ತಣ್ಣೀರು ಬಾವಿಗೆ ಆಗಮಿಸಿದ ಬಾರ್ಜ್ ಮೌಂಟೆಡ್ ಸ್ಥಾವರ
ಮಂಗಳೂರು : ತಣ್ಣೀರು ಬಾವಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಬಾರ್ಜ್ ಮೌಂಟೆಡ್ ವಿದ್ಯುತ್ ಸ್ಥಾವರಕ್ಕೆ 220 ಮೆಗಾ ವ್ಯಾಟ್ ಸಾಮರ್ಥ್ಯದ ಸಮಗ್ರ ಸ್ಥಾವರ ಮಂಗಳೂರು ಬಂದರಿಗೆ ಆಗಮಿಸಿದೆ.
ದಕ್ಷಿಣ ಕೋರಿಯಾದ ರಾಜಧಾನಿ ಸೋಲ್ ಸಮೀಪದ ಉಲ್ಸನ್ನಿಂದ, ಕೊರಿಯಾದ ಹುಂಡೈ ಶಿಪ್ ಯಾರ್ಡ್ ಮೂಲಕ ರವಾನೆಯಾದ ಸಮಗ್ರ ಘಟಕ, ಮೂಲ ಆಧಾರದ ನೌಕೆಯಾಂದಿಗೆ ಮಂಗಳೂರು ಹಳೇ ಬಂದರನ್ನು ತಲುಪಿದೆ. ರಷ್ಯನ್ ನೌಕೆ ಟ್ರಾನ್ಶೆಲ್ಫ್ ಫೆಬ್ರವರಿ 12ರಂದು ಬಳೇ ಬಂದರಿಗೆ ಆಗಮಿಸಿದ್ದು, ಒಶನ್ ಮರ್ಕ್ಯುರಿ, ಓಶನ್ ರೋಮಿಯೋ, ಓಶನ್ ಕ್ಯೂಬಿಕ್ ಎಂಬ ಮೂರು ಟಗ್ಗಳು ಸಿಂಗಾಪುರ್ ಬಂದರಿನಿಂದ ಬಂದಿವೆ.
ಬಂದರಿಗೆ ಸಮೀಪವಿರುವ ತಣ್ಣೀರು ಬಾವಿಯಲ್ಲಿ ಈ ಬಾರ್ಜ್ (ತೇಲು ಘಟಕ) ವಿದ್ಯುತ್ ಉತ್ಪಾದನಾ ಚಟುವಟಿಕೆಯನ್ನು ಆರಂಭಿಸಲಿದೆ. 1000 ಕೋಟಿ ರೂಪಾಯಿ ವೆಚ್ಚದ ವಿದ್ಯುತ್ ಸ್ಥಾವರವನ್ನು ಹೈದರಾಬಾದ್ನ ಜಿ. ಎಂ.ಆರ್ ವಾಸವಿ ಸಂಸ್ಥೆ ನಿರ್ವಹಿಸಲಿದೆ. ಈ ವಿದ್ಯುತ್ ಸ್ಥಾವರದಿಂದ ಮೀನುಗಾರಿಕೆಗೆ ಹಾನಿಯಾಗಲಿದೆ ಎಂಬ ಆಪಾದನೆಯಿದ್ದು, ಕರಾವಳಿ ವಲಯ ನಿಯಂತ್ರಣ ಕಾಯ್ದೆಯೂ ಇಲ್ಲಿ ಅನ್ವಯವಾಗುವ ಕುರಿತು ಚರ್ಚೆ ನಡೆಯುತ್ತಿದೆ.
(ಇನ್ಫೋ ವಾರ್ತೆ)
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications