ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರ ಜಿಎಸ್‌ಎಲ್‌ವಿ ಮರು ಉಡಾವಣೆ : ಕ್ಷಣಗಣನೆ ಆರಂಭ

By Staff
|
Google Oneindia Kannada News

GSLVಶ್ರೀಹರಿಕೋಟಾ : ಮಾರ್ಚ್‌ 28ರಂದು ಉಡ್ಡಯನಕ್ಕೆ ಕೇವಲ ಒಂದು ಕ್ಷಣ ಬಾಕಿ ಉಳಿದಿದ್ದಾಗ ತಾಂತ್ರಿಕ ದೋಷದಿಂದ ಮೇಲೇರದೆ ವಿಫಲಗೊಂಡಿದ್ದ, ಜಿ.ಎಸ್‌.ಎಲ್‌.ವಿ. - ಡಿ.1 ಅಂತರಿಕ್ಷ ವಾಹನದ ಮರು ಉಡಾವಣೆ ಏಪ್ರಿಲ್‌ 18ರ ಬುಧವಾರ ಮಧ್ಯಾಹ್ನ 3ಗಂಟೆ 43 ನಿಮಿಷಕ್ಕೆ ನಡೆಯಲಿದೆ.

ಈ ವಿಷಯವನ್ನು ಇಸ್ರೋ ಮೂಲಗಳು ತಿಳಿಸಿವೆ. ಮರು ಉಡಾವಣೆಗೆ ದಿನಾಂಕ ಹಾಗೂ ಸಮಯ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಶ್ರೀಹರಿಕೋಟಾದಲ್ಲಿ ಸೋಮವಾರ ಬೆಳಗ್ಗೆ 6: 43 ರಿಂದ ಕ್ಷಣಗಣನೆ ಆರಂಭವಾಗಿದೆ.

ಮಾರ್ಚ್‌ 28ರಂದು ಉಪಗ್ರಹ ಉಡಾವಣೆ ಸಮಯದಲ್ಲಿ ತಾಂತ್ರಿಕ ದೋಷದಿಂದ ಉಂಟಾಗಿದ್ದ ಹಿನ್ನಡೆಯನ್ನು ಕೇವಲ 15 ದಿನಗಳ ಅವಧಿಯಾಳಗೆ ಸರಿಪಡಿಸಿ, ಮರು ಉಡಾವಣೆಗೆ ದಿನಾಂಕ ನಿಗದಿ ಮಾಡಿರುವುದು ವಿಶ್ವದ ವಿಜ್ಞಾನಿಗಳನ್ನು ಅಚ್ಚರಿಗೊಳಿಸಿದೆ.

ಜಿ.ಎಸ್‌.ಎಲ್‌.ವಿ.ಯ ಮರು ಉಡಾವಣೆಯ ಎಲ್ಲ ಕಾರ್ಯಕ್ರಮಗಳೂ ಭರದಿಂದ ನಡೆಯುತ್ತಿದ್ದು, ಈ ಬಾರಿ ಯಶಸ್ಸು ಕಾಣುವ ಛಲದಿಂದ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಒಂದೊಮ್ಮೆ ಇನ್ನಾವುದೇ ಕಾರಣಕ್ಕೆ ಬುಧವಾರ ಮಧ್ಯಾಹ್ನ 3 ಗಂಟೆ 43 ನಿಮಿಷಕ್ಕೆ ಜಿ.ಎಸ್‌.ಎಲ್‌.ವಿ. ಮರು ಉಡಾವಣೆ ಸಾಧ್ಯವಾಗದಿದ್ದರೆ, ಅದೇ ದಿನ 7ಗಂಟೆ 34 ನಿಮಿಷಕ್ಕೆ ಜಿ.ಎಸ್‌.ಎಲ್‌.ವಿ. ಮರು ಉಡಾವಣೆ ನಡೆದೇ ನಡೆಯುತ್ತದೆ ಎಂದು ಇಸ್ರೋನ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

(ಯು.ಎನ್‌.ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X