ಸರಕಾರಿ ಗ್ರಂಥಾಲಯದಲ್ಲಿ ಪ್ರಿಯಾಂಕಳ ಪ್ರೇಮ ಪ್ರಕರಣ
ಗುಲ್ಬರ್ಗಾ : ಚಲನಚಿತ್ರವೊಂದರಲ್ಲಿ ಚಿತ್ರನಟ ದಿವಂಗತ ಮಾನು, ಪದೇ ಪದೇ ಲೈಬ್ರರೀಲಿ ಇಲಿ ಇದೆ ಎಂದು ಹೇಳಿದ್ದು ನಿಮಗೂ ನೆನಪಿದೆ ಅನ್ಸತ್ತೆ. ಆದ್ರೆ ಈಗ ಲೈಬ್ರರೀಲಿ ಇಲಿಗಳ ಜತೆಗೆ ಅಶ್ಲೀಲ ಸಾಹಿತ್ಯದ ಪುಸ್ತಕಗಳೂ ಸಿಗತ್ತೆ. ಕ್ಷಮಿಸಿ, ಇದು ನಾವು ಮಾಡ್ತಿರೋ ಆರೋಪ ಅಲ್ಲ, ಸ್ವತಃ ಗ್ರಂಥಾಲಯ ಹಾಗೂ ವಯಸ್ಕರ ಶಿಕ್ಷಣ ಸಚಿವರೇ ಕಣ್ಣಾರೆ ಕಂಡ ದೃಶ್ಯ.
ಸೋಮವಾರ ಗುಲ್ಬರ್ಗಾದ ಮಿನಿ ವಿಧಾನಸೌಧ ಕಟ್ಟಡದಲ್ಲಿರುವ ಕೇಂದ್ರ ಗ್ರಂಥಾಲಯದ ಆಡಳಿತ ಕಚೇರಿಯ ಸಿಬ್ಬಂದಿಗೆ ಗ್ರಹಚಾರ ಕಾದಿತ್ತು. ಸಚಿವ ಬಾಬು ರಾವ್ ಚವ್ಹಾಣ್ ಇಲ್ಲಿಗೆ ದಿಢೀರ್ ಭೇಟಿ ನೀಡಿದರು. ಒಪ್ಪ ಓರಣವಾಗಲ್ಲದಿದ್ದರೂ, ಖರೀದಿಸಿ, ಸಂಗ್ರಹಿಸಿ ಇಡಲಾಗಿದ್ದ ಪುಸ್ತಕಗಳ ರಾಶಿಯತ್ತ ಸಚಿವರು ಕಣ್ಣು ಹಾಯಿತು. ಸಿಬ್ಬಂದಿಯ ಗ್ರಹಚಾರಕ್ಕೆ ಸಚಿವರ ಕಣ್ಣಿಗೆ ಬಿದ್ದದ್ದೆಲ್ಲಾ ಅಶ್ಲೀಲ ಪುಸ್ತಕಗಳೇ.
ಪ್ರಿಯಾಂಕಳ ಪ್ರೇಮ ಪ್ರಕರಣ, ಪ್ರೇಮಿಗಳ ಜೋಕುಗಳು... ಇತ್ಯಾದಿ ಇತ್ಯಾದಿ. ಸಚಿವರಿಗೆ ಕೋಪ ಬಂತು. ಏನ್ರೀ ಎಲ್ಲ ಅಶ್ಲೀಲ ಪುಸ್ತಕಗಳನ್ನೇ ತಂದು ತುಂಬ್ಕೊಂಡಿದ್ದೀರಿ? ಈ ಪುಸ್ತಕ ಖರೀದಿಸಲು ನಿಮಗೆ ಅಧಿಕಾರ ಕೊಟ್ಟೋರು ಯಾರು? ಇಂಥ ಪುಸ್ತಕ ಓದೋ ಮಕ್ಳ ಮನಸ್ಸಿನ ಮೇಲೆ ಎಂಥ ಪರಿಣಾಮ ಬೀರತ್ತೆ ಅನ್ನೋ ಪರಿಜ್ಞಾನ ನಿಮಗೆ ಇದೆಯಾ? ತಗಂಡ್ ಬನ್ರೀ ಪುಸ್ತಕ ಕೊಂಡ ಆರ್ಡರ್ ಕಾಪಿ. ಹೀಗೆ ಬೈಗುಳ ಹಾಗೂ ಪ್ರಶ್ನೆಗಳ ಸುರಿಮಳೆಯನ್ನೇಗರೆದರು.
ಇಷ್ಟೇಲ್ಲಾ ಆದ ಮೇಲೆ ತಮ್ಮ ಮನಸ್ಸಿನ ಸಮಾಧಾನಕ್ಕೆ ಅ.ನಾ.ಕೃ, ತ.ರಾ.ಸು, ಲಂಕೇಶ್, ಪೂರ್ಣಚಂದ್ರ ತೇಜಸ್ವೀ, ಅನಂತ ಮೂರ್ತಿ, ಕೆ.ವಿ. ಪುಟ್ಟಪ್ಪ, ಭೈರಪ್ಪನವರ ಪುಸ್ತಕ ಸಿಗತ್ತೇನೋ ಅಂತ ಹುಡುಕಾಡಿದ ಸಚಿವರಿಗೆ ಅಂತಹ ಪುಸ್ತಕಗಳಾವುವೂ ಕಣ್ಣಿಗೆ ಬೀಳಲೇ ಇಲ್ಲ. ಜೈ ಸಾಹಿತ್ಯ ಸರಸ್ವತಿ.
(ಇನ್‌ಫೋ ವರದಿ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications