ಬರಿದಾಗುತ್ತಿದೆ ಕೆ.ಆರ್. ಎಸ್, ಮತ್ತೆ ಗೋಚರಿಸುತ್ತಿದೆ ಗೋಪುರ
ಮೈಸೂರು : ರಾಜ್ಯದಲ್ಲಿ ಬಿಸಿಲು ಏರುತ್ತಿದೆ. ಮೈಸೂರಿನಲ್ಲೂ ಬಿಸಿಲ ಪ್ರಖರತೆ ಏರಿದೆ. ಸುಡು ಬಿಸಿಲಿಗೆ ಕೆರೆ, ಕಟ್ಟೆ, ಜಲಾಶಯಗಳು ಒಣಗುತ್ತಿವೆ. ಇದಕ್ಕೆ ಕೃಷ್ಣರಾಜ ಸಾಗರ ಅರ್ಥಾತ್ ಕೆ.ಆರ್.ಎಸ್. ಕೂಡ ಹೊರತಾಗಿಲ್ಲ. 124 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಈ ಹೊತ್ತು ಕೇವಲ 93.46 ಅಡಿ ಮಾತ್ರ ನೀರಿದೆ.
ಕಳೆದ ವರ್ಷ ಮೇ ತಿಂಗಳಿನಲ್ಲಿ ಕೃಷ್ಣ-ರಾ-ಜ ಸಾಗ-ರ-ದ ಸುತ್ತ-ಮು-ತ್ತ-ಲ ಪ್ರದೇ-ಶ-ದ-ಲ್ಲಿ ಮಳೆ ಕೈಕೊಟ್ಟಾಗ , ಕನ್ನಡ ನಾಡಿನ ಹೆಮ್ಮೆಯ ಜಲಾಶಯದ ನೀರಿನ ಮಟ್ಟ 60 ಅಡಿಗಳಿಗೆ ಕುಸಿದು 20 ವರು-ಷ-ಗ-ಳ ನಂತರ ಸುಮಾರು 500 ವರ್ಷ-ಗ-ಳ-ಷ್ಟು ಹಳೆ-ಯ-ದಾ-ದ ಹೊಯ್ಸ-ಳ-ರ ವಾಸ್ತು ಶೈಲಿ-ಯ-ನ್ನು ಹೋಲು-ವ ಪುರಾ-ತ-ನ ವೇಣು-ಗೋ-ಪಾ-ಲ ಸ್ವಾಮಿ ದೇವಾಲಯ ಸಾರ್ವಜನಿಕರಿಗೆ ದರ್ಶನ ನೀಡಿತ್ತು.
ಸಾವಿರಾರು ಜನರು ಜಲ ಸಮಾಧಿಯಾಗಿದ್ದ ದೇಗುಲವ ನೋಡಲು ಬಂದು ಹೋಗಿದ್ದರು. ಬಂದವರೆಲ್ಲಾ ಹುಯ್ಯೋ, ಹುಯ್ಯೋ ಮಳೆರಾಯ ಕನ್ನಂಬಾಡಿಗೆ ನೀರಿಲ್ಲ ಎಂದು ದೇವರಲ್ಲಿ ಪ್ರಾರ್ಥಿಸಿದ್ದರು. ಜನರ ಪ್ರಾರ್ಥನೆಗೆ ಒಲಿದ ವರುಣದೇವನ ಕೃಪೆಯಿಂದ ಕೆ.ಆರ್.ಎಸ್. ತುಂಬಿತ್ತು. ಆದರೆ, ಈಗ ಮಾರ್ಚ್ ತಿಂಗಳ ಅಂತ್ಯದಲ್ಲೇ ನೀರಿನಲ್ಲಿ ಮುಳುಗಿರುವ ದೇವಾಲಯದ ಗೋಪುರ ಕಾಣಿಸುತ್ತಿದೆ.
ಚೈತ್ರ ಮಾಸ ಕಾಲಿಟ್ಟರೂ ರಾಜ್ಯದ ಯಾವುದೇ ಮೂಲೆಯಲ್ಲೂ ಒಂದಿಚು ಮಳೆಯೂ ಬಾರದಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಮತ್ತೆ ಕೆ.ಆರ್.ಎಸ್. ಬರಿದಾದರೆ, ಗತಿಯೇನು ಎಂದು ಜನ ಭೀತರಾಗಿದ್ದಾರೆ. ಕಳೆದ ವರ್ಷವಂತೂ ಕುಡಿಯುವ ನೀರಿಗಾಗಿ ಮಂಡ್ಯ ರೈತರು ಹಾಗೂ ಮೈಸೂರು ನಾಗರಿಕರ ನಡುವೆ ದೊಡ್ಡ ಸಂಘರ್ಷವೇ ನಡೆದಿತ್ತು. ಈ ಬಾರಿ ಹಾಗಾಗದಿರಲಿ, ಕಾವೇರಿಯಲ್ಲಿ ಮುಳುಗಿದ ವೇಣುಗೋಪಾಲನ ಕಾಣುವ ಯೋಗ ದೊರೆಯದಿದ್ದರೂ ಪರವಾಗಿಲ್ಲ. ಕೆ.ಆರ್.ಎಸ್. ಸದಾ ತುಂಬಿರಲಿ ಎಂದು ಜನ ಮುಗಿಲಿನತ್ತ ಮುಖಮಾಡಿ, ವರುಣನ ಕೃಪೆಗೆ ಕಾಯುತ್ತಿದ್ದಾರೆ.
(ಇನ್ಫೋ ವರದಿ)
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications