• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಣಕದಲ್ಲಿ ಕನ್ನಡ : ನೀವು ತಿಳಿದಿರಲೇಬೇಕಾದ ಅಂಶಗಳು

By Staff
|
 • ಕರ್ನಾಟಕ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿಯಲ್ಲಿದೆ
  • ಸರ್ಕಾರದ ಎಲ್ಲ ವ್ಯವಹಾರಗಳನ್ನು ಗಣಕೀಕರಿಸಲು ನಿರ್ಧರಿಸಲಾಗಿದೆ. ಇನ್ನೈದೇ ವರ್ಷಗಳಲ್ಲಿ ವಿದ್ಯುನ್ಮಾನ ಆಡಳಿತವೂ ಜಾರಿಯಾಗಲಿದೆ
  • ಕರ್ನಾಟಕದಲ್ಲಿ ಆಡಳಿತ ಭಾಷೆ ಕನ್ನಡ. ಆದ್ದರಿಂದ, ಎಲ್ಲ ಗಣಕೀಕೃತ ವ್ಯವಹಾರಗಳು ಕನ್ನಡದಲ್ಲಿರಬೇಕು
  • ಸರ್ಕಾರವು ಸಾರ್ವಜನಿಕರೊಡನೆ ನಡೆಸುವ ವ್ಯವಹಾರಗಳಂತೂ ಕನ್ನಡದಲ್ಲೇ ಇರಬೇಕು
  • ಈ ನೀತಿ ಕಾರ್ಯಗತವಾಗಲು ಗಣಕಗಳಲ್ಲಿ ಕನ್ನಡ ಲಿಪಿ ನೀಡಬಲ್ಲ ತಂತ್ರಾಂಶಗಳು (ಸಾಫ್ಟ್‌ವೇರ್‌) ಇವೆ. ಆದರೆ, ಕನ್ನಡ ತಂತ್ರಾಂಶ ಬಳಕೆಯಲ್ಲಿ ಕೆಲವು ಸಮಸ್ಯೆಗಳೂ ಇವೆ. ಅವುಗಳಲ್ಲಿ ಮುಖ್ಯವಾದವು, ಕೀಲಿಮಣೆ ವಿನ್ಯಾಸ ಹಾಗೂ ಲಿಪಿ ತಂತ್ರಾಂಶಗಳ ನಡುವೆ ಮಾಹಿತಿ ವಿನಿಮಯಕ್ಕೆ ಅವಕಾಶ ಇಲ್ಲದಿರುವುದು.

  ಕೀಲಿಮಣೆ ವಿನ್ಯಾಸದ ಸುತ್ತ ಮುತ್ತ

  • ಗಣಕಗಳ ಕೀಲಿಮಣೆಯಲ್ಲಿ ಕನ್ನಡಕ್ಕಾಗಿ ಕೀಲಿಗಳನ್ನು ಗುರ್ತಿಸುವಾಗ ಏಕರೂಪತೆ ಇಲ್ಲ . ಇದರಿಂದಾಗಿ ಕನ್ನಡದಲ್ಲಿ ಮಾಹಿತಿ ಊಡಿಸುವಾಗ ಗೊಂದಲ ಉಂಟಾಗುತ್ತದೆ
  • ಇಂಗ್ಲಿಷ್‌ ಅಕ್ಷರಗಳಿಗೆ ಇರುವ 26 ಕೀಲಿಗಳನ್ನೇ ಕನ್ನಡಕ್ಕೂ ಮಿತಿಗೊಳಿಸುವುದು ಅತ್ಯುತ್ತಮ ಪರಿಹಾರ. ಇದು ಸಾಧ್ಯ ಎಂದು ಕನ್ನಡ ಗಣಕ ಪರಿಷತ್‌ ತೋರಿಸಿಕೊಟ್ಟಿದೆ.
  • ಕರ್ನಾಟಕ ಸರ್ಕಾರವು ಗಣಕ ಪರಿಷತ್ತು ಸೂಚಿಸಿದ ಏಕರೂಪ ಕೀಲಿಮಣೆ ವಿನ್ಯಾಸವನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ
  • ಈ ಕೀಲಿಮಣೆ ವಿನ್ಯಾಸವನ್ನು ಈಗಾಗಲೇ- ಆಕೃತಿ, ವಿನ್‌ಕೀ, ಸಿ- ಡಾಕ್‌ ಸಂಸ್ಥೆಯ ಐಎಸ್‌ಎಂ ಸೇರಿದಂತೆ ಅನೇಕ ತಂತ್ರಾಂಶಗಳು ಯಶಸ್ವಿಯಾಗಿ ಅಳವಡಿಸಿವೆ. ಇದೇ ವಿನ್ಯಾಸ ಬೇಕೆಂದು ಎಲ್ಲ ತಂತ್ರಾಂಶ ತಯಾರಕರನ್ನು ಒತ್ತಾಯಿಸುವುದರಿಂದ ಏಕರೂಪ ಕೀಲಿಮಣೆ ವಿನ್ಯಾಸ ಸಾಧ್ಯವಿದೆ
  • ಲಿಪಿ ತಂತ್ರಾಂಶ ಮತ್ತು ಬಳಕೆಯಲ್ಲಿ ಸಮಸ್ಯೆಗಳು

   • ಲಿಪಿ ತಂತ್ರಾಂಶವನ್ನು ಬಳಸಿ ಸಿದ್ಧಪಡಿಸಿದ ಯಾವುದೇ ಮಾಹಿತಿಯನ್ನಾದರೂ ಮತ್ತೊಂದು ಲಿಪಿ ತಂತ್ರಾಂಶದ ಮೂಲಕ ಬಳಸಲು ಸಾಧ್ಯವಿಲ್ಲ . ಇದು ಕನ್ನಡ ತಂತ್ರಾಂಶಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕಂಟಕಪ್ರಾಯ
   • ಗಣಕಗಳಲ್ಲಿ ಕನ್ನಡ ಬಳಸುತ್ತಿರುವ ಎಲ್ಲರೂ, ಬಹುಮುಖ್ಯವಾಗಿ ಮುದ್ರಣ ಮಾಧ್ಯಮ ಬಹು ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದೆ. ಈ ಸಮಸ್ಯೆಗೆ ಪರಿಹಾರವೆಂದರೆ, ಲಿಪಿ ತಂತ್ರಾಂಶಗಳ ನಡುವೆ ಮಾಹಿತಿ ವಿನಿಮಯಕ್ಕೆ ಅವಕಾಶವಿರಬೇಕು. ಇದಕ್ಕೆ ಸೂಕ್ತವಾದ ತಂತ್ರವನ್ನು ರೂಪಿಸಬೇಕು. ಇದು ಸಾಧ್ಯವೆಂದು ಸಾಧಿಸಿ ತೋರಿಸಲಾಗಿದೆ
   • ಕನ್ನಡ ಗಣಕ ಪರಿಷತ್ತು ಈ ಸಮಸ್ಯೆಗಳನ್ನು ಗುರ್ತಿಸಿ, ಎಲ್ಲ ತಂತ್ರಾಂಶಗಳು ಬಳಸಿರುವ ಕನ್ನಡ ಅಕ್ಷರಭಾಗಗಳು ಮತ್ತು ಇವುಗಳಿಗೆ ನಿಗದಿಪಡಿಸಿರುವ ಸಂಕೇತಗಳನ್ನು ಅಧ್ಯಯನ ಮಾಡಿದೆ. ತನ್ನ ಅಧ್ಯಯನ ಫಲಿತಾಂಶಗಳನ್ನು ಸರ್ಕಾರದ ಗಮನಕ್ಕೆ ತಂದು ಏಕರೂಪ ಸಂಕೇತಗಳನ್ನು ಕನ್ನಡ ತಂತ್ರಾಂಶಗಳು ಬಳಸುವಂತೆ ಕನ್ನಡ ತಂತ್ರಾಂಶ ತಯಾರಕರಿಗೆ ತಿಳಿಸುವ ಅಗತ್ಯವನ್ನು ಕುರಿತು ಒತ್ತಾಯಿಸಿದೆ
   • ಈ ಮಹತ್ವಪೂರ್ಣ ಸಮಸ್ಯೆಯನ್ನು ಪರಿಹರಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಸರ್ಕಾರ ಮೇ 19, 2000 ದಂದು ಕನ್ನಡ ಗಣಕ ಪರಿಷತ್ತಿನ ಸದಸ್ಯರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಿದೆ. ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಈ ಸಮಿತಿಯಲ್ಲಿ 12 ಸದಸ್ಯರಿದ್ದಾರೆ. ಮಾಹಿತಿ ತಂತ್ರಜ್ಞಾನ ನಿರ್ದೇಶನಾಲಯದ ನಿರ್ದೇಶಕರು ಈ ಸಮಿತಿಯ ಕಾರ್ಯದರ್ಶಿಗಳಾಗಿದ್ದಾರೆ. ಸಮಿತಿಯು 5 ಬಾರಿ ಸಭೆ ಸೇರಿ, ಗಣಕಗಳಲ್ಲಿ ಕನ್ನಡವನ್ನು ಮೂಡಿಸಲು ಅಕ್ಷರಭಾಗಗಳನ್ನೂ ಅವುಗಳಿಗೆ ಬಳಸಬೇಕಾದ ASCII(American Standard Code for Information Interchange) ಸಂಕೇತಗಳನ್ನು ನಿಗದಿಪಡಿಸಿ ಸಿದ್ಧಪಡಿಸಿದ ವರದಿಯನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿದೆ. ನವಂಬರ್‌ 1 ರಂದು ನಡೆದ ಬೆಂಗಳೂರು ಐಟಿ.ಕಾಂ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಈ ವರದಿಯನ್ನು ಒಪ್ಪಿರುವುದಾಗಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಪ್ರಕಟಿಸಿದ್ದಾರೆ
   • ಗಣಕಗಳಲ್ಲಿ ಕನ್ನಡದ ಸಮಗ್ರ ಹಾಗೂ ಸಮರ್ಪಕ ಬಳಕೆಯ ದೃಷ್ಟಿಯಿಂದ ಇದೊಂದು ಮಹತ್ವದ ಬೆಳವಣಿಗೆಯಾದ್ದರಿಂದ, ಸರ್ಕಾರ ಸೂಚಿಸಿರುವ ಈ ಏಕರೂಪ ಸಂಕೇತ ವ್ಯವಸ್ಥೆಯನ್ನು ಎಲ್ಲ ತಂತ್ರಾಂಶ ತಯಾರಕರೂ ಜಾರಿಗೆ ತರಬೇಕಾಗಿದೆ
   • ಏಕರೂಪ ಕೀಲಿಮಣೆ ವಿನ್ಯಾಸ ಹಾಗೂ ಏಕರೂಪ ಸಂಕೇತ ವ್ಯವಸ್ಥೆಗಳನ್ನು ರೂಪಿಸಿರುವ ಕರ್ನಾಟಕ ಸರ್ಕಾರದ ಸಾಧನೆಯನ್ನು ಮೆಚ್ಚಿಕೊಂಡು ಮೈಕ್ರೋಸಾಫ್ಟ್‌ ಸಂಸ್ಥೆಯ ಬಿಲ್‌ಗೇಟ್ಸ್‌, ಕನ್ನಡ ಲಿಪಿಯನ್ನು ವಿಂಡೋಸ್‌ ಅಂಕಣದಲ್ಲಿ ಅಳವಡಿಸಿಕೊಳ್ಳಲು ಒಪ್ಪಿದ್ದಾರೆ
   • ಆಳವಾದ ಅಧ್ಯಯನಗಳ ನಂತರ ಯೂನಿಕೋಡ್‌ನಲ್ಲಿ ಇರುವ ಸಮಸ್ಯೆಗಳನ್ನು ಕನ್ನಡ ಗಣಕ ಪರಿಷತ್‌ ಗುರ್ತಿಸಿದೆ ಹಾಗೂ ಪರಿಹಾರಗಳನ್ನು ಕಂಡುಕೊಂಡಿದೆ
   • ಭಾರತೀಯ ಭಾಷೆಗಳಿಗೆ ಯೂನಿಕೋಡನ್ನು ಅಂತಿಮಗೊಳಿಸಿ ಶಿಷ್ಟೀಕರಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯು 02.11. 2000 ದಂದು ಸಭೆ ನಡೆಸಿತು. ಈ ಸಭೆಯಲ್ಲಿ ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಕನ್ನಡ ಗಣಕ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಭಾಗವಹಿಸಿದ್ದರು. ಸಭೆಯಲ್ಲಿ ಕನ್ನಡಕ್ಕಾಗಿ ಯೂನಿಕೋಡ್‌ ಸಂಕೇತಗಳನ್ನು ಅಂತಿಮಗೊಳಿಸಲಾಯಿತು.
   • ಗಣಕದಲ್ಲಿ ಕನ್ನಡ ಬಳಸುವ ವಿಚಾರವನ್ನು ಯಾರೂ ಯಾವುದೇ ಕುಂಟುನೆಪಗಳನ್ನು ತೆಗೆಯುವಂತಿಲ್ಲ . ತಾಂತ್ರಿಕ ಸಮಸ್ಯೆಗಳನ್ನಂತೂ ಒಡ್ಡುವಂತೆಯೇ ಇಲ್ಲ
   • ಗಣಕೀಕರಣವು ಕನ್ನಡದಲ್ಲಿ ಆಗಬೇಕೆಂಬ ಕನ್ನಡಿಗರ ಬೇಡಿಕೆಯನ್ನು ಯಾರೇ ಆಗಲಿ ಮಾನ್ಯ ಮಾಡಬೇಕಾಗುತ್ತದೆ.
   • ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more