Get Updates
Get notified of breaking news, exclusive insights, and must-see stories!

ಗುಜರಾತ್‌ನಲ್ಲಿ ಮತ್ತೆ ಲಘು ಭೂಕಂಪ : 25 ಜನರಿಗೆ ಗಾಯ

ಅಹಮದಾಬಾದ್‌ : ಜನವರಿ 26ರಂದು ಗಢಗಢ ನಡುಗಿ ಸಾವಿರಾರು ಜನರನ್ನು ಬಲಿತೆಗೆದುಕೊಂಡ ವಸುಂಧರೆ ಮತ್ತೆ ಮತ್ತೆ ತಾನೂ ನಡುಗಿ, ಗುಜರಾತ್‌ ನಿವಾಸಿಗಳನ್ನೂ ನಡುಗಿಸುತ್ತಿದ್ದಾಳೆ. ಗುರುವಾರ ರಾತ್ರಿ ಸಹ 10.25ರ ಸಮಯದಲ್ಲಿ ಸುಮಾರು 30 ಸೆಕೆಂಡ್‌ಗಳ ಕಾಲ ಕಚ್‌, ಅಹಮದಾಬಾದ್‌ ಸುತ್ತಮುತ್ತ ಭೂಮಿ ಕಂಪಿಸಿತು.

ಈ ಲಘು ಭೂಕಂಪದಲ್ಲಿ ಕನಿಷ್ಠ 25 ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಭೂಮಿ ನಡುಗುತ್ತಿದ್ದಂತೆಯೇ ಭಯಭೀತರಾದ ಜನತೆ ಮನೆಯಿಂದ ಹೊರಗೆ ಬರುವ ಪ್ರಯತ್ನದಲ್ಲಿ ಮಹಡಿ, ಕಾಂಪೌಂಡ್‌ಗಳಿಂದ ಹಾರಿ ಗಾಯಗೊಂಡಿದ್ದಾರೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 5.3 ಇತ್ತೆಂದು ದಾಖಲಾಗಿದೆ. ದೆಹಲಿಯ ಭೂಕಂಪ ಮಾಪನ ಕೇಂದ್ರ ಗುರುವಾರದ ಭೂಕಂಪವನ್ನು ದೃಢಪಡಿಸಿದೆ.

ಅಹಮದಾಬಾದ್‌ನಲ್ಲಿ ಗುರುವಾರ ರಾತ್ರಿ ಮತ್ತೆ ಜನರಲ್ಲಿ ಆತಂಕ, ಭಯ ಮನೆ ಮಾಡಿತ್ತು. ಜನರು ಮನೆಗಳ ಒಳಗೆ ಹೋಗಲು ಭಯಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೊರೆಯುತ್ತಿದ್ದ ಚಳಿಯಲ್ಲೂ ಭಯದಿಂದ ಬೆವರುತ್ತಿದ್ದ ಜನತೆ ಭೂಮಿ ಕಂಪಿಸುತ್ತಿದ್ದಂತೆ ಮನೆಗಳಿಂದ ಹೊರಗೋಡಿ ಬಂದು ಬಯಲಿನಲ್ಲಿ ರಕ್ಷಣೆ ಪಡೆದರು. ಮತ್ತೆ ಮತ್ತೆ ಸಂಭವಿಸುತ್ತಿರುವ ಭೂಕಂಪ ಗುಜರಾತ್‌ ಜನತೆಯ ನಿದ್ದೆ ಗೆಡಿಸಿದೆ.

ಸ್ಥಳೀಯ ನಾಗರಿಕರ ಪ್ರಕಾರ ಗುರುವಾರ ರಾತ್ರಿ ಸಂಭವಿಸಿದ ಭೂಕಂಪದ ತೀವ್ರತೆ ಭೂಕಂಪಾನಂತರದ ನಡುಕಕ್ಕಿಂತಲೂ ತುಸು ಹೆಚ್ಚಾಗೇ ಇತ್ತು. ಹಲವು ದೂರವಾಣಿ ಸಂಪರ್ಕಗಳು ಕಡಿತವಾಗಿದ್ದು, ವಿದ್ಯುತ್‌ ಸಹ ಕೈಕೊಟ್ಟಿತ್ತು. ಹೆಚ್ಚಿನ ಹಾನಿ ಆದ ಬಗ್ಗೆ ವರದಿಗಳು ಬಂದಿಲ್ಲ.

ಮುಖಪುಟ
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+