ಶ್ರಾದ್ಧದ ಬಗ್ಗೆ ಪಿಎಚ್‌ಡಿ ಪಡೆದೋರಏನನ್ನೋದು? ತಿಥಿ ಪ್ರೊಫೆಸರ್ರಾ..
ಮೈಸೂರು : ಜ್ಯೋತಿಷ್ಯ ಶಾಸ್ತ್ರದ ಕವಲುಗಳಾದ ತಿಥಿ- ಶ್ರಾದ್ಧದ ವಿಷಯದಲ್ಲಿ ಸಂಶೋಧನೆ ನಡೆಸಿ, ಯಾರಾದರೂ ಪಿಎಚ್‌ಡಿ ಪಡೆದರೆ ಅವರನ್ನು ಏನೆಂದು ಕರೆಯೋದು ? ಈ ಪ್ರಶ್ನೆ ಎದುರಾದದ್ದು ಒಂದಾನೊಂದು ಕಾಲದಲ್ಲಿ ದಲಿತ ಕಾವ್ಯದಲ್ಲಿಯೇ ಉಸಿರಾಡುತ್ತಿದ್ದರೆಂದು ನಂಬಲಾಗಿರುವ ಕವಿ ಸಿದ್ಧಲಿಂಗಯ್ಯನವರಿಗೆ. ಪ್ರಶ್ನೆ ಹುಟ್ಟಿಸಿಕೊಂಡ ಅವರೇ ಉತ್ತರವನ್ನು ಹುಡುಕಿಕೊಂಡರು- ‘ತಿಥಿ ಪ್ರೊಫೆಸರ್!’
ಸಿದ್ಧಲಿಂಗಯ್ಯನವರ ತಿಥಿ ಪ್ರೊಫೆಸರ್ ಎನ್ನುವ ಕಲ್ಪನೆ ಚೆನ್ನಾಗಿದೆಯಲ್ಲವಾ. ಆದರೆ, ಆ ಹೆಸರಿನಿಂದ ವ್ಯಕ್ತಿಯನ್ನು ಕರೆಯೋದಕ್ಕೆ ಅವರಿಗೆ ಇಷ್ಟವಿಲ್ಲ . ನಮಗೇನು ಮರ್ಯಾದೆಯಿಲ್ವಾ ಆಗಂತ ಕರೆಯೋಕೆ ಅನ್ನುತ್ತಾರೆ ಸಿದ್ಧಲಿಂಗಯ್ಯ. ಅಂದಹಾಗೆ, ಸಿದ್ಧಲಿಂಗಯ್ಯನವರು ಸ್ನಾತಕೋತ್ತರ ಪದವಿಯಲ್ಲಿ ಜ್ಯೋತಿಷ್ಯವನ್ನು ಅಧ್ಯಯನ ವಿಷಯವಾಗಿ ಅಳವಡಿಸಲು ಹೊರಟಿರುವ ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಈ ಮಾತುಗಳನ್ನಾಡುತ್ತಿದ್ದರು. ಅವರ ಪ್ರಕಾರ- ಸರ್ಕಾರದ ಈ ಕ್ರಮ ಸಮಾಜವನ್ನು ಹಿಂದಕ್ಕೊಯ್ಯುವ ಪ್ರಯತ್ನ .
ಅಂತೆ ಕಂತೆಗಳ ಪುರಾಣವದು : ಜ್ಯೋತಿಷ್ಯ ಶಾಸ್ತ್ರಕ್ಕೆ ತನ್ನದೇ ಆದ ಅಸ್ತಿತ್ವವಿಲ್ಲ ಅನ್ನುವುದು ಸಿದ್ಧಲಿಂಗಯ್ಯನವರ ಆಪಾದನೆ . ಯಾವುದೇ ವೈಜ್ಞಾನಿಕ ಸಿದ್ಧಾಂತಗಳ ತಳಹದಿಯಿಲ್ಲ ದ ಜ್ಯೋತಿಷ್ಯ ಅಂತೆ ಕಂತೆಗಳ ಪುರಾಣ. ಇಂಥಾ ವಿಷಯವನ್ನು ವಿಶ್ವ ವಿದ್ಯಾಲಯಗಳಲ್ಲಿ ನಮ್ಮ ವಿದ್ಯಾರ್ಥಿಗಳು ಕಲಿಯಬೇಕಾ ? ಆ ಮೂಲಕ ಸಮಾಜ ಮತ್ತೆ ಮೌಢ್ಯತೆಯ ಪ್ರಪಂಚಕ್ಕೆ ಜಾರಬೇಕಾ ? ಎಂದು ಸಿದ್ಧಲಿಂಗಯ್ಯ ಪಾಯಿಂಟು ಹಾಕುತ್ತಾರೆ.
ವಿಶ್ವ ವಿದ್ಯಾಲಯಗಳಲ್ಲಿ ಭವಿಷ್ಯವನ್ನು ಅಧ್ಯಯನ ವಿಷಯವಾಗಿಸುವ ಸರ್ಕಾರದ ಉದ್ದೇಶಕ್ಕೆ ಸಿದ್ಧಲಿಂಗಯ್ಯನವರು ಮಾತ್ರವಲ್ಲದೆ, ವಿವಿಧ ಗಣ್ಯರಿಂದ ಭಾರೀ ವಿರೋಧ ಎದುರಾಗಿರುವುದನ್ನು ಇಲ್ಲಿ ನೆನೆಯಬಹುದು. ಬುಧವಾರ ತಾನೇ ಉನ್ನತ ಶಿಕ್ಷಣ ಸಚಿವ ಡಾ.ಜಿ. ಪರಮೇಶ್ವರ್ ಇಂಥಾ ಮೂಢನಂಬಿಕೆಯನ್ನು ಪ್ರಚೋದಿಸುವ ಕ್ರಮಕ್ಕೆ ತಮ್ಮ ವಿರೋಧವಿದೆ ಎಂದಿದ್ದರು.
ಭವಿಷ್ಯ ಅಂದ್ರೆ, ಅದು ಈ ರೀತಿ ಇರುತ್ತೆ
ಜ್ಯೋತಿಷ್ಯವನ್ನು ಲೇವಡಿ ಮಾಡಿದ ಸಿದ್ಧಲಿಂಗಯ್ಯನವರು, ತಮ್ಮ ಲೇವಡಿಗೆ ಸಹಕಾರಿಯಾಗುವಂಥಾ ಸೊಗಸಾದ ಕಥೆಯಾಂದನ್ನೂ ಹೇಳಿದರು. ನೀವೂ ಓದಿಬಿಡಿ-
ಒಂದೂರು. ಇಬ್ಬರು ಪ್ರೇಮಿಗಳು. ಮದುವೆಯಾಗೋಣ ಎಂದು ಹುಡುಗಿ ಒತ್ತಡ ತಂದಾಗ, ಮೊದಲು ಶಾಸ್ತ್ರ ಕೇಳುವುದು ಒಳ್ಳೆಯದೆನಿಸಿತು ಹುಡುಗನಿಗೆ. ಸರಿ, ಊರಿನ ಪ್ರಮುಖ ಜ್ಯೋತಿಷಿಗಳ ಬಳಿ ಹೋದ ಹುಡುಗ ತನ್ನ ಸಮಸ್ಯೆಯನ್ನು ಹೇಳಿಕೊಂಡು, ಮದುವೆಯಾಗಬಹುದಾ ಅಂದ. ಪ್ರಾರಂಭದಲ್ಲೇ ದಕ್ಷಿಣೆ ಮಡಗಿಸಿಕೊಂಡ ಜ್ಯೋತಿಷಿ, ಲೆಕ್ಕಾಚಾರ ಮುಗಿಸಿ- ನೀವು ಮದುವೆಯಾಗಬಹುದು. ಆದರೆ, ಮದುವೆಯಾದ ನಂತರ ಇಲ್ಲಿದ್ದರೆ ತೊಂದರೆ ಬರುವುದರಿಂದ ಬೇರೆ ಊರಿಗೆ ಹೋಗಿ ಎಂದು ಸಲಹೆಯಿತ್ತ . ಹುಡುಗ ಹೊರಟು ಹೋದ. ಭವಿಷ್ಯಕಾರ ಸಂಜೆಯ ಹೊತ್ತಿಗೆ ಮನೆಯಲ್ಲಿ ನೋಡಿದರೆ ಮಗಳೇ ನಾಪತ್ತೆ !
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications