ಏಕರೂಪ ಕೀಲಿಮಣೆ : ತಂತ್ರಾಂಶ ಅಭಿವೃದ್ಧಿಗೆ ಸರ್ಕಾರದ ಗಡುವು
ಕರ್ನಾಟಕ ಸರ್ಕಾರ
ಸಂಖ್ಯೆ ಮಾತಂನಿ 002 ಕ.ಸಾ.ಅ /1557/2000-01 ಮಾಹಿತಿ ತಂತ್ರಜ್ಞಾನ ನಿರ್ದೇಶನಾಲಯ, ಬಹುಮಹಡಿ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು- 560001
ದಿನಾಂಕ 05-01- 2001
ಸರ್ಕಾರದ ಮಾನ್ಯತೆ ಪಡೆದಿರುವ ಎಲ್ಲಾ ಕನ್ನಡ ತಂತ್ರಾಂಶ ತಯಾರಿಕಾ ಮಾರಾಟಗಾರ ಸಂಸ್ಥೆಯ ಮುಖ್ಯಸ್ಥರುಗಳಿಗೆ.
ಮಾನ್ಯರೇ,
ವಿಷಯ : ಕನ್ನಡ ಲಿಪಿ ತಂತ್ರಾಂಶಗಳ ಶಿಷ್ಟತೆ ಮತ್ತು ಏಕರೂಪತೆ - ಈ ಬಗ್ಗೆ
ಉಲ್ಲೇಖ : 1. ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೊರಡಿಸಿರುವ ಅಧಿಸೂಚನೆ ಸಂಖ್ಯೆ ಸಂಕಇ 70 ಕಾ 99 ದಿನಾಂಕ 4-2-99
2. ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯು ಹೊರಡಿಸಿರುವ ಸರ್ಕಾರದ ಆದೇಶದ ಸಂಖ್ಯೆ ಮಾತಂಇ 6 ನೀಸಂಇ 2000 ದಿನಾಂಕ 01-11-2000.
ಕಂಪ್ಯೂಟರ್‌ಗಳಲ್ಲಿ ಕನ್ನಡವನ್ನು ವ್ಯಾಪಕವಾಗಿ ಮತ್ತು ಸಮರ್ಥವಾಗಿ ಬಳಸಲು ಅನುಕೂಲವಾಗುವಂತೆ ಕನ್ನಡ ಲಿಪಿ ತಂತ್ರಾಂಶಗಳಲ್ಲಿ ಏಕರೂಪತೆ ತರುವ ಉದ್ದೇಶದಿಂದ ಏಕರೂಪ ಕೀಲಿಮಣೆ ವಿನ್ಯಾಸ ಮತ್ತು ಕನ್ನಡ ಲಿಪಿಗೆ ಬೇಕಾದ ಶಿಷ್ಟ ಮತ್ತು ಏಕರೂಪ ಅಕ್ಷರಭಾಗಗಳು ಹಾಗೂ ತಂತ್ರಾಂಶಗಳಲ್ಲಿ ಏಕಭಾಷಾ ಆಕರರೂಪಗಳಿಗೆ ಬಳಸಬೇಕಾದ ಸಂಕೇತಗಳನ್ನು ನಿಗದಿಪಡಿಸಿ ಉಲ್ಲೇಖದಲ್ಲಿನ ಅಧಿಸೂಚನೆ ಮತ್ತು ಆದೇಶಗಳನ್ನು ಹೊರಡಿಸಲಾಗಿದೆ. ಇವುಗಳನ್ನು ನಿಗದಿಪಡಿಸುವ ಮೊದಲು ತಂತ್ರಾಂಶ ತಯಾರಕರಾದ ತಮ್ಮ ಸಲಹೆ, ಅಭಿಪ್ರಾಯಗಳನ್ನೂ ಪಡೆಯಲಾಗಿತ್ತೆಂಬುದು ವಾಸ್ತವ ಸಂಗತಿ.
ಸರ್ಕಾರವು ನಿಗದಿಪಡಿಸಿರುವ ಏಕರೂಪ ಕೀಲಿಮಣೆ ವಿನ್ಯಾಸ ಮತ್ತು ಅಕ್ಷರ ಭಾಗಗಳನ್ನು ತಂತ್ರಾಂಶ ತಯಾರಕರು ಅವರ ತಂತ್ರಾಂಶಗಳಲ್ಲಿ ಕಡ್ಡಾಯವಾಗಿ ಒದಗಿಸಬೇಕೆಂದು ಸಹ ಆದೇಶಿಸಲಾಗಿದೆ. ಉಲ್ಲೇಖದಲ್ಲಿನ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಏಕರೂಪ ಕೀಲಿಮಣೆ ವಿನ್ಯಾಸ ಮತ್ತು ದಿನಾಂಕ 01-11-2000 ದ ಆದೇಶದಲ್ಲಿನ ಸೂಚನೆಗನುಸಾರ ತಂತ್ರಾಂಶ ಅಭಿವೃದ್ಧಿಪಡಿಸಲು ದಿನಾಂಕ 15-02-2001 ರವರೆಗೆ ಗಡುವು ನೀಡಲಾಗಿದೆ. ಅಷ್ಟರೊಳಗೆ ತಂತ್ರಾಂಶ ತಯಾರಕರು ಮಾರಾಟಗಾರರು, ಸದರಿ ಶಿಷ್ಟತೆ ಮತ್ತು ಸೂಚನೆಗಳನುಸಾರ, ಅಭಿವೃದ್ಧಿಪಡಿಸಲಾದ ತಂತ್ರಾಂಶ ಒದಗಿಸಲು ವಿಫಲರಾದಲ್ಲಿ ಅವರ ಸಂಸ್ಥೆಯನ್ನು ಸರ್ಕಾರದ ಮಾನ್ಯತೆ ಪಡೆದ ಅಧಿಕೃತ ತಂತ್ರಾಂಶ ತಯಾರಕರ ಪಟ್ಟಿಯಿಂದ ತೆಗೆದುಹಾಕಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.
ಈಗಾಗಲೇ ತಮಗೆ ಕಳುಹಿಸಿರುವ ಉಲ್ಲೇಖ (2) ರಲ್ಲಿನ ಸರ್ಕಾರಿ ಆದೇಶದ ಪ್ರತಿಯಾಂದನ್ನು ಮತ್ತೊಮ್ಮೆ ಮಾಹಿತಿಗಾಗಿ ಮತ್ತು ಅಗತ್ಯ ಕ್ರಮಕ್ಕಾಗಿ ಕಳುಹಿಸಲಾಗಿದೆ.
ತಮ್ಮ ವಿಶ್ವಾಸಿ.
ನಿರ್ದೇಶಕರು
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications