ಬಯಲು ಆಲಯದೊಳಗೆ ಕಟೀಲು ದುರ್ಗಾ ಪರಮೇಶ್ವರಿ
*ರಾಜು ಮಹತಿ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಕಟೀಲು ಈಗ ವಿವಾದ ಕೇಂದ್ರ. ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಈ ಕ್ಷೇತ್ರಕ್ಕೆ ಪ್ರಸ್ತುತ ಮಂಗಳೂರು ಸಹಾಯಕ ಕಮಿಷನರ್ ಶಂಕರಪ್ಪನವರನ್ನು ಸರಕಾರ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.
ಈ ನಡುವೆ ಕಾನೂನು ಸಮರವೂ ಮುಂದುವರೆದಿದೆ. ಕಳೆದ ಎರಡು ವರ್ಷಗಳಿಂದ ಇಲ್ಲಿ ಪೂಜಾಧಿಕಾರಕ್ಕಾಗಿ ದಾಯಾದಿ ಅರ್ಚಕರ ನಡುವೆ ಮುಸುಕಿನ ಗುದ್ದಾಟ ನಡೆದೇ ಇತ್ತು. ಆದರೆ ಮಂಗಳವಾರ ನಡೆಯಿತೆನ್ನಲಾದ ಹೊಡೆದಾಟದಿಂದ ಕಟೀಲು ದೇವಾಲಯದ ವಿವಾದ ಮತ್ತೆ ವಿಕೋಪಕ್ಕೆ ತಿರುಗಿದೆ. ದಾಯಾದಿ ಅರ್ಚಕರ ನಡುವಿನ ಹೊಡೆದಾಟದಿಂದ ಕಳೆದ ಎರಡು ದಿನಗಳ ಕಾಲ ಕಟೀಲಿನಲ್ಲಿ ಬಂದ್ ಆಚರಿಸಲಾಯಿತು.
ಹೊಡೆದಾಟಗಳ ಸಾಲು ದೂರುಗಳು - ಮಂಗಳವಾರದ ಹೊಡೆದಾಟದಲ್ಲಿ ಗಾಯಗೊಂಡಿರುವ ಹಿರಿಯ ಅರ್ಚಕ ಲಕ್ಷ್ಮಿ ನಾರಾಯಣ ಆಸ್ರಣ್ಣ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ವಿರೋಧಿ ಹರಿನಾರಾಯಣ ಆಸ್ರಣ್ಣ ಹೊಡೆದಾಟ ನಡೆದೇ ಇಲ್ಲ ಎನ್ನುತ್ತಾರೆ. ದೇವಸ್ಥಾನದ ಆಡಳಿತಾಧಿಕಾರಿ ಶಂಕರಪ್ಪ ಇದೊಂದು ಪ್ರಹಸನ ಎಂದು ಬಣ್ಣಿಸುತ್ತಾರೆ.
ಈ ನಡುವೆ ಲಕ್ಷ್ಮಿ ನಾರಾಯಣ ಆಸ್ರಣ್ಣರ ಬೆಂಬಲಿಗರು ತಮಗೆ ಹೊಡೆದರು ಎಂದು ಹರಿನಾರಾಯಣ ಆಸ್ರಣ್ಣರು ಪ್ರತಿ ದೂರು ನೀಡಿದ್ದಾರೆ. ಇದರಿಂದಾಗಿ ಬಜಪೆ ಪೊಲೀಸ್ ಠಾಣೆಯಲ್ಲಿ ಅರ್ಚಕರ ಎರಡೂ ಬಳಗಗಳ ದೂರುಗಳು ದಾಖಲುಗೊಂಡಿವೆ. ಮಂಗಳವಾರದ ಜಗಳದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಮತ್ತು ಅನುವಂಶಿಕ ಮೊಕ್ತೇಸರ ಲಕ್ಷ್ಮಿ ನಾರಾಯಣ ಆಸ್ರಣ್ಣರು ತಮಗೆ ಗಾಯವಾಗಿದೆ. ತಮ್ಮ ಮೇಲೆ ಹರಿನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ ಮತ್ತು ವಾಸುದೇವ ಆಸ್ರಣ್ಣರ ಗುಂಪು ಹಲ್ಲೆ ನಡೆಸಿತು ಎಂದು ದೂರಿದ್ದಾರೆ.
ಇದಕ್ಕೆ ಪ್ರತಿಯಾಗಿ ಹರಿನಾರಾಯಣ ಆಸ್ರಣ್ಣ ಅದೇ ಠಾಣೆಗೆ ನೀಡಿರುವ ದೂರಿನಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ವಾದಿರಾಜ ಭಟ್, ಎ.ಕೆ. ಪ್ರಸಾದ್ ಮತ್ತು ಈಶ್ವರ ಕಟೀಲು ತಮ್ಮ ಮೇಲೆ ಹಲ್ಲೆಗೆ ಪ್ರಯತ್ನಿಸಿದರು ಎಂದು ಹೇಳಿದ್ದಾರೆ. ನನ್ನ ಪೂಜೆಯ ಪಾಳಿಯಲ್ಲಿ ಬಂದ ಲಕ್ಷ್ಮಿನಾರಾಯಣ ಆಸ್ರಣ್ಣ ತಾವೇ ಪ್ರಸಾದ ವಿತರಿಸುವುದಾಗಿ ಹೇಳಿದರು. ಇದನ್ನು ನಾನು ಆಕ್ಷೇಪಿಸಿದೆ. ನಂತರ ಮಾತಿನ ಚಕಮಕಿ ನಡೆಯಿತು. ಆಗ ನನ್ನ ಮೇಲೆ ಹಲ್ಲೆ ನಡೆಸಲಾಯಿತು ಎಂದು ಹರಿನಾರಾಯಣ ಆಸ್ರಣ್ಣ ಹೇಳಿದ್ದಾರೆ.
ಜಗಳದ ಹಿಂದೆ ಇರಬಹುದಾದ ವ್ಯಾಪಾರೀ ಕಾರಣಗಳು - ಈ ಜಗಳದ ಹಿಂದೆ ಕಟೀಲು ಪೇಟೆಯ ಅಂಗಡಿ ಮಾಲಕರ ಕುಮ್ಮಕ್ಕು ಇದೆ. ದೇವಾಲಯಕ್ಕೆ ಕನಿಷ್ಠ ಬಾಡಿಗೆ ನೀಡಿ ಅಂಗಡಿ ನಡೆಸುತ್ತಿರುವ ಮಾಲಕರಿಗೆ ಬಾಡಿಗೆ ಹೆಚ್ಚಿಸುವ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದರು. ಇಲ್ಲವೇ ಹರಾಜು ಹಾಕುವ ಮೂಲಕ ಅಂಗಡಿ ಕೊಳ್ಳುವಂತೆಯೂ ಆದೇಶಿಸಿದ್ದರು. ಇದರಿಂದ ವಿಚಲಿತರಾದ ವ್ಯಾಪಾರಿಗಳು ದಾಂಧಲೆಗೆ ಪ್ರೇರಣೆ ನೀಡಿದರು ಎನ್ನಲಾಗುತ್ತಿದೆ. ಲಕ್ಷಾಂತರ ರೂಪಾಯಿ ಆದಾಯವಿರುವ ದೇವಾಲಯದ ಮೇಲೆ ಹಿಡಿತ ಸಾಧಿಸಲು ಅರ್ಚಕ ಬಣಗಳು ನಡೆಸುತ್ತಿರುವ ಕಾದಾಟದಿಂದ ಈಗ ಕಟೀಲು ದೇವಸ್ಥಾನದ ಪರಿಸ್ಥಿತಿ ಪೂರಾ ಹದಗೆಟ್ಟಿದೆ.
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications