ಹೊಸ ಬಣ್ಣವಿಲ್ಲದ ಬಿಸಿಲಬಿಲ್ಲು
ನಿನ್ನೆ ಹುಣ್ಣಿಮೆ ಆಗಿ ಹೋಯಿತು. ಟೆರೇಸಿನ ವೈರುಗಳೆಡೆಯಲ್ಲಿ, ಅಂಗಳದ ಚಟ್ಟಿ ಹೂವು- ಎಲೆಗಳ ನಡುವೆ ಬೆಳದಿಂಗಳು ಬರೆದ ಚಿತ್ತಾರವನ್ನು ಇನ್ನೊಂದೆರಡು ದಿನ ಮಾತ್ರ ನೋಡಬಹುದು. ಮತ್ತೆ ಹತ್ತು ದಿನವಾದರೂ ಕಾಯಬೇಕು.
ಎಲ್ಲಿಂದಲೋ ಕೈಯ್ಯಲ್ಲೊಂದು ಕೆಲಸದ ಆರ್ಡರ್ ಹಿಡಿದುಕೊಂಡು ಬೆಂಗಳೂರಿನಂತಹ ಮೆಗಾಸಿಟಿಗಳಿಗೆ ವಲಸೆ ಬಂದವರ ಮನೆಬಾಗಿಲಿನಲ್ಲಿ ಪತ್ರಗಳು ಬಿದ್ದಿವೆ. ಊರಿನಲ್ಲಿ ಜಾತ್ರೆ, ಧ್ವಜಾರೋಹಣ, ಭೂತ ಕೋಲ, ನೇಮ... ಹೀಗೆ. ಬದಿಯಲ್ಲಿ ತುರುಕಿಟ್ಟ ಸೂಟ್‌ಕೇಸ್ ಊರಿಗೆ ಹೋಗಲು ರೆಡಿಯಾಗುತ್ತಿದೆ. ಆ ಊರಿನ ಪುಟ್ಟ ಪುಟ್ಟಿಯರು ಬೆಂಗಳೂರು ಮಾಮ ಜಾತ್ರೆಗೆ ಬರುವ ದಾರಿ ನೋಡುತ್ತಿದ್ದಾರೆ.
ಹಾಗೆ ಬೆಂಗಳೂರಿನಲ್ಲಿ ಟೆಂಪರೇಚರ್ 21ಕ್ಕೆ ಧಾವಿಸಿ ಮತ್ತೆ ತನ್ನ ಉಸಿರು ತಗ್ಗಿಸಿದೆ. ಆದರೆ ಸೆಕೆಗಾಲ ಬಂದದ್ದಂತೂ ಸುಳ್ಳಲ್ಲ . ಸ್ವೆಟರ್, ಶಾಲು, ಸ್ಕಾರ್ಫ್‌ಗಳು ಕಪಾಟಿನಡಿಯಲ್ಲಿ ಸುಮ್ಮನೇ ಕುಳಿತಿವೆ - ಕೆಲಸವಿಲ್ಲದೆ. ಬರೀ ಒಣ ಹವೆಯ ವಿಜಯದ ಸುದ್ದಿಗೆ ಹೊಸ ಬಣ್ಣವೇನಿಲ್ಲ .
ಶುಕ್ರವಾರದ ಹವಾ : ದಿನದ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಷಿಯಸ್ ಗುಲ್ಬರ್ಗಾದಲ್ಲಿ ದಾಖಲಾಗಿತ್ತು . ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ತಾಪಮಾನ ಕುಸಿತ ಕಂಡಿದ್ದರೆ, ಉಳಿದಂತೆ ಒಣಹವೆಯಲ್ಲಿ ಯಾವುದೇ ಬದಲಾವಣೆಗಳಿರಲಿಲ್ಲ . ಮುಂದಿನ ಎರಡೂ ದಿನಗಳಲ್ಲೂ ಒಣಹವೆ ಬದಲಾಗುವ ಯಾವುದೇ ಲಕ್ಷಣಗಳಿಲ್ಲ . ಶನಿವಾರ, ಬೆಂಗಳೂರಿನಲ್ಲಿ ಶುಭ್ರಾಕಾಶ. ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿ .
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications