ಸಂಸ್ಕರಿಸಿದ ಭಾರತೀಯ ಆಹಾರಕ್ಕೆ ಆಸ್ಟ್ರೇಲಿಯಾದಲ್ಲಿ ಭಾರಿ ಬೇಡಿಕೆ
ಕೊಲ್ಕತ್ತಾ : ಸಂಸ್ಕರಿಸಲಾದ ಭಾರತೀಯ ಆಹಾರ ಉತ್ಪನ್ನಗಳಿಗೆ ಆಸ್ಟ್ರೇಲಿಯಾದಲ್ಲಿ ಭಾರಿ ಬೇಡಿಕೆ ಇದೆ. ದಿನದಿಂದ ದಿನಕ್ಕೆ ಈ ಬೇಡಿಕೆ ಹೆಚ್ಚುತ್ತಲೇ ಇದೆ. ಸಂದರ್ಭದ ಲಾಭ ಪಡೆದು ಭಾರತೀಯ ಸಂಸ್ಕರಿತ ಆಹಾರ ತಯಾರಕರು ರಫ್ತು ಪ್ರಮಾಣ ಹೆಚ್ಚಿಸಿದರೆ, ಉಭಯ ದೇಶಗಳ ವ್ಯಾಪಾರ ವರ್ಧನೆ ಆಗಲಿದೆ ಎಂದು ಆಸ್ಟ್ರೇಲಿಯಾದ ಹಿರಿಯ ವ್ಯಾಪಾರ ಕಮಿಷನರ್ ರಿಚರ್ಡ್ ಕೊವಾಕ್ ಇಲ್ಲಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಎಲ್ಲ ಪ್ರದೇಶದ ಅಂಗಡಿಗಳಲ್ಲೂ ಸಂಸ್ಕರಿಸಲಾದ ಭಾರತೀಯ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದಕ್ಕೆ ಉತ್ತಮ ಸ್ಥಾನವೂ ಇದೆ. ಭಾರತದ ಆಹಾರ ಉದ್ದಿಮೆ ಈ ಬೇಡಿಕೆಯ ಸಂಪೂರ್ಣ ಲಾಭ ಪಡೆದರೆ, ವಹಿವಾಟು ದುಪ್ಪಟ್ಟು, ಮೂರ್ಪಟ್ಟು ಆಗಲಿದೆ ಎಂದು ಹೇಳಿದರು.
ಆಸ್ಟ್ರೇಲಿಯಾದಲ್ಲಿ ಕೇವಲ ಆಹಾರ ಪದಾರ್ಥಗಳಿಗಷ್ಟೇ ಅಲ್ಲ, ಭಾರತದ ಸಿದ್ಧ ಉಡುಪು ಹಾಗೂ ಕುಸುರಿ ಕೆಲಸದ ಲೋಹದ ಉತ್ಪನ್ನಗಳಿಗೂ ಬಂಬಾಟ್ ಬೇಡಿಕೆ ಇದೆ. 2000 ಸಾಲಿನಲ್ಲಿ ಭಾರತ - ಆಸ್ಟ್ರೇಲಿಯಾ ನಡುವಣ ವ್ಯಾಪಾರದ ಪ್ರಮಾಣದ ಒಟ್ಟು ಮೌಲ್ಯ 2.5 ಶತಕೋಟಿ ಡಾಲರ್ ಆಗಿತ್ತು. ಅದರಲ್ಲಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ರಫ್ತಾದ ವಸ್ತುವಿನ ಮೌಲ್ಯ 1.8 ಶತಕೋಟಿ, ಉಳಿದ 700 ದಶಲಕ್ಷ ಡಾಲರ್ ಮೊತ್ತದ ವಸ್ತು, ಸೇವೆ ಭಾರತದಿಂದ ಆಸ್ಟ್ರೇಲಿಯಾಕ್ಕೆ ರಫ್ತಾಗಿದೆ ಎಂದು ಅವರು ವಿವರಿಸಿದರು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications