ ಅರ್ಧ ಮಟ್ಟದಲ್ಲಿ ಹಾರುತ್ತಿದ್ದು , ಶನಿವಾರ ಮಧ್ಯಾಹ್ನ 1 ಗಂಟೆಯಿಂದ ಸ್ತಂಭದ ತುತ್ತ ತುದಿಯಲ್ಲಿ ಧ್ವಜ ಹಾರಲಿದೆ. ದೊರೆ ಜ್ಞಾನೇಂದ್ರ, ಪ್ರಧಾನಿ ಗಿರಿಜಾ ಪ್ರಸಾದ್‌ ಕೊಯಿರಾಲ, ನೇಪಾಳದ ಹೆಸರಾಂತ ಕುಟುಂಬಗಳು 13ನೇ ದಿನದ ಕಾರ್ಯಗಳಲ್ಲಿ ಭಾಗವಹಿಸುವರು.

(ಏಜೆನ್ಸೀಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X