ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಸಣ್ಣ ಪುಟ್ಟ ಸಂಗತಿಗಳೇ ಬದುಕಿಗೆ ಹೊಸ ದಾರಿ ತೋರುವ ದೀವಿಗೆಗಳು ಎಂಬುದನ್ನು ಮರೆಯಬೇಡಿ. ಹುಲ್ಲು ಕಡ್ಡಿಯೂ ಸಮಯದಲ್ಲಿ ನೆರವಿಗೆ ಬರುತ್ತದೆ.ವೃಷಭ : ದುಡ್ಡಿದ್ರೇ ದೊಡ್ಡಪ್ಪ, ಚಿಕ್ಕಪ್ಪ ಎಲ್ಲ ಅನ್ನೋ ಸಮಾಜದಲ್ಲೂ, ಮಾನವೀಯತೆಗೂ ಕೊಂಚ ಬೆಲೆ ಇದೆಯಲ್ಲ. ದುಡ್ಡೇ ಸರ್ವಸ್ವ ಅಲ್ಲ. ಮನೆಯವರೊಂದಿಗೂ ಕೊಂಚ ಸಮಯ ಕಳೆಯುವುದು ಉತ್ತಮ.
ಮಿಥುನ : ಮಕ್ಕಳೊಂದಿಗೆ ಕಲೆತು, ಕಾಲ ಕಳೆಯಲು ಇಂದು ನಿಮಗೆ ಶುಭದಿನ. ಎಲ್ಲ ಕೆಲಸವನ್ನೂ ಬದಿಗೊತ್ತಿ ಆನಂದವನ್ನು ಅಪ್ಪಿಕೊಳ್ಳಿ.
ಕಟಕ : ನಿಮ್ಮ ದುಃಖವನ್ನು ಇತರರೊಂದಿಗೆ ಹಂಚಿಕೊಳ್ಳಿ. ಮನಸ್ಸು ಹಗುರವಾಗುತ್ತದೆ. ದುಃಖ ಸದಾ ಇರುವುದಿಲ್ಲ. ನಾಳೆ ಒಳ್ಳೆಕಾಲ ಬಂದೇ ಬರುತ್ತದೆ. ಮನಸ್ಸು ಗಟ್ಟಿ ಮಾಡಿಕೊಳ್ಳಿ.
ಸಿಂಹ : ನಿಮ್ಮ ಗ್ರಹಗತಿಗಳ ದೆಸೆಯಿಂದ ಕೆಲಸದ ಒತ್ತಡ ಕಾಡುತ್ತಿದೆ. ನಿಮ್ಮ ಶ್ರದ್ಧೆಗೆ ಬೆಲೆ ಬಂದೇ ಬರುತ್ತದೆ. ಚಿಂತಿಸದೆ, ಕಾರ್ಯಪ್ರವೃತ್ತರಾಗಿ.
ಕನ್ಯಾ : ನೀವು ಆಗಬೇಕು ಎಂದುಕೊಂಡಿದ್ದನ್ನು ಸಾಧಿಸುವ ಕಾಲ ಇದು. ಎಲ್ಲ ನಿಮ್ಮ ಇಚ್ಛೆಯಂತೆಯೇ ನಡೆಯಲಿದೆ. ಸಂಕೋಚಪಡದೆ, ಹಿಂದೆ ಮುಂದೆ ನೋಡದೆ ದಿಟ್ಟ ಹೆಜ್ಜೆ ಇಡಿ.
ತುಲಾ : ನೀವೇನೂ ಅಸಹಾಯಕರಲ್ಲ. ಆದರೆ, ನಿಮ್ಮ ನಿಜವಾದ ಶಕ್ತಿಯ ಅರಿವು ನಿಮಗಿಲ್ಲ. ಮನಸ್ಸಿದ್ದರೆ ಮಾರ್ಗ ಎಂಬುದನ್ನು ಮರೆಯದಿರಿ. ಜಯ ಇರುವತನಕ ಭಯಬೇಡ.
ವೃಶ್ಚಿಕ : ಇಲ್ಲ ಸಲ್ಲದ ಕುಹಕಗಳಿಂದ ಗೆಳೆಯರು ನಿಮ್ಮ ಮನಸ್ಸನ್ನು ತುಂಬಾ ನೋಯಿಸಿದ್ದಾರೆ. ಎಲ್ಲರನ್ನೂ ಕ್ಷಮಿಸಿ ನೀವು ದೊಡ್ಡವರಾಗಿದ್ದೀರಿ. ನಾಯಿ ಬೊಗಳಿದರೆ ದೇವಲೋಕ ಹಾಳಲ್ಲ ಬಿಡಿ.
ಧನಸ್ಸು : ಎಡವಿದ ಕಾಲೇ ಎಡವೋದು, ಕಷ್ಟ ಬಂದ ಮನುಷ್ಯನಿಗೇ ಕಷ್ಟ ಬರೋದು. ನಿಮ್ಮ ಪಾಡೂ ಇಂದು ಹಾಗೇ ಆಗಿದೆ. ಕುಲದೇವರ ಪೂಜೆಯಿಂದ ಸಂಕಷ್ಟ ಪರಿಹಾರ.
ಮಕರ : ಕವಲು ದಾರಿಯ ಪ್ರಯಾಣ ಎಂದೂ ಹಿತವಲ್ಲ. ರಾಜಮಾರ್ಗದಲ್ಲಿ ಸಾಗುವ ಕಲೆ ಕರಗತ ಮಾಡಿಕೊಳ್ಳಿ. ನಿಮ್ಮ ನೇರನುಡಿ, ಬುದ್ಧಿಚಾತುರ್ಯಕ್ಕೆ ಸರಿಸಾಟಿಯಿಲ್ಲ. ಅದರ ಸಂಪೂರ್ಣ ಬಳಕೆಗೆ ಶ್ರಮ ಅಗತ್ಯ.
ಕುಂಭ : ನೀವು ಎಲ್ಲರಂತಲ್ಲ. ನಿಮ್ಮ ಜಾತಕವೇ ಹಾಗೆ. ಇದ್ದದ್ದು ಇದ್ದಂತೆ ಹೇಳಿ ಕೆಟ್ಟವರಾಗುತ್ತೀರಿ. ತಾಳಿದವನು ಬಾಳಯಾನು. ಶಕ್ತಿಯಿಂದ ಆಗದ ಕೆಲಸ ಯುಕ್ತಿಯಿಂದ ಸಾಧಿಸಿ.
ಮೀನ : ಕೋಪ, ಸಿಟ್ಟು, ಸೆಡವು ಬೇಡ. ಇಂದಾದರೂ ಕೊಂಚ ಶಾಂತಚಿತ್ತರಾಗಿ, ಎಲ್ಲರ ಮನಗೆಲ್ಲಿರಿ. ನಿಮಗಾಗಿ ಸುಂದರವಾದ ಸಂಜೆಯಾಂದು ಕಾದಿದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications