Get Updates
Get notified of breaking news, exclusive insights, and must-see stories!

ಹೊಸ ವಿಳಾಸದಲ್ಲಿ ಇಂದಿರಾಗಾಂಧಿ ಮುಕ್ತ ವಿ.ವಿ. ವೆಬ್‌ಸೈಟ್‌

ನವದೆಹಲಿ : ಇಂದಿರಾಗಾಂಧೀ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (IGNOU) ದ ವೆಬ್‌ಸೈಟ್‌ ಶುಕ್ರವಾರದಿಂದ ಹೊಸ ವಿಳಾಸದಲ್ಲಿ ಲಭ್ಯವಾಗಲಿದೆ. ವಿಶ್ವವಿದ್ಯಾಲಯದ ಹಾಲಿ ವೆಬ್‌ಸೈಟ್‌ www.ignou.org ನಲ್ಲಿರುವ ಎಲ್ಲ ಮಾಹಿತಿಗಳನ್ನೂ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುವ ಹೊಸ ವಿನ್ಯಾಸದ www.ignou.ac.in ಎಂಬ ಹೆಸರಿನ ವೆಬ್‌ಸೈಟ್‌ಗೆ ವರ್ಗಾಯಿಸಲಿದೆ.

ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಈ ವೆಬ್‌ಸೈಟ್‌ ಅನ್ನು ವಿನ್ಯಾಸಗೊಳಿಸಲಾಗಿದೆ, ಹೊಸ ವೆಬ್‌ಸೈಟ್‌ ಗ್ರಾಹಕ ಸ್ನೇಹಿಯಾಗಿದೆ ಎಂದು ಇಂದಿರಾಗಾಂಧೀ ಮುಕ್ತ ವಿಶ್ವ ವಿದ್ಯಾಲಯದ ಪ್ರಕಟಣೆ ತಿಳಿಸಿದೆ. ಹೊಸ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಯು ತನಗೆ ಬೇಕಾದ ಕೋರ್ಸ್‌ನ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಪಡೆಯಬಹುದಾಗಿದೆ ಎಂದೂ ಅದು ಬಣ್ಣಿಸಿದೆ.

ಮುಕ್ತ ವಿಶ್ವವಿದ್ಯಾಲಯದ ಪರೀಕ್ಷಾ ವೇಳಾಪಟ್ಟಿ, ಫಲಿತಾಂಶಗಳ ವಿವರ ಎಲ್ಲವೂ ವೆಬ್‌ಸೈಟ್‌ನಲ್ಲಿ ಲಭ್ಯ. ಅಲ್ಲದೆ ವಿದ್ಯಾರ್ಥಿಗಳ ಸಮಸ್ಯೆಗೂ ಈ ವೆಬ್‌ಸೈಟ್‌ ಸ್ಪಂದಿಸುತ್ತದೆ. ಸಮಸ್ಯೆಗಳಷ್ಟೇ ಅಲ್ಲ ವಿದ್ಯಾರ್ಥಿಗಳು ಹೊಸ ಆಲೋಚನೆ ಅಥವಾ ಸಲಹೆಗಳೇನಾದರೂ ಇದ್ದಲ್ಲಿ ಅದನ್ನೂ ನಮ್ಮನ್ನು ಸಂಪರ್ಕಿಸಿ ಎಂಬ ಲಿಂಕ್‌ನಲ್ಲಿ ದಾಖಲಿಸಬಹುದು ಎಂದು ಇಗ್ನೋ ಪ್ರಕಟಣೆ ತಿಳಿಸಿದೆ.

(ಯು.ಎನ್‌.ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+