ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನಿಮ್ಮೆದೆಯಾಳಗಿರುವ ನಿರಾಸೆಯ ಸಣ್ಣ ಎಳೆ, ಬೇಜಾರುಗಳನ್ನು ಎಷ್ಟು ಮುಚ್ಚಿಟ್ಟುಕೊಂಡರೂ ನಿಮ್ಮವರು ಅದನ್ನು ಓದಿಕೊಂಡು ಬಿಡುತ್ತಾರೆ. ಕೊನೇ ಪಕ್ಷ ಆ ವಿಷಯದಲ್ಲಿ ನೀವು ದುರಾದೃಷ್ಟವಂತರು!ವೃಷಭ : ನಿಮ್ಮ ಮನೆಯವರಿಗೆ ಏನೆಲ್ಲಾ ವಿವರಿಸಿ ಹೇಳಬೇಕು, ಅವರನ್ನು ಕೂರಿಸಿ, ಅಕ್ಷರಕ್ಷರವನ್ನು ಬಿಡಿಸಿ ಬುದ್ಧಿ ಹೇಳಬೇಕು ಎಂಬ ನಿಮ್ಮ ಆಸೆ ಗಂಟಲಿಗಿಂತ ಆಚೆ ಬರುವುದಿಲ್ಲ. ಅದಕ್ಕೆಂದು ಮೂಡ್ ಕೆಡಿಸಿಕೊಳ್ಳಬೇಡಿ.
ಮಿಥುನ : ವ್ಯಾಪಾರದತ್ತ ಹೆಚ್ಚಿನ ಗಮನ ಕೊಡಬೇಡಿ. ಬಾಕಿ ಇಟ್ಟುಕೊಂಡಿರುವ ಕೆಲಸಗಳನ್ನು ಆದಷ್ಟು ಬೇಗನೇ ಪೂರೈಸುವುದು ಒಳ್ಳೆಯದು. ತಡವಾದಷ್ಟು ನಷ್ಟ ಹೆಚ್ಚು.
ಕಟಕ : ಹೇಳುವವರು ಹೇಳಲಿ ಬಿಡು ನಮಗೇನು ಎಂಬ ಧೋರಣೆ ಎಲ್ಲಾ ಸಂದರ್ಭದಲ್ಲಿಯೂ ನಿಮಗೆ ಅನ್ವಯವಾಗುವುದಿಲ್ಲ. ವಾಸ್ತವ ಹಾಗಿಲ್ಲವಲ್ಲ !
ಸಿಂಹ : ನಿಮ್ಮ ಲೆಕ್ಕಾಚಾರದ ಮೇಲೆಯೇ ನಿಮ್ಮ ಸಹೋದ್ಯೋಗಿಗಳು ಬದುಕುವುದಿಲ್ಲವಾದ್ದರಿಂದ ಕೆಲಸದ ವಿಷಯದಲ್ಲಿ ತುಂಬಾ ತಪ್ಪು ತಿಳಿದುಕೊಳ್ಳುತ್ತೀರಿ. ಕುಂಟುತ್ತಿರುವ ಯೋಜನೆಯ ಬಗ್ಗೆ ಗಮನವಿರಲಿ.
ಕನ್ಯಾ : ಇವತ್ತು ಶುಭ ದಿನ. ಮನೆಯಲ್ಲಿ ದೇವತಾ ಕಾರ್ಯಗಳತ್ತ ಹೆಚ್ಚಿನ ಗಮನ ಕೊಡುತ್ತೀರಿ. ಮನೆಯವರು ನಿಮ್ಮ ಬದಲಾದ ವರ್ತನೆಯನ್ನು ಕಂಡು ಖುಷಿಯಾಗುತ್ತಾರೆ.
ತುಲಾ : ಆಫೀಸಿನಲ್ಲಿರುವ ರಾಶಿ ಕೆಲಸಗಳ ತಲೆ ಬುಡ ಅರ್ಥವಾಗದೇ ತೊಳಲಾಡುತ್ತೀರಿ. ಇನ್ನೊಬ್ಬರನ್ನು ನೆಚ್ಚಿಕೊಳ್ಳದೇ ಬೇರೆ ವಿಧಿಯಿಲ್ಲ. ಸಂಜೆ ಹೊತ್ತಿಗೆ ಎಲ್ಲವೂ ಆರಾಮವಾಗಿರುವುದು.
ವೃಶ್ಚಿಕ : ಧನ ಲಾಭ ಇದೆ ಎಂದು ಹೆಚ್ಚು ಹಣ ಖರ್ಚು ಮಾಡಲು ಹೋದರೆ ಗೆಲವು ನಿಮ್ಮ ಹಾದಿಯಿಂದ ಪಕ್ಕಕ್ಕೆ ಸರಿಯುತ್ತದೆ. ಷೇರು ವ್ಯವಹಾರಗಳತ್ತ ಸದ್ಯಕ್ಕೆ ಗಮನ ಬೇಡ.
ಧನಸ್ಸು : ನೀವು ಹಾಕುವ ಬಂಡವಾಳ ಸದ್ಯಕ್ಕೆ ಯಾವುದೇ ಲಾಭ ತರುವುದಿಲ್ಲ. ಆದರೆ ಈ ಬಾತುಕೋಳಿಯನ್ನು ಚೆನ್ನಾಗಿ ಬೆಳೆಸಿದರೆ ಚಿನ್ನದ ಮೊಟ್ಟೆ ಕೊಡಬಲ್ಲುದು.
ಮಕರ : ನಿಮ್ಮ ಬಳಿ ಸದ್ಯಕ್ಕೆ ಯಾವುದೇ ಪ್ಲಾನ್‌ಗಳು ಇಲ್ಲದೇ ಇರುವುದು ಎಲ್ಲದಕ್ಕೂ ಒಳ್ಳೆಯದು. ಮತ್ತೆ ಯಾವುದೇ ಭೂಮಿ ವ್ಯವಹಾರಗಳ ಕುರಿತೂ ಹೆಚ್ಚು ಚಿಂತೆ ಬೇಡ.
ಕುಂಭ : ಇವತ್ತು ಆಫೀಸಿನಲ್ಲಿ ಸ್ವಲ್ಪ ಆರಾಮ ಎನಿಸುತ್ತದೆ. ಅದು ಮೇಲಧಿಕಾರಿಗಳ ಹಸನ್ಮುಖತೆಯಿಂದಲೂ ಇರಬಹುದು ಬಿಡಿ. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು ನಿಮಗೆ ಬಿಟ್ಟದ್ದು.
ಮೀನ : ತತ್ವಗಳು ಎಲ್ಲೇ ಹೋದರೂ ಬದಲಾಗದು ಅಲ್ವೇ ? ಪ್ರಯಾಣ ಯೋಗವಿದೆ. ಆದರೆ ನಿಮ್ಮ ಮನಸ್ಸು ಅದಕ್ಕೆ ತಯಾರಾಗಿರುವ ಹಾಗೆ ಕಾಣುವುದಿಲ್ಲ. ಕೊನೆಗೆ ಆಯ್ಕೆ ನಿಮ್ಮದೇ ತಾನೇ ?
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications