Get Updates
Get notified of breaking news, exclusive insights, and must-see stories!

ಭದ್ರತಾ ಮಂಡಳಿ ಖಾಯಂ ಸದಸ್ಯತ್ವಕ್ಕೆ ಭಾರತ ಪ್ರಬಲ ಸ್ಪರ್ಧಿ

ಮಾಸ್ಕೋ : ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕಾಗಿ ದೀರ್ಘ ಕಾಲದಿಂದ ಹಕ್ಕು ಮಂಡಿಸುತ್ತಿರುವ ಭಾರತದ ವಾದವನ್ನು ರಷ್ಯಾ ಪರೋಕ್ಷವಾಗಿ ಬೆಂಬಲಿಸಿದ್ದು , ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕೆ ಕಣದಲ್ಲಿರುವ ರಾಷ್ಟ್ರಗಳಲ್ಲಿ ಭಾರತ ಬಲಿಷ್ಠ ಸ್ಪರ್ಧಿ ಎಂದು ಒಪ್ಪಿಕೊಂಡಿದೆ .

ರಷ್ಯಾದ ವಿದೇಶಾಂಗ ಸಚಿವಾಲಯದ ವಾರ್ತಾ ಮತ್ತು ಪ್ರಸಾರ ಖಾತೆ ನಿರ್ದೇಶಕ ಅಲೆಕ್ಸಾಂಡರ್‌ ಯಕೊವೆಂಕೊ ಅವರು ದೈನಿಕವೊಂದಕ್ಕೆ ನೀಡಿರುವ ಅಭಿಪ್ರಾಯದಲ್ಲಿ ಈ ವಿಷಯ ತಿಳಿಸಿದ್ದಾರೆ. ಭದ್ರತಾಮಂಡಳಿಯ ಖಾಯಂ ಸದಸ್ಯತ್ವ ಹೊಂದಲು ಭಾರತ ಸಮರ್ಥ ಹಾಗೂ ಬಲಿಷ್ಠ ಅಭ್ಯರ್ಥಿ ಎಂದು ಅವರು ಬಣ್ಣಿಸಿದ್ದಾರೆ.

ಜಾಗತಿಕ ಸಮತೋಲನ ಕಾಪಾಡುವಲ್ಲಿ ಭದ್ರತಾ ಮಂಡಳಿ ಪರಿಣಾಮಕಾರಿ ಪಾತ್ರ ವಹಿಸಿದೆ. ಇದೇ ಪಾತ್ರವನ್ನು ಮುಂದಿನ ದಿನಗಳಲ್ಲೂ ವಹಿಸಲು ಅನುಕೂಲವಾಗುವಂತೆ ಹೊಸ ವಾಸ್ತವಾಂಶಗಳನ್ನು ಮಂಡಳಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಯಕೊವೆಂಕೊ ಅಭಿಪ್ರಾಯಪಟ್ಟಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+