ಕನ್ನಡ ತಂತ್ರಾಂಶ : ಈಗ ಆಗಬೇಕಾಗಿರುವ ಕಾರ್ಯ
- ಸರಕಾರ ಸೂಚಿಸಿರುವ ಏಕರೂಪ ಸಂಕೇತ ವ್ಯವಸ್ಥೆ ಮತ್ತು ಕೀಲಿಮಣೆ ವಿನ್ಯಾಸ ನೀಡದಿರುವ ತಂತ್ರಾಂಶಗಳನ್ನು ಯಾರೂ ಬಳಸಬಾರದು. ಈ ನಿಯಮಗಳಿಗೆ ಬದ್ಧವಾದ ತಂತ್ರಾಂಶಗಳನ್ನೇ ನೀಡುವಂತೆ ತಂತ್ರಾಂಶ ತಯಾರಕರನ್ನು ಒತ್ತಾಯಿಸಬೇಕು.
- ಸರಕಾರದ ಆಡಳಿತ ವ್ಯವಹಾರಗಳು ಗಣಕೀಕರಣವಾದಾಗಲೂ ಕನ್ನಡದಲ್ಲೇ ಆಗಬೇಕೆಂಬ ಹಕ್ಕೊತ್ತಾಯವನ್ನು ಮಂಡಿಸಬೇಕು.
- ಬಹುಮುಖ್ಯವಾಗಿ, ಸರಕಾರದ ಮತ್ತು ಸರಕಾರಿ ಸಂಸ್ಥೆಗಳ-
- ಯಾವುದೇ ಪೂರ್ವ ಮುದ್ರಿತ ಅರ್ಜಿ ನಮೂನೆಗಳು ಕನ್ನಡದಲ್ಲೇ ಇದ್ದರೂ ಅದರಲ್ಲಿನ ಕಾಲಂಗಳನ್ನು ಇಂಗ್ಲಿಷ್‌ನಲ್ಲಿ ಭರ್ತಿ ಮಾಡಬೇಕು ಎಂಬ ಸೂಚನೆಯನ್ನು ಕೈ ಬಿಟ್ಟು ಕನ್ನಡದಲ್ಲಿಯೇ ಅರ್ಜಿ ಭರ್ತಿ ಮಾಡಬೇಕು.
- ಈ ಮಾಹಿತಿಗಳನ್ನು ಗಣಕದೊಳಗೆ ಕನ್ನಡದಲ್ಲೇ ಅಳವಡಿಸುವಂತೆ ಒತ್ತಾಯಿಸಬೇಕು.
- ಯಾವುದೇ ಪೂರ್ವ ಮುದ್ರಿತ ರಸೀತಿ, ಉತ್ತರದ ನಮೂನೆಗಳು ಕನ್ನಡದಲ್ಲೇ ಇದ್ದರೂ ಅವುಗಳಲ್ಲಿ ಗಣಕಗಳಿಂದ ಮುದ್ರಿತವಾಗಿ ಬರುವ ಮಾಹಿತಿಗಳೆಲ್ಲವೂ ಕನ್ನಡದಲ್ಲೇ ಇರಬೇಕೆಂಬ ಒತ್ತಾಯ ಮಂಡಿಸಬೇಕು.
- ವಿದ್ಯಾ ಇಲಾಖೆಯ ಗಣಕೀಕರಣ
- 7ನೇ ತರಗತಿಯ ಪರೀಕ್ಷೆಯ ಹಾಗೂ ಸಂಗೀತ,ನೃತ್ಯ ವಿವಿಧ ಕಲೆಗಳ ಪರೀಕ್ಷೆಗಾಗಿ ಸಲ್ಲಿಸುವ ಆವೇದನಾ ಪತ್ರಗಳನ್ನು ಇಂಗ್ಲಿ ಷ್‌ನಲ್ಲಿಯೇ ಭರ್ತಿ ಮಾಡಬೇಕು. ಕನ್ನಡದಲ್ಲೇನಾದರೂ ಭರ್ತಿ ಮಾಡಿದಲ್ಲಿ ಅದನ್ನು ಇಂಗ್ಲಿಷ್‌ಗೆ ಪರಿವರ್ತಿಸಲಾಗುತ್ತದೆ.
- ಕರ್ನಾಟಕದಲ್ಲಿರುವ ಶಾಲೆಗಳ ಮಾಹಿತಿಗಳನ್ನು ಇಂಗ್ಲಿಷ್‌ನಲ್ಲಿಯೇ ಗಣಕೀಕರಿಸಲಾಗುತ್ತಿದೆ.
- ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಮತ್ತು ಎಲ್ಲ ಅಧ್ಯಾಪಕರಿಗೆ ಸಂಬಂಧಪಟ್ಟ ಮಾಹಿತಿಗಳು ಇಂಗ್ಲಿಷ್‌ನಲ್ಲಿಯೇ ಗಣಕೀಕರಣವಾಗುತ್ತಿವೆ.
- ವಿದ್ಯಾ ಇಲಾಖೆಯ ಅಂತರ್ಜಾಲದಲ್ಲಿ ಪ್ರಕಟವಾಗುವ ಫಲಿತಾಂಶಗಳೆಲ್ಲವೂ ಇಂಗ್ಲಿಷ್‌ನಲ್ಲಿರುತ್ತವೆ.
- ಸಾರಿಗೆ ಇಲಾಖೆಯ ಗಣಕೀಕರಣದಲ್ಲಿ ಕೂಡ ಇಂಗ್ಲಿಷ್‌ನ್ನೇ ಬಳಸಲಾಗುತ್ತಿದೆ.
- ಮುಂಗಡ ಟಿಕೆಟ್‌ನಲ್ಲಿ ಗಣಕದಿಂದ ಮುದ್ರಿತವಾಗಿ ಬರುವ ಮಾಹಿತಿಗಳು
3. ಲಗೇಜು ನಿರ್ವಹಣೆಯ ಗಣಕೀಕೃತ ವ್ಯವಹಾರಗಳು
4. ಆರ್‌ಟಿಒ ಕಚೇರಿಗಳ ಗಣಕೀಕರಣ
- ವಿದ್ಯುಚ್ಛಕ್ತಿ ಇಲಾಖೆಯ ಗಣಕೀಕರಣದಲ್ಲಿ ಕೂಡ ಇಂಗ್ಲಿಷ್ ಬಳಕೆಯಾಗುತ್ತಿದೆ
2. ಗ್ರಾಹಕರಿಂದ ಹಣ ಸಂದ ರಸೀತಿಯಲ್ಲಿನ ಮಾಹಿತಿಗಳು
3. ಇಲಾಖೆಯ ಇತರ ಗಣಕೀಕೃತ ಮಾಹಿತಿಗಳು
- ಕರ್ನಾಟಕ ಸರಕಾರದ ಅನೇಕ ಇಲಾಖೆಗಳ ಅಂತರ್ಜಾಲ ತಾಣಗಳು (ಒಂದೆರಡನ್ನುಳಿದು) ಇಂಗ್ಲಿಷ್‌ನಲ್ಲಿಯೇ ಇವೆ.
- ಕನ್ನಡವನ್ನು ದೂರೀಕರಿಸುವ ಇಂತಹ ಲೆಕ್ಕವಿಲ್ಲದಷ್ಟು ಉದಾಹರಣೆಗಳಿವೆ.
- ಒಮ್ಮೆ ಎಲ್ಲ ಮಾಹಿತಿಗಳೂ ಗಣಕಗಳಲ್ಲಿ ಇಂಗ್ಲಿಷ್‌ನಲ್ಲಿಯೇ ದಾಖಲಾದರೆ ಅನಂತರ ಅವನ್ನು ಕನ್ನಡದಲ್ಲಿ ದಾಖಲಿಸಲು ಕಷ್ಟವಾಗುತ್ತದೆ. ಆಗ ಕನ್ನಡವು ಖಂಡಿತವಾಗಿ ನಾಶವಾಗುತ್ತದೆ.
- ಕನ್ನಡ ವಿರೋಧಿಯಾದ ಇಂತಹ ಸ್ಫೋಟಕ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ.
- ಇವುಗಳನ್ನು ಗುರುತಿಸಿ ಗಣಕೀಕೃತ ಕ್ರಿಯೆಗಳು ಕನ್ನಡದಲ್ಲಿ ಆಗಬೇಕೆಂದು ಒತ್ತಾಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
- ಜನದ ಒತ್ತಾಯವಿದ್ದರೆ ಸರಕಾರವು ಸ್ಪಂದಿಸುತ್ತದೆ.
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications