ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ನಿಂತಲೇ ನಿಲ್ಲುವ ನೀರು ಕೊಚ್ಚೆಯಾಗುತ್ತದೆ ಅನ್ನುವುದು ನೆನಪಿನಲ್ಲಿರಲಿ. ನೀವೀಗ ಮತ್ತಷ್ಟು ಚಲನಶೀಲರಾಗಬೇಕಾದ ಅಗತ್ಯವಿದೆ. ಇದು ಭವಿಷ್ಯದ ಪ್ರಜ್ವಲತೆಗೆ ಅತ್ಯಗತ್ಯ.ವೃಷಭ :ಕುಟುಂಬದೊಂದಿಗಿನ ಸಹಚರ್ಯ ಇಷ್ಟೊಂದು ಹಿತದಾಯಕವೇ ಅನ್ನುವಷ್ಟು ಖುಷಿಯ ಲಹರಿ ಮುಂದುವರಿಯಲಿದೆ. ಈ ಸಂಭ್ರಮಕ್ಕೆ ಅನಿರೀಕ್ಷಿತವಾಗಿ ಆಗಮಿಸುವ ಅತಿಥಿಗಳೂ ಕೂಡಿಕೊಳ್ಳುತ್ತಾರೆ.
ಮಿಥುನ : ಕ್ಷೇಮವಾ. ಮಾನಸಿಕವಾಗಿ ಕೂಡ. ಕೆಲಸದ ಒತ್ತಡ ಪ್ರಯಾಣದ ದಣಿವನ್ನು ಹೆಚ್ಚಿಸುವಾಗ ಇಂಥಾ ಪ್ರಶ್ನೆಗಳು ಸಹಜ. ಅದೇನಾದರೂ ಇರಲಿ, ಗೆಳೆಯರೊಂದಿಗೆ ಮುನಿಸು ಮಾತ್ರ ಬೇಡ.
ಕಟಕ : ಇದೇ ಸರಿ ಎಂದು ನಿರ್ಧರಿಸಲು ಸಾಧ್ಯವಾಗದಿದ್ದಲ್ಲಿ ಹಿರಿಯರ ಸಲಹೆ ಪಡೆಯವುದು ಒಳ್ಳೆಯದು. ಕಂಕಣ ಕೂಡಿ ಬಂದಿರುವುದರಿಂದ ಉದಾಸೀನ ಮಾಡುವುದು ಅಷ್ಟೇನೂ ಜಾಣತನವಲ್ಲ .
ಸಿಂಹ : ಹೊಸ ಷೇರು ಕೊಳ್ಳುವ ಯೋಚನೆಯಿದ್ದರೆ ತಡ ಮಾಡುವುದು ಬೇಡ. ನೀವು ಮುಟ್ಟಿದ್ದೆಲ್ಲಾ ಚಿನ್ನ ಅನ್ನುವಂಥ ಕಾಲವಿದು. ಎಷ್ಟೇ ಆಗಲಿ ಲಕ್ಷ್ಮಿ ಯ ವರಪುತ್ರರು ನೀವು.
ಕನ್ಯಾ : ಎಲ್ಲಾ ನಿಮ್ಮ ಮೂಗಿನ ನೇರಕ್ಕೇ ನಡೆಯುತ್ತಿದೆ. ಮನೆಯಲ್ಲಿನ ತುಸು ಕಿರಿಕಿರಿಯನ್ನು ಹೊರತು ಪಡಿಸಿದರೆ, ಈ ಹೊತ್ತು ನಿಮ್ಮ ನೆಮ್ಮದಿಗೆ ಭಂಗ ತರುವಂಥದ್ದೇನೂ ಇಲ್ಲ .
ತುಲಾ : ಸೃಜನಶೀಲ ಕೆಲಸಗಳಲ್ಲಿ ನೀವು ಅಂದುಕೊಂಡದ್ದನ್ನು ಸಾಧಿಸಲಾಗುತ್ತಿಲ್ಲ . ನೀವು ಮನಸ್ಸಿನ ಏಕಾಗ್ರತೆಯ ಕಡೆಗೆ ಗಮನ ಕೊಡಬೇಕು. ಕ್ಷುಲ್ಲಕ ಯೋಚನೆಗಳನ್ನು ದೂರವಿಡಿ.
ವೃಶ್ಚಿಕ : ಬಂಧು ಮಿತ್ರರ ಆಗಮನದಿಂದ ಖುಷಿಯಾಗುತ್ತೀರಿ. ಈ ಖುಷಿಯಲ್ಲಿ ಕೆಲಸದ ಒತ್ತಡವೂ ಕಡಿಮೆ ಅನ್ನಿಸಿ, ಆಯಾಸ ಮಾಯವಾದರೆ ಆಶ್ಚರ್ಯವಿಲ್ಲ . ಖುಷಿಯ ದಿನ.
ಧನಸ್ಸು :ಸಂಜೆ ಸಂಗಾತಿಯಾಂದಿಗಿನ ಸುತ್ತಾಟ ಖುಷಿ ಕೊಡುತ್ತದೆ. ಸಟ್ಟಾ ವ್ಯವಹಾರಗಳಲ್ಲಿ ಲಾಭದ ದಿನವಿದು. ಹೊಸ ಹೂಡಿಕೆಗಳಲ್ಲಿ ತೊಡಗುವುದರಿಂದಲೂ ಲಾಭವಿದೆ.
ಮಕರ : ಉನ್ನತ ವ್ಯಾಸಂಗದತ್ತ ಹೆಚ್ಚಿನ ಗಮನ ಕೊಡುವುದಗತ್ಯ. ಅಂದಹಾಗೆ, ಎಸ್ಟೇಟ್ ಕೊಳ್ಳುವ ದಿನ ಸದ್ಯಕ್ಕಿಲ್ಲ . ಅಲ್ಲೊಂದು ಮೂಲೆಗೆ ಗೆಳೆಯರು ಕಾಯುತ್ತಿದ್ದಾರೆ.
ಕುಂಭ : ಗೆಳೆಯರೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ. ನಿಮ್ಮ ಗುರಿ ಮುಟ್ಟುವಲ್ಲಿ ಮತ್ತೊಂದು ಹೆಜ್ಜೆ ನಡೆಯುತ್ತೀರಿ. ಈ ನಿಟ್ಟಿನಲ್ಲಿ ದೈವಾನುಗ್ರಹ ಅತ್ಯಗತ್ಯ. ಇಷ್ಟದೇವರನ್ನು ಪ್ರಾರ್ಥಿಸಿ.
ಮೀನ : ಸುಳ್ಳೋ ಸರಿಯೋ ಸದ್ಯಕ್ಕಂತೂ ನೀವು ನಂಬಿ ಇಡುತ್ತಿರುವ ಹೆಜ್ಜೆ ಸರಿಯಾಗಿಯೇ ಇದೆ. ನಿಮ್ಮ ನಡವಳಿಕೆ ಗೆಳೆಯರನ್ನು ಹತ್ತಿರ ತರಲಿದೆ. ಕಚೇರಿಯಲ್ಲೂ ಖುಷಿಯ ಕಲರವದ ದಿನ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications