Get Updates
Get notified of breaking news, exclusive insights, and must-see stories!

ಬೆಂಗಳೂರು : ಚಿತಾಗಾರ-250 ರು., ಪಾರ್ಕು-2 ರು., ಆಸ್ಪತ್ರೆ-100 ರು.

ಬೆಂಗಳೂರು : ಮೇ 1ನೇ ತಾರೀಖಿನಿಂದ ವಿದ್ಯುತ್‌ ಚಿತಾಗಾರದಲ್ಲಿ ಶವ ಸಂಸ್ಕಾರ ಮಾಡಲು 250 ರುಪಾಯಿ, ಪಾರ್ಕಿಗೆ ಹೋಗಲು 2 ರುಪಾಯಿ, ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಸೇರಲು 100 ರುಪಾಯಿ ಕೊಡಬೇಕು. ಅಂದಿನಿಂದ ರಾತ್ರಿ 11 ಗಂಟೆಯ ನಂತರ ಆಯ್ದ ರಸ್ತೆಗಳ ಒಂದು ಬದಿಯ ದೀಪಗಳನ್ನು ಆರಿಸಲಾಗುವುದು.

ಬೆಂಗಳೂರು ಮಹಾನಗರ ಪಾಲಿಕೆ ಬುಧವಾರ ಮಂಡಿಸಿದ 2001- 2002ನೇ ಸಾಲಿನ ಮುಂಗಡ ಪತ್ರದಲ್ಲಿ ಈ ವಿಷಯಗಳು ಹೊರಬಿದ್ದವು. ಮಹಾನಗರ ಪಾಲಿಕೆಯು ಏರಿಸಿರುವ ಹಾಗೂ ಹೊಸದಾಗಿ ವಿಧಿಸಿರುವ ಶುಲ್ಕಗಳ ಮೂಲಕ ಬರುವ ಹಣದಿಂದ ಅದರ ವರಮಾನ 919.49 ಕೋಟಿ ರುಪಾಯಿಗಳಷ್ಟಾಗಲಿದೆ.

ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಫಯಾಜ್‌ ಖಾನ್‌ ಕನ್ನಡದಲ್ಲಿದ ಮುಂಗಡಪತ್ರದ ಒಂದು ಪಂಕ್ತಿಯನ್ನು ತಡಬಡಾಯಿಸಿ ಓದಿದರು. 30 ಪುಟಗಳ ಮುಂಗಡಪತ್ರದ ಉಳಿದ ಭಾಗವನ್ನು ಸಮಿತಿಯ ಸದಸ್ಯ ನರಸಿಂಹಮೂರ್ತಿ ಓದಿದರು. ಈ ಮೊದಲು ವಿದ್ಯುತ್‌ ಚಿತಾಗಾರಗಳಲ್ಲಿ ಸೇವಾ ಶುಲ್ಕ 50 ರುಪಾಯಿ ಇತ್ತು.

ಯಾವ ಪಾರ್ಕುಗಳಿಗೆ ಶುಲ್ಕ : ಸ್ಯಾಂಕಿ ಟ್ಯಾಂಕ್‌, ಕೆನ್ಸಿಂಗ್‌ ಟೌನ್‌, ಹರಿಹರಗುಡ್ಡ, ಬನಶಂಕರಿ 2ನೇ ಹಂತ, ಬ್ಯೂಗಲ್‌ ರಾಕ್ಸ್‌ ಹಾಗೂ ಗಾಯತ್ರಿ ದೇವಿ ಉದ್ಯಾನವನಗಳ ಪ್ರವೇಶಕ್ಕೆ 2 ರುಪಾಯಿ ಶುಲ್ಕ ನಿಗದಿಗೊಳಿಸಲಾಗಿದೆ. 70 ವರ್ಷದ ಮೇಲ್ಪಟ್ಟವರು ಹಾಗೂ 3 ವರ್ಷದೊಳಗಿನ ಮಕ್ಕಳಿಗೆ ಇದರಲ್ಲಿ ರಿಯಾಯಿತಿ.

ಆಸ್ಪತ್ರೆ ಶುಲ್ಕ : ಸರ್ಕಾರಿ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ಸೇರಲು 100 ರುಪಾಯಿ ಶುಲ್ಕ ಕೊಡಬೇಕು. ಹೊರರೋಗಿಯಾಗಿ ಚಿಕಿತ್ಸೆ ಪಡೆಯಲು, ಮೊದಲ ಭೇಟಿಯಲ್ಲಿ 5 ಹಾಗೂ 2ನೇ ಭೇಟಿಯಲ್ಲಿ 1 ರುಪಾಯಿ ಶುಲ್ಕ ನೀಡಬೇಕು. ಇದರಲ್ಲೂ 70 ವರ್ಷ ಮೀರಿದ ವಯಸ್ಕರು ಹಾಗೂ 3 ವರ್ಷದೊಳಗಿನ ಮಕ್ಕಳಿಗೆ ವಿನಾಯಿತಿ ಉಂಟು.

11 ಗಂಟೆ ನಂತರ ಒಂದು ಬದಿಯ ರಸ್ತೆ ದೀಪ ಇಲ್ಲ : ಬೀದಿದೀಪಗಳ ನಿರ್ವಹಣೆ ವಗೈರೆ ವೆಚ್ಚದಲ್ಲಿ ಶೇ.90ರಷ್ಟು ಹೆಚ್ಚಾಗಿದೆ. ಈ ಕಾರಣ ಪ್ರಸ್ತುತ ಮಾಡಲಾಗುತ್ತಿರುವ ವೆಚ್ಚ ತಗ್ಗಿಸಲು ರಾತ್ರಿ 11 ಗಂಟೆಯ ನಂತರ ನಗರದ ಆಯ್ದ ಪ್ರದೇಶಳಲ್ಲಿ ಒಂದು ಬದಿಯ ದೀಪಗಳನ್ನು ನಂದಿಸಲಾಗುವುದು. 150 ವಾಟ್ಸ್‌ ದೀಪಗಳ ಬದಲಿಗೆ 40 ವ್ಯಾಟ್ಸ್‌ಗಳ ಫ್ಲೋರೋಸೆಂಟ್‌ ದೀಪಗಳನ್ನು ಅಳವಡಿಸಲಾಗುವುದು. ಜೊತೆಗೆ ಬೀದಿದೀಪಗಳಿಗೆ ಸ್ವಯಂಚಾಲಿತ ಸ್ವಿಚ್‌ಗಳನ್ನೂ ಅಳವಡಿಸಲಾಗುವುದು.

ಈ ಪಾರ್ಕುಗಳು ಖಾಸಗಿಯವರಿಗೆ : ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿರುವ 634 ಉದ್ಯಾನಗಳ ಪೈಕಿ ಲಕ್ಷ್ಮಣ್‌ರಾವ್‌ ಬುಲೈವಾರ್ಡ್‌ ಉದ್ಯಾನ, ವಿಮಾನ ನಿಲ್ದಾಣ ರಸ್ತೆಯ ಉದ್ಯಾನಗಳು ಹಾಗೂ ಎಸ್‌ಜೆಪಿ ಉದ್ಯಾನವನದ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿಕೊಡಲು ಪಾಲಿಕೆ ನಿರ್ಧರಿಸಿದೆ.

ಆರೋಗ್ಯ ಜಾಲ : ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ 12 ಲಕ್ಷ ರುಪಾಯಿ ಮೀಸಲಿಡಲಾಗಿದ್ದು, ಸ್ವಚ್ಛ ಬೆಂಗಳೂರು ಕಾರ್ಯಕ್ರಮದಡಿ ತಳ್ಳುವ ಗಾಡಿಗಳನ್ನು ಒದಗಿಸಲಾಗುವುದು. ನಾಗರಿಕರ ದೂರು ದಾಖಲಿಸಿಕೊಳ್ಳಲು ಆರೋಗ್ಯ ಜಾಲ ಎಂಬ ವೈರ್‌ಲೆಸ್‌ ಸಂಪರ್ಕ ಸಾಧನವನ್ನೂ ಪಾಲಿಕೆಯಲ್ಲಿ ಅಳವಡಿಸಿಕೊಳ್ಳಲಾಗುವುದು. ಮಳೆ ನೀರು ಹರಿಯುವ ಚರಂಡಿಗಳ ಹೂಳೆತ್ತಲು 1.5 ಕೋಟಿ ರುಪಾಯಿ ಮೀಸಲಿಡಲಾಗಿದೆ. ಹೊಸ ವಾರ್ಡ್‌ಗಳ ಅಭಿವೃದ್ಧಿಗೆ 18 ಕೋಟಿ ರುಪಾಯಿ ವಿನಿಯೋಗಿಸಲಾಗುವುದು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+