ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನಿಮ್ಮ ಎಲ್ಲ ಕಲಿಕಾ ಕಾರ್ಯಗಳಿಗೆ ಸುಸಮಯ ಕೂಡಿ ಬಂದಿದೆ. ಈಗಿರುವ ಏಕಾಗ್ರತೆಯ ಜೊತೆಗೆ ಶ್ರಮವೊಂದಿದ್ದರೆ ಜಯ ನಿಮಗೊಲಿದು ಬರುತ್ತದೆ.ವೃಷಭ : ನೀವು ದೂರ ಪ್ರಯಾಣ ಹೊರಡಬೇಕೆಂದುಕೊಂಡು ಆಸೆ ಪಟ್ಟಿರುವುದು ನಿಜವಾದರೂ ಸದ್ಯಕ್ಕೆ ಶುಭ ಸುದ್ದಿ ಇಲ್ಲ. ಈಗಿನ ವ್ಯವಹಾರಗಳೆಲ್ಲ ಕುಂದಿಲ್ಲದೆ ನಡೆದುಕೊಂಡು ಹೋಗುತ್ತವೆ.
ಮಿಥುನ : ವ್ಯಾಪಾರ ಕ್ಷೇತ್ರದಲ್ಲಿ ಕೈಯಾಡಿಸುವುದಕ್ಕೆ ಇನ್ನೂ ಮೂಹೂರ್ತ ನೋಡಬೇಕಾದ ಅಗತ್ಯವಿಲ್ಲ. ಸದ್ಯಕ್ಕೆ ಯಾವುದೇ ಎಡರುತೊಡರುಗಳು ನಿಮ್ಮ ಬಾಧಿಸವು.
ಕಟಕ : ಷೇರು ಕೊಂಡುಕೊಳ್ಳುವ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ನಿಮ್ಮ ವ್ಯವಹಾರಗಳು ನಿಧಾನವಾಗಿ ಲಾಭ ತರುವಂತಹುದು ಎಂಬುದನ್ನು ಈಗ ನೀವು ಮರೆಯಬಾರದು.
ಸಿಂಹ : ಖರ್ಚು ಮಾಡುವ ಹಣವೆಲ್ಲಾ ಹೊಳೆವಲ್ಲಿ ಹುಣಸೇ ಹಣ್ಣು ತೊಳೆದ ಹಾಗೆ ಅಂತ ಅಂದುಕೊಳ್ಳಬೇಡಿ. ಪಿತೂರಿ ಕೆಲಸಗಳ ಬಗೆಗೆ ಎಚ್ಚರವಿರಲಿ.
ಕನ್ಯಾ : ಅನಿರೀಕ್ಷಿತ ಧನಲಾಗುತ್ತದೆಯಾದರೂ ಅದು ಸಂಜೆ ನಿಮ್ಮ ಸ್ನೇಹಿತರ ಸಮೂಹವನ್ನು ಕಲೆಹಾಕುವಷ್ಟು ದೊಡ್ಡದಲ್ಲ. ಮನೆಯಲ್ಲಿ ಬೈಗುಳ, ಮುನಿಸುಗಳು ಇವತ್ತು ಮಾಯವಾಗುತ್ತವೆ.
ತುಲಾ : ಮಾನಸಿಕ ಗೊಂದಲಗಳಿಗೆ ಇವತ್ತಾದರೂ ಪರದೆ ಹಾಕಿ, ಖುಷಿಯಾಗಿರಲು ಪ್ರಯತ್ನಿಸಿ. ಮನೆಯವರೊಂದಿಗೆ ಕಾಲ ಕಳೆಯುವುದು ನಿಮಗಿಷ್ಟವಾದರೂ ಇವತ್ತು ಆ ಭಾಗ್ಯ ಇಲ್ಲ.
ವೃಶ್ಚಿಕ : ಓದು, ವ್ಯಾಸಂಗದತ್ತ ನಿಮ್ಮ ಆಸಕ್ತಿಯನ್ನು ಎತ್ತಿಟ್ಟಿಲ್ಲ ತಾನೇ ? ಅನಿರೀಕ್ಷಿತ ಪ್ರಯಾಣ ಎದುರಾಗಬಹುದು. ಬದಿಗಿಟ್ಟಿರುವ ಸೃಜನ ಶೀಲ ಕಾರ್ಯಗಳಿಗೆ ಶುಭಾರಂಭ ಹಾಡಿ.
ಧನಸ್ಸು :ಸಂಗಾತಿಯಾಂದಿಗಿನ ವಿರಸವನ್ನು ಸರಿಪಡಿಸಿಕೊಳ್ಳಲು ನೀವು ಇವತ್ತು ಸಮಯ ಎತ್ತಿಟ್ಟುಕೊಳ್ಳಬೇಕು. ಬಿಸಿನೆಸ್ ಅಂತ ದಿನವಿಡೀ ಓಡಾಡಬೇಡಿ.
ಮಕರ : ಶ್ರಮ ಪಡುವುದು, ಕೆಲಸ ಮಾಡುವುದು ಎಲ್ಲ ಹಳೇ ವಿಚಾರಗಳು ಅಂತ ಅಂದಕೊಂಡು ಆರಾಮ್ ಸೇ ಇರಬೇಡಿ.
ಕುಂಭ : ಅನಗತ್ಯವಾಗಿ ಸ್ನೇಹಿತರ ಬಳಿ ಜಗಳ ಕಾದರೆ, ಮುಂದೆ ನಿಮಗೇ ತೊಂದರೆ. ಆದ್ದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಮಿತ್ರರನ್ನು ನಿಭಾಯಿಸಿಕೊಂಡು ಹೋಗುವುದು ನಿಮ್ಮ ಪಾಲಿಗೆ ಬಿಟ್ಟದ್ದು.
ಮೀನ : ಗೆಳೆಯರ ಪತ್ರಗಳಿಗೆ, ಸಂದೇಶಗಳಿಗೆ ಕಾಯುತ್ತಿದ್ದೀರಿ. ಆದರೆ ಇನ್ನೆರಡು ದಿನವಾದರೂ ಕಾಯಬೇಕಾಗುತ್ತದೆ. ಕಾಯುವಾಗಲೂ ಇರುವ ಖುಷಿ ಅನುಭವಿಸುವ ಮಜಾ ಬೇರೆಯೇ ಅಲ್ವ ?












Click it and Unblock the Notifications