ಜುಲೈ 25 ರಂದು ದೇಶಾದ್ಯಂತ ಸರ್ಕಾರಿ ನೌಕರರ ಸಂಪು
ನವದೆಹಲಿ : ಖಾಸಗೀಕರಣ, ಆಡಳಿತದ ಗಾತ್ರ ಸಂಕುಚನೆ ಹಾಗೂ ಈಗಿರುವ ಸವಲತ್ತುಗಳಿಗೆ ಕತ್ತರಿ ಹಾಕುವುದನ್ನು ವಿರೋಧಿಸಿ 75 ಲಕ್ಷಕ್ಕೂ ಹೆಚ್ಚು ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ಜುಲೈ 25 ರಂದು ದೇಶಾದ್ಯಂತ ಒಂದು ದಿನದ ಸಂಪು ಹೂಡಲು ನಿಶ್ಚಯಿಸಿದ್ದಾರೆ.
ಜುಲೈ 18ರಂದು ಖಾಸಗೀಕರಣ ವಿರೋಧಿ ದಿನವೆಂದು ಆಚರಿಸಲಾಗುವುದು. ಅಂದು ದೇಶಾದ್ಯಂತ ಖಾಸಗೀಕರಣ ವಿರೋಧಿಸಿ ಜಾಥಾಗಳನ್ನು ನಡೆಸಲಾಗುವುದು. ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ (ಎಐಎಸ್‌ಜಿಇಎಫ್) ಹಾಗೂ ಕೇಂದ್ರ ಸರ್ಕಾರಿ ನೌಕರರ ಒಕ್ಕೂಟ (ಸಿಜಿಇ ಅಂಡ್ ಡಬ್ಲ್ಯುಎಸ್) ದ ಜಂಟಿ ಸಭೆಯಲ್ಲಿ ಸೋಮವಾರ ಈ ನಿರ್ಣಯ ಕೈಗೊಳ್ಳಲಾಯಿತು.
ಎಐಎಸ್‌ಜಿಇಎಫ್ ಪ್ರಧಾನ ಕಾರ್ಯದರ್ಶಿ ಸುಕೋಮಲ್ ಸೇನ್ ಹಾಗೂ ಸಿಜಿಇ ಅಂಡ್ ಡಬ್ಲ್ಯುಎಸ್ ಪ್ರಧಾನ ಕಾರ್ಯದರ್ಶಿ ಎಸ್.ಕೆ.ವ್ಯಾಸ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹಾಗೂ ವಿಶ್ವ ಬ್ಯಾಂಕ್‌ನ ನಿರ್ದೇಶನಗಳು ಸರ್ಕಾರಿ ನೌಕರರ ಸವಲತ್ತುಗಳನ್ನು ಕಸಿಯುತ್ತಿವೆ. ಅನುಭವವನ್ನು ಗಾಳಿಯಲ್ಲಿ ತೂರುತ್ತಿವೆ ಎಂದು ಇಬ್ಬರೂ ಕಾರ್ಯದರ್ಶಿಗಳು ದೂರಿದರು.
ಸರ್ಕಾರಿ ಸಂಸ್ಥೆಗಳ ಗಾತ್ರವನ್ನು ಗಣನೀಯವಾಗಿ ಕುಗ್ಗಿಸುವುದು, ಎಲ್‌ಟಿಸಿ ಸವಲತ್ತು ರದ್ದುಪಡಿಸುವುದು, ಸರ್ಕಾರಿ ಜಾಗೆಗಳ ಬಾಡಿಗೆ ದರ ಹೆಚ್ಚಿಸುವುದು, ಭವಿಷ್ಯ ನಿಧಿಯ ವಾರ್ಷಿಕ ಬಡ್ಡಿ ದರವನ್ನು ಪ್ರತಿಶತ 2ರಷ್ಟು ಇಳಿಸುವುದು, ಕೈಗಾರಿಕಾ ವ್ಯಾಜ್ಯಗಳ ಕಾಯ್ದೆಗೆ ತಿದ್ದುಪಡಿ ತಂದು 1000ಕ್ಕಿಂತ ಕಡಿಮೆ ನೌಕರರಿರುವ ಘಟಕಗಳಲ್ಲಿ ಯಾವುದೇ ಮುನ್ಸೂಚನೆ ಕೊಡದೆ ನೌಕರರನ್ನು ಕೆಲಸದಿಂದ ತೆಗೆದು ಹಾಕುವ ಅಧಿಕಾರವನ್ನು ಆಡಳಿತಕ್ಕೆ ಕೊಡುವುದು, ಒಪ್ಪಂದಕ್ಕೆ ಸಂಬಂಧಿಸಿದ ಕಾನೂನುಗಳಿಗೆ ತಿದ್ದುಪಡಿ ಮಾಡಿ, ಸ್ಥಿರ/ಶಾಶ್ವತ ನೌಕರರನ್ನು ಒಪ್ಪಂದಕ್ಕೆ ಒಳಪಡಿಸುವುದು- ಮೊದಲಾದ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರ ತನ್ನ ಬಜೆಟ್- 2001 ದಲ್ಲಿ ಹೊರಹಾಕಿತ್ತು. ಸಂಸತ್ತು ಇವನ್ನು ಅನುಮೋದಿಸಿದೆ.
ಈ ಹಿನ್ನೆಲೆಯಲ್ಲಿ ಎಷ್ಟೋ ಸರ್ಕಾರಿ ಆಡಳಿತಗಳು ಬಜೆಟ್ಟಿನ ಈ ಅಂಶಗಳನ್ನು ಜಾರಿ ಮಾಡುವತ್ತ ಹೆಜ್ಜೆ ಇಟ್ಟಿವೆ. ಡಿಎ- ಎಲ್‌ಟಿಸಿ ಖೋತಾ ಶುರುವಾಗಿದೆ. ನಿಗಮೀಕರಣದ ಆತಂಕ ಕಾಣಿಸುತ್ತಿದೆ. ಕೆಲವು ಹುದ್ದೆಗಳನ್ನೇ ರದ್ದು ಮಾಡಲಾಗುತ್ತಿದೆ. ಇನ್ನು ಕೆಲವೆಡೆ ಅಗತ್ಯವಿದ್ದರೂ ಭರ್ತಿ ಮಾಡಿಕೊಳ್ಳುವುದನ್ನು ನಿಲ್ಲಿಸಲಾಗಿದೆ. ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಸರ್ಕಾರಿ ನೌಕರರು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
(ಯುಎನ್‌ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications