ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆ.ವ್ಯಾ. ಸಾಮರ್ಥ್ಯದ 207 ಯೋಜನೆಗಳಿಗೆ ಕೆಪಿಟಿಸಿಎಲ್‌ ಅಸ್ತು

By Staff
|
Google Oneindia Kannada News

ಬೆಂಗಳೂರು : ಸಾಂಪ್ರದಾಯಿಕ ಶಕ್ತಿ ಮೂಲಗಳಿಂದ 2481 ಮೆಗಾ ವ್ಯಾಟ್‌ ಸಾಮರ್ಥ್ಯದ ವಿದ್ಯುತ್‌ ಉತ್ಪಾದಿಸುವ 207 ಯೋಜನೆಗಳಿಗೆ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್‌) ಹಸಿರು ನಿಶಾನೆ ತೋರಿದೆ.

10 ವರ್ಷದಲ್ಲಿ ಸಾಧಿಸಬೇಕಾದ್ದಕ್ಕೆ 5 ವರ್ಷ ಸಾಕು : ಗುರುವಾರ ಸುದ್ದಿಗಾರರೊಡನೆ ಮಾತಾಡುತ್ತಿದ್ದ ಕೆಪಿಟಿಸಿಎಲ್‌ ಅಧ್ಯಕ್ಷ ವಿ.ಪಿ.ಬಳಿಗಾರ್‌ ಈ ವಿಷಯ ತಿಳಿಸಿದರು. ಸರ್ಕಾರ ಈಗ ನಿಗದಿಪಡಿಸಿರುವ ಸಾಮರ್ಥ್ಯದ ವಿದ್ಯುತ್‌ನಲ್ಲಿ ಪ್ರತಿಶತ 10ರಷ್ಟನ್ನು ಇನ್ನು ಹತ್ತು ವರ್ಷಗಳಲ್ಲಿ ಉತ್ಪಾದಿಸಬೇಕು. ಆದರೆ ನಿಗಮ ಅದನ್ನು ಐದೇ ವರ್ಷಗಳಲ್ಲಿ ಸಾಧಿಸಲಿದೆ. ಪ್ರಸ್ತುತ ಸಾಂಪ್ರದಾಯಿಕವಲ್ಲದ 40 ಯೋಜನೆಗಳಿಂದ 261.7 ಮೆಗಾವ್ಯಾಟ್‌ ಸಾಮರ್ಥ್ಯದ ವಿದ್ಯುತ್‌ ಉತ್ಪಾದಿತವಾಗುತ್ತಿದೆ ಎಂದರು.

1200 ಕೋಟಿಯಿದ್ದ ಬಾಕಿಯನ್ನು 720 ಕೋಟಿಗೆ ತಂದಿದ್ದಾರೆ
ಮೂರು ಖಾಸಗಿ ಕಂಪನಿಗಳೊಡನೆ ವಿದ್ಯುತ್‌ ಖರೀದಿ ಒಪ್ಪಂದಕ್ಕೆ (ಪಿಪಿಎ) ಸಹಿ ಹಾಕಿದ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು. ಇದೇ ವೇಳೆ ಪ್ರಾದೇಶಿಕ ವಹಿವಾಟು ಕೇಂದ್ರಗಳೊಡನೆ ನಿಗಮದ ಒಪ್ಪಂದವನ್ನು 2001-2002ನೇ ಸಾಲಿಗೆ ನವೀಕರಿಸಿದರು. ಕಳೆದ ವರ್ಷ ನಿಗಮ 1200 ಕೋಟಿ ರುಪಾಯಿ ವಿದ್ಯುತ್‌ ಬಾಕಿ ತೀರಿಸಬೇಕಿತ್ತು. ಈ ವರ್ಷ 720 ಕೋಟಿ ರುಪಾಯಿ ಬಾಕಿ ಉಳಿದಿದೆ. ಈ ಪೈಕಿ ಪ್ರತಿಶತ 70ರಷ್ಟನ್ನು ನಿಗಮ ಆದಷ್ಟು ಬೇಗ ತೀರಿಸಲಿದೆ ಎಂದು ಬಳಿಗಾರ್‌ ತಿಳಿಸಿದರು.

ಬರುವ ವರ್ಷ ಪ್ರಾದೇಶಿಕ ಕೇಂದ್ರಗಳ ಸ್ವಾಯತ್ತತೆ : ಹೊಸ ಒಪ್ಪಂದದನ್ವಯ ಪ್ರತಿ ಯೂನಿಟ್‌ ವಿದ್ಯುತ್‌ಗೆ ತಗಲುವ ವೆಚ್ಚ ಪ್ರತಿಶತ 10ರಷ್ಟು ಹೆಚ್ಚಳವಾಗಲಿದೆ. ಯೂನಿಟ್‌ಗೆ 3.01 ರುಪಾಯಿ ಇದ್ದದ್ದು 3.16 ರುಪಾಯಿಗಳಷ್ಟಾಗಲಿದೆ. ಐದು ಪ್ರಾದೇಶಿಕ ವಹಿವಾಟು ಕೇಂದ್ರಗಳ ನಡುವಿನ ಒಪ್ಪಂದ ಈ ವರ್ಷವೇ ಕೊನೆಯಾಗಲಿದೆ. ಮುಂದಿನ ವರ್ಷದಿಂದ ಅವು ಸ್ವಾಯತ್ತವಾಗಲಿದ್ದು, ಮುಖ್ಯ ಎಂಜಿನಿಯರುಗಳು 2000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಹಾಗೂ ವಿತರಣೆ ಕುರಿತಂತೆ ಸ್ವತಂತ್ರ ಅಧಿಕಾರ ಪಡೆಯಲಿದ್ದಾರೆ ಎಂದು ಹೇಳಿದರು.

ಹಳ್ಳಿಗರಿಗೆ ರಾತ್ರಿ ಹೊತ್ತು ವಿದ್ಯುತ್‌ : ಮಂಗಳೂರು, ಗುಲ್ಬರ್ಗಾ, ಹುಬ್ಬಳ್ಳಿ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ರಾತ್ರಿ ವೇಳೆ 8 ತಾಸುಗಳ ಕಾಲ ಎಡಬಿಡದೆ ವಿದ್ಯುತ್‌ ಪೂರೈಸಲು ಬಳಿಗಾರ್‌ ಶತಾಯಗತಾಯ ಯತ್ನಿಸುತ್ತಿದ್ದಾರೆ. ಈ ಪ್ರಯತ್ನದಲ್ಲಿ 76.4 ಪ್ರತಿಶತ ಯಶಸ್ಸು ಸಿಕ್ಕಿದೆ. ಇನ್ನು 3 ತಿಂಗಳಲ್ಲಿ ಇದು ಶೇ.90ರಷ್ಟಾಗಲಿದೆ.

ಒಡಂಬಡಿಕೆ ಮಾಡಿಕೊಂಡಿರುವ ಕಂಪನಿಗಳು- ದೂದ್‌ ಗಂಗಾ ಕೃಷ್ಣ ಸಹಕಾರ ಸಕ್ಕರೆ ಕಾರ್ಖಾನೆ ನಿಯಮಿತ, 24 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಚಿಕ್ಕೋಡಿಯ ಸಾಂಪ್ರದಾಯಿಕ ಕಂಪನಿ, ಮಿನಿ ಜಲ ವಿದ್ಯುತ್‌ ಯೋಜನೆಗಳು- 12 ಮೆಗಾವ್ಯಾಟ್‌ ಸಾಮರ್ಥ್ಯದ ಕೊಡಗು ಪವರ್‌ ಪ್ರೆೃವೇಟ್‌ ಲಿಮಿಟೆಡ್‌, ಕೊಡಗಿನ ಮಲ್ಲಹಳ್ಳಿ ಗ್ರಾಮದಲ್ಲಿ 4 ಮೆಗಾವ್ಯಾಟ್‌ ವಿದ್ಯುತ್‌ ತಯಾರಿಸುವ ಪುಷ್ಪಗಿರಿ ಪವರ್‌ ಪ್ರೆೃವೇಟ್‌ ಲಿಮಿಟೆಡ್‌. ಒಪ್ಪಂದಕ್ಕೆ ಸಹಿ ಹಾಕಿದ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್‌ ಖಾತೆ ಸಚಿವ ವೀರ್‌ಕುಮಾರ್‌ ಪಾಟೀಲ್‌ ಹಾಜರಿದ್ದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X