ಮಾವೋ ನಾಡಿನಲ್ಲಿ ಮೊದಲ ಬಾರಿಗೆಕರ್ನಾಟಕ ಸಂಗೀತ ಸುಧೆ !
ಬೀಜಿಂಗ್ : ಅಮೇರಿಕಾದಲ್ಲಿರುವ ಪ್ರಸಿದ್ಧ ಕೊಳಲು ವಾದಕ ತಂಜಾವೂರು ವಿಶ್ವನಾಥನ್ ಹಾಗೂ ಆತನ ಅಮೇರಿಕನ್ ಪತ್ನಿ ಇದೇ ಮೊದಲ ಬಾರಿಗೆ ಚೀನಾದಲ್ಲಿ ಕರ್ನಾಟಕ ಸಂಗೀತ ಕಚೇರಿ ನಡೆಸಿಕೊಟ್ಟರು. ಚೀನಾದಲ್ಲಿ ಶಾಸ್ತ್ರೀಯ ಸಂಗೀತವನ್ನು ಉತ್ತೇಜಿಸುವ ಅಂಗವಾಗಿ ಈ ಕಚೇರಿ ನಡೆಯಿತು.
ವೆಸ್ಲಿಯನ್ ವಿಶ್ವ ವಿದ್ಯಾಲಯದ ಸಂಗೀತ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ವಿಶ್ವನಾಥನ್ ಅವರು ಪ್ರಸ್ತುತ, ಪ್ರತಿಷ್ಠಿತ ಸೆಂಟ್ರಲ್ ಕನ್ಸರ್‌ವೇಟರಿ ಆಫ್ ಮ್ಯೂಸಿಕ್ (ಸಿಸಿಎಂ) ಆಹ್ವಾನದ ಮೇರೆಗೆ ಚೀನಾದಲ್ಲಿದ್ದಾರೆ. ಷಾಂಗಾಯ್ ನಗರದಲ್ಲಿ ಭಾಷಣ ಹಾಗೂ ಕಚೇರಿಗಳನ್ನು ಅವರು ನಡೆಸಿಕೊಟ್ಟಿದ್ದಾರೆ ಎಂದು ಸಿಸಿಎಂನ ಪ್ರಾಧ್ಯಾಪಕ ರಿkುೕ ಮಿಂಗ್ ತಿಳಿಸಿದ್ದಾರೆ.
ಕೊಳಲು ನುಡಿಸಿದ ವಿಶ್ವನಾಥನ್‌ರಿಗೆ ಅವರ ಪತ್ನಿ ಜೋಸೆಫ ಕಾರ್‌ಮ್ಯಾಕ್ ತಮ್ಮ ತಂಪುರದೊಂದಿಗೆ ಜೊತೆಯಾದರು. ಎಥನೊ ಮ್ಯೂಸಿಕಾಲಜಿ ವಿಷಯದಲ್ಲಿ ಜೋಸೆಫ ಪಿಎಚ್‌ಡಿ ಪದವಿ ಗಳಿಸಿದ್ದಾರೆ. ವಿಶ್ವನಾಥನ್- ಜೋಸೆಫ ದಂಪತಿಗಳಿಗೆ ‘ಮೃದಂಗಂ ಮೈಂಡ್ ಥೀಸಿಸ್’ ಬರೆದಿರುವ ಡೇವಿಡ್ ನೆಲ್ಸನ್, ಮೃದಂಗಂ ಸಾಥ್ ನೀಡಿದುದು ಕಾರ್ಯಕ್ರಮದ ವಿಶೇಷ .
ವರ್ಲ್ಡ್ ಮ್ಯೂಸಿಕ್ ಸೊಸೈಟಿ ಆಫ್ ಚೀನಾದ ಅಧ್ಯಕ್ಷ ಚೆನ್ ಅವರಿಗಂತೂ ವಿಶ್ವನಾಥನ್ ಅವರ ಕಚೇರಿಯ ಬಗ್ಗೆ ಇನ್ನಿಲ್ಲದ ಹೆಮ್ಮೆ . ವಿಶ್ವನಾಥನ್‌ರ ಚೀನಾ ಭೇಟಿ ಕೇವಲ ಭಾರತದ ಶಾಸ್ತ್ರೀಯ ಸಂಗೀತದ ಬಗೆಗಿನ ಅರಿವನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ, ಭಾರತದ ಸಮೃದ್ಧ ಸಂಸ್ಕೃತಿಯ ಒಳನೋಟಗಳನ್ನು ಅರಿಯಲು ಸಹಾಯಕವಾಗಿದೆ ಎಂದು ಅವರು ಬಣ್ಣಿಸಿದರು.
ಚೀನಾ ಪ್ರವಾಸದ ಬಗ್ಗೆ ವಿಶ್ವನಾಥನ್ ಖುಷಿಯಾಗಿದ್ದಾರೆ. ಇಲ್ಲಿನ ಆತ್ಮೀಯ ವಾತಾವರಣ- ಹೃದಯಪೂರ್ವಕ ಸ್ವಾಗತವನ್ನು ನಾನು ನಿರೀಕ್ಷಿಸಿರಲಿಲ್ಲ . ವಿದ್ಯಾರ್ಥಿಗಳು ಅನೇಕ ರೀತಿ ಪ್ರಶ್ನಿಸಿದರು. ಅವರ ಜ್ಞಾನ ನನ್ನನ್ನು ಪ್ರಭಾವಿತನನ್ನಾಗಿಸಿತು ಎಂದು ಅವರು ಹೇಳಿದರು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications