ಮಾನವ ಶಕ್ತಿ ದುಪ್ಪಟ್ಟುಗೊಳಿಸಲು ಎರಿಕ್‌ಸನ್ ಇಂಡಿಯಾ ನಿರ್ಧಾರ
ನವದೆಹಲಿ : ಅಮೆರಿಕದ ಆರ್ಥಿಕ ಸ್ಥಿತಿಗತಿಯಲ್ಲಿ ಉಂಟಾಗಿರುವ ಏರುಪೇರಿನಿಂದಾಗಿ ಸಾವಿರಾರು ಭಾರತೀಯ ಕಂಪ್ಯೂಟರ್ ತಂತ್ರಜ್ಞರು, ಉದ್ಯೋಗ ವಂಚಿತರಾಗುತ್ತಾರೆ ಎಂಬ ಆತಂಕವನ್ನು ನಿವಾರಿಸುವ ಸುದ್ದಿ ಇಲ್ಲಿದೆ. ಟೆಲಿಕಾಂ ವಿಶ್ವದಲ್ಲಿ ಅತಿ ದೊಡ್ಡ ಹೆಸರು ಮಾಡಿರುವ ಎರಿಕ್ಸನ್ ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿರುವ ತನ್ನ ಸಾಫ್ಟ್‌ವೇರ್ ಅಭಿವೃದ್ಧಿ ಕೇಂದ್ರಗಳಲ್ಲಿ ಹಾಲಿ ಇರುವ ಉದ್ಯೋಗಿಗಳ ಸಂಖ್ಯೆಯನ್ನು ಎರಡರಷ್ಟು ಮಾಡಲು ನಿರ್ಧರಿಸಿದೆ.
ಏರಿಕ್ಸನ್‌ನ ಮಾತೃ ಸಂಸ್ಥೆಯೂ ಸೇರಿದಂತೆ ಜಾಗತಿಕ ಟೆಲಿಕಾಂ ಕಂಪನಿಗಳು ವಿಶ್ವಾದ್ಯಂತ ಮಾನವಶಕ್ತಿಯ ಕಡಿತ ನಿರ್ಧಾರ ಕೈಗೊಂಡಿದ್ದರೂ ಎರಿಕ್‌ಸನ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆ. ಈ ನಿಟ್ಟಿನಲ್ಲಿ ಎರಿಕ್ಸನ್ ಇಂಡಿಯಾ ಬರುವ 18 ತಿಂಗಳುಕಾಲದ ಅವಧಿಗೆ ಹೆಚ್ಚುವರಿ ಬಂಡವಾಳ ಹೂಡುವ ಮೂಲಕ ಹಾಲಿ ಇರುವ ಮಾನವ ಶಕ್ತಿಯನ್ನು 100ರಿಂದ 200ಕ್ಕೆ ಹೆಚ್ಚಿಸುವ ನಿರ್ಧಾರ ಪ್ರಕಟಿಸಿದೆ.
ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗುತ್ತಿರುವ ಬೆಳವಣಿಗೆಗಳಿಗೆ ಕಟಿಬದ್ಧರಾಗಿದ್ದೇವೆ. ಆದರೂ ನಮ್ಮ ಕಾರ್ಮಿಕ ಶಕ್ತಿಯನ್ನು ಕಡಿತಗೊಳಿಸುವ ಯಾವುದೇ ಯೋಜನೆ ನಮ್ಮ ಮುಂದಿಲ್ಲ ಎಂದು ಗ್ರಾಹಕ ಉತ್ಪನ್ನಗಳ ವಿಭಾಗದ ನಿರ್ದೇಶಕ ರಂಜೀವ್‌ಜಿತ್ ಸಿಂಗ್ ತಿಳಿಸಿದ್ದಾರೆ.
ದೂರಸಂಪರ್ಕದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವಿಶ್ವದ ಅತಿದೊಡ್ಡ ಸಂಸ್ಥೆಯಾದ ಎರಿಕ್ಸನ್ ತನ್ನ ಉತ್ಪಾದಕ ವೆಚ್ಚ ಕಡಿತಗೊಳಿಸಿ, ಲಾಭ ವರ್ಧನೆಗಾಗಿ ವಿಶ್ವಾದ್ಯಂತ ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸುವ ಇಂಗಿತವನ್ನು ಇತ್ತೀಚೆಗಷ್ಟೇ ಪ್ರಕಟಿಸಿತ್ತು. ಅಲ್ಲದೆ ಜಾಗತಿಕ ಮಟ್ಟದಲ್ಲಿ ಹೊಸ ನೇಮಕಾತಿಗೆ ಕಡಿವಾಣ ಹಾಕುವ ನಿರ್ಧಾರವನ್ನೂ ಸ್ವೀಡಿಷ್‌ನ ಈ ಸಂಸ್ಥೆ ಘೋಷಿಸಿತ್ತು.
ಎರಿಕ್ಸನ್ ಕಮ್ಯೂನಿಕೇಷನ್ಸ್ ಜೈಪುರದಲ್ಲಿ ಹಾರ್ಡ್‌ವೇರ್ ವೆರಿಫಿಕೇಷನ್ ಕೇಂದ್ರವನ್ನು ಸಹ ಸ್ಥಾಪಿಸುತ್ತಿದೆ. ಹಿಂದಿನ ಲೆಕ್ಕಾಚಾರದಂತೆ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚದೇ ಇರುವುದರಿಂದ ಹ್ಯಾಂಡ್‌ಸೆಟ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಯಾವುದೇ ಯೋಜನೆ ಇಲ್ಲ ಎಂದೂ ಸಿಂಗ್ ಹೇಳಿದರು.
(ಯುಎನ್‌ಐ)
serching for a job? Log on to ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications