ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಹೆದ್ದಾರಿ ಯೋಜನೆಗಳಿಗೆವಿಶ್ವಬ್ಯಾಂಕ್‌ನಿಂದ 1620 ಕೋಟಿ ರು.

By Staff
|
Google Oneindia Kannada News

ವಾಷಿಂಗ್ಟನ್‌ : ಕರ್ನಾಟಕದ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳ ಯೋಜನೆಗೆ ಸಂಬಂಧಿಸಿದಂತೆ 1620 ಕೋಟಿ ರುಪಾಯಿಗಳ ಸಾಲವನ್ನು ವಿಶ್ವಬ್ಯಾಂಕ್‌ ಶುಕ್ರವಾರ ಪ್ರಕಟಿಸಿದೆ.

ರಸ್ತೆಗಳ ಅಗಲೀಕರಣ- ಉತ್ತಮೀಕರಣ- ರಸ್ತೆ ಸಂಪರ್ಕ ಜಾಲ ರೂಪಿಸುವಿಕೆ ಕಾಮಗಾರಿಗಳು ಯೋಜನೆಯಲ್ಲಿ ಸೇರಿದ್ದು, ಅಗತ್ಯ ತಾಂತ್ರಿಕ ನೆರವನ್ನು ವಿಶ್ವಬ್ಯಾಂಕ್‌ ರಾಜ್ಯಕ್ಕೆ ಒದಗಿಸಲಿದೆ. ವಿಶ್ವಬ್ಯಾಂಕ್‌ ಒದಗಿಸುವ ನೆರವಿಗೆ ಸಂಬಂಧಿಸಿದ ಯೋಜನೆಯಲ್ಲಿ ಸುಮಾರು 1 ಸಾವಿರ ಕಿ.ಮೀ ಉದ್ದದ ರಸ್ತೆ ಅಗಲಗೊಳ್ಳಲಿದ್ದು , 1399 ಕಿಮೀ ಉದ್ದದ ರಸ್ತೆ ರಿಪೇರಿ ಕಾಮಗಾರಿ ನಡೆಯಲಿದೆ.

ಕರ್ನಾಟಕ ರೋಡ್‌ ಏಜನ್ಸಿ ಹಾಗೂ ಸಾರ್ವಜನಿಕ ಕೆಲಸಗಳ ಇಲಾಖೆಯಲ್ಲಿ ಬಂಡವಾಳ ಹೂಡಲು ಉದ್ದೇಶಿಸಿರುವ ವಿಶ್ವಬ್ಯಾಂಕ್‌, ಈ ಇಲಾಖೆಗಳ ಸಿಬ್ಬಂದಿಗೆ ತರಬೇತಿ ನೀಡಲು ಮತ್ತು ರಸ್ತೆ ಸುರಕ್ಷತೆ- ನಿರ್ವಹಣೆ ಪದ್ಧತಿಗಳನ್ನು ಆಧುನೀಕರಿಸಲು ನಿರ್ಧರಿಸಿದೆ. ಗ್ರೇಸ್‌ ಪೀರಿಯೆಡ್‌ 5 ವರ್ಷ ಸೇರಿದಂತೆ 20 ವರ್ಷಗಳಲ್ಲಿ ವಿಶ್ವಸಂಸ್ಥೆಯ ನೆರವು ರಾಜ್ಯಕ್ಕೆ ದೊರೆಯಲಿದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X