ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಕಂಡೀಷನ್‌ ಸಿಟಿಯಲ್ಲೂ ಏರಿದೆ ಬಿಸಿಲು

By Staff
|
Google Oneindia Kannada News

ಬೆಂಗಳೂರು : ಏರ್‌ ಕಂಡೀಷನ್‌ ಸಿಟಿ ಬೆಂಗಳೂರಲ್ಲೂ ಬಿಸಿಲು ಏರುತ್ತಿದೆ. ಹವಾಮಾನ ವೀಕ್ಷಣಾಲಯದ ವರದಿಯ ಪ್ರಕಾರ, ಭಾನುವಾರ ಬೆಂಗಳೂರು ಹಾಗೂ ಸುತ್ತ ಮುತ್ತ ನಿರ್ಮಲ ಆಕಾಶ ಇದ್ದು, ದಿನದ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್‌ ತಲುಪುವ ಸಾಧ್ಯತೆ ಇದೆ.

ಶುಕ್ರವಾರ ಬೆಂಗಳೂರಲ್ಲಿ 34ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇತ್ತು. ಶನಿವಾರ ಅದು ಇನ್ನು ಕೊಂಚ ಏರಿದ ಅನುಭವ. ರಾಜ್ಯದಲ್ಲಿ ಒಟ್ಟಾರೆಯಾಗಿ ಒಣಹವೆಯೇ ಮುಂದುವರಿದಿತ್ತು. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನ ಏರಿತ್ತು. ದಕ್ಷಿಣ ಒಳನಾಡಿನಲ್ಲಿ ಕೂಡ ತಾಪಮಾನ ಏರಿಕೆ ಆಗುವ ನಿರೀಕ್ಷೆ ಇದೆ.

ರಾಜ್ಯದ ಅತಿ ಹೆಚ್ಚು ತಾಪಮಾನ (44 ಡಿಗ್ರಿ ಸೆಲ್ಸಿಯಸ್‌) ರಾಯಚೂರಿನಲ್ಲಿ ದಾಖಲಾಗಿತ್ತು. ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ಸಾಮಾನ್ಯವಾಗಿ ಒಣಹವೆ ಇರಲಿದ್ದು, ತಾಪಮಾನ ಗಣನೀಯವಾಗಿ ಏರುವ ಸೂಚನೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X