Get Updates
Get notified of breaking news, exclusive insights, and must-see stories!

ಮೈಸೂರಿನಿಂದ ಭೂಕಂಪ ಗ್ರಸ್ತ ಗುಜರಾತ್‌ನತ್ತ ಆದಿಜಿನ

ಮೈಸೂರು : ಗುಜರಾತ್‌ನ ತರಂಗ ನಗರದಲ್ಲಿ ಸ್ಥಾಪನೆಯಾಗಲಿರುವ ಆದಿ ತೀರ್ಥಂಕರ ವಿಗ್ರಹದ ಕೆತ್ತನೆ ಕಾರ್ಯ ಇದೀಗ ಪೂರ್ಣಗೊಂಡಿದ್ದು , 22 ಟನ್‌ ಭಾರದ ಆದಿ ತೀರ್ಥಂಕರ ವಿಗ್ರಹ ಮೈಸೂರಿನಿಂದ ಗುಜರಾತ್‌ಗೆ ಪ್ರಯಾಣ ಬೆಳೆಸಿದೆ.

ಹತ್ತು ಅಡಿ ಎತ್ತರದ ಆದಿತೀರ್ಥಂಕರರ ವಿಗ್ರಹ ಕಮಲದ ಹೂವಿನ ಮೇಲೆ ನಿಂತಿದೆ. ಶಿಲ್ಪಕಲೆಗಾಗಿ ಮೈಸೂರು ಮಹಾರಾಜರಿಂದ ಪ್ರಶಸ್ತಿ ಪಡೆದಿದ್ದ ಪ್ರಸಿದ್ಧ ಶಿಲ್ಪಕಾರ ಬಸವಣ್ಣ ಅವರ ಪುತ್ರ ಯೋಗರಾಜ್‌ ಅವರು ಈ ವಿಗ್ರಹವನ್ನು ಕೆತ್ತಿದ್ದಾರೆ. ಯೋಗರಾಜ್‌ ರಾಷ್ಟ್ರ ಪ್ರಶಸ್ತಿ ವಿಜೇತರು.

15 ತಿಂಗಳ ಅವಧಿಯಲ್ಲಿ ನಿರಂತರ ಪರಿಶ್ರಮದ ನಂತರ ಈ ವಿಗ್ರಹ ಕೆತ್ತನೆಯ ಕೆಲಸ ಸಂಪೂರ್ಣವಾಗಿದೆ. ಯೋಗರಾಜ್‌ ಅವರು ಮೈಸೂರು ಅರಮನೆಯಲ್ಲಿರುವ ಗಾಯತ್ರಿ ದೇವಸ್ಥಾನದಲ್ಲಿ 64 ದೇವ ದೇವಿಯರ ವಿಗ್ರಹಗಳನ್ನು ಹಾಗೂ ಮಂಡ್ಯದ ಈಶ್ವರ ದೇವಸ್ಥಾನಕ್ಕೆ 8 ಟನ್‌ ಭಾರದ ನಂದಿ ವಿಗ್ರಹವನ್ನು ಕೆತ್ತಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+