Get Updates
Get notified of breaking news, exclusive insights, and must-see stories!

ಚಾಮರಾಜನಗರ : ಕರಳುಬೇನೆಗೆ ಒಂದೇಕುಟುಂಬದ ನಾಲ್ವರ ಬಲಿ

ಚಾಮರಾಜನಗರ : ತಾಲ್ಲೂಕಿನ ಹಂದ್ರಕಳ್ಳಿ ಗ್ರಾಮದ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಐವರು ಕರಳುಬೇನೆಗೆ ತುತ್ತಾಗಿದ್ದಾರೆ. ಇದರಿಂದ ತಾಲ್ಲೂಕಿನಲ್ಲಿ ಕರಳುಬೇನೆಗೆ ಬಲಿಯಾದವರ ಸಂಖ್ಯೆ 7ಕ್ಕೇರಿದೆ.

ಹಂದ್ರ ಕಳ್ಳಿಯ ಕಲ್ಲುಕುಟಿಗರಾದ ತಿರುಪತಿ, ಆತನ ಪತ್ನಿ ಗೌರಮ್ಮ, ಮಕ್ಕಳಾದ ನಾಗರಾಜು, ಗುರುಸ್ವಾಮಿ ಹಾಗೂ ಹೊಂಗನೂರು ಗ್ರಾಮದ ಕಮಲಮ್ಮ ಎಂಬುವರು ಕರಳುಬೇನೆಯಿಂದ ಮೃತಪಟ್ಟಿದ್ದಾರೆ. ತಿರುಪತಿ ಸಂಸಾರ ಗ್ರಾಮದ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿತ್ತು. ಕುಡಿಯಲು ಹಳ್ಳವೊಂದರ ನೀರನ್ನು ಬಳಸಿ, ಸಕಾಲಕ್ಕೆ ಚಿಕಿತ್ಸೆ ಪಡೆಯದ ಕಾರಣ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹೇಳಿದ್ದಾರೆ.

ಅದೇ ಗ್ರಾಮದ ನಂಜನಾಯ್ಕ, ನಂಜಮ್ಮಣ್ಣಿ, ಮಾದಯ್ಯ ಹಾಗೂ ಗಫಾರ್‌ ಷರೀಫ್‌ ಕೂಡ ಕರಳುಬೇನೆಯಿಂದ ಬಳಲುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+