Get Updates
Get notified of breaking news, exclusive insights, and must-see stories!

ನಿಮ್ಮೂರ ರಸ್ತೆಗೆ ದೊಡ್ಡವರ ಹೆಸರಿಡುತ್ತೀರಾ! ಸ್ವಲ್ಪ ತಾಳಿ ...

ಬೆಂಗಳೂರು : ಇದು ಓಣಿಯ ರಸ್ತೆಯಾ, ಸಾಯಿಸುತೆ ಹೆಸರಾಗಬಹುದು. ರಸ್ತೆಯ ಉದ್ದ ಮೂರು ಮೀಟರ್ರಾ, ದೊಡ್ಡರಂಗೇಗೌಡರ ಹೆಸರು ಅಡ್ಡಿಯಿಲ್ಲ . ಕಿಲೋ ಮೀಟರ್‌ ಉದ್ದದ ರಸ್ತೆಯಾ, ಅನಂತಮೂರ್ತಿ ಹೆಸರು ಆದೀತು .. ಈ ಎಲ್ಲ ಮೀಮಾಂಸೆಗೆ ಕಾರಣವೇನಪ್ಪಾ ಅಂದರೆ-

ದೊಡ್ಡವರ ಹೆಸರನ್ನು ಚಿಕ್ಕಪುಟ್ಟ ರಸ್ತೆಗಳಿಗಿಡಬೇಡಿ. ಒಂದೆರಡು ಕಿಮೀ ಉದ್ದವಿರುವ ರಸ್ತೆಗಳಿಗಾದರೂ ಹೆಸರಿಟ್ಟರೆ ದೊಡ್ಡವರ ಮರ್ಯಾದೆ ಉಳಿದೀತು ಎಂದು ನಗರದ ಮಾಜಿ ಮೇಯರ್‌ ಜಿ. ನಾರಾಯಣ, ನಾಮಕರಣ ನಾಯಕರಿಗೆ ಅಪ್ಪಣೆ ಕೊಡಿಸಿರುವುದು.

ಹನುಮಂತ ನಗರದಲ್ಲಿನ ಬಡಾವಣೆಯ ತಿರುವಿನ ರಸ್ತೆಯಾಂದಕ್ಕೆ ಗೋಕಾಕ್‌ ಅವರ ಹೆಸರನ್ನಿಟ್ಟಿರುವ ಬಗ್ಗೆ ನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು. ಚಿಕ್ಕರಸ್ತೆಗಳಿಗೆ ನಾಡಿನ ಗಣ್ಯರ ಹೆಸರನ್ನಿಡುವುದು ಸರಿಯಲ್ಲ ಅನ್ನುವುದು ಅವರ ಸ್ಪಷ್ಟ ಅಭಿಪ್ರಾಯ. ಡಾ.ಸಿದ್ಧಯ್ಯ ಪುರಾಣಿಕ ಮಾರ್ಗ, ಡಾ.ಎಂ.ಸಿ. ಮೋದಿ ರಸ್ತೆ ಹಾಗೂ ಸ್ವಾಮಿ ವಿವೇಕಾನಂದ ಉದ್ಯಾನವನ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ರೆಸಿಡೆನ್ಸಿ ರಸ್ತೆಗೆ ಕಾರಿಯಪ್ಪನವರ ಹೆಸರನ್ನಿಟ್ಟಿರುವುದೂ ಪ್ರಯೋಜನವಾಗಿಲ್ಲ . ಎಲ್ಲ ಆಹ್ವಾನ ಪತ್ರಿಕೆಗಳಲ್ಲೂ ರೆಸಿಡೆನ್ಸಿ ರಸ್ತೆ ಎಂದೇ ಇರುತ್ತೆ . ಇಂಥಾ ಸೂಕ್ಷ್ಮ ವಿಚಾರ ಮಹಾನಗರ ಪಾಲಿಕೆಗೆ ಯಾಕರ್ಥವಾಗುತ್ತಿಲ್ಲ ಎಂದು ನಾರಾಯಣ ಪ್ರಶ್ನಿಸಿದರು. ಮಾಜಿ ಮೇಯರ್‌ ಅವರ ಮಾತುಗಳನ್ನು ಹಾಲಿ ಮೇಯರ್‌ ಪ್ರೇಮಾ ಕಾರ್ಯಪ್ಪ ಮೌನವಾಗಿ ಆಲಿಸುತ್ತ ಕೂತಿದ್ದರು.

ನಾರಾಯಣ ಅವರ ನಂತರ ಮಾತನಾಡಿದ ಜನಪ್ರಿಯ ಸಂಶೋಧಕ ಎಂ.ಚಿದಾನಂದ ಮೂರ್ತಿ, ರಸ್ತೆಗಳಿಗಿಟ್ಟಿರುವ ದೊಡ್ಡವರ ಹೆಸರುಗಳು ಅಧ್ವಾನವಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ಮಹಾಕವಿ ಕುವೆಂಪು ರಸ್ತೆಯನ್ನು ಎಂ.ಕೆ.ಕೆ. ರಸ್ತೆ ಎಂದು ಕರೆಯಲಾಗುತ್ತಿದೆ. ಕನ್ನಡಕ್ಕಾಗಿ ಕೈ ಎತ್ತು ಎಂದ ಕುವೆಂಪು ಅವರಿಗೆ ಸಿಕ್ಕ ಬಹುಮಾನವಿದು ಎಂದು ಚಿದಾನಂದಮೂರ್ತಿ ವಿಷಾದಿಸಿದರು.

ರೇಷ್ಮೆ ಸಚಿವ ಎಂ.ಮಹದೇವ್‌, ಶಾಸಕ ರಾಮಲಿಂಗಾರೆಡ್ಡಿ , ಉಪ ಮಹಾಪೌರ ಬಿ.ಎಸ್‌.ಪುಟ್ಟರಾಜು, ಮಾಜಿ ಮೇಯರ್‌ ಜೆ.ಹುಚ್ಚಪ್ಪ ಹಾಗೂ ಪಾಲಿಕೆ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+