Get Updates
Get notified of breaking news, exclusive insights, and must-see stories!

ಕಾರವಾರದಲ್ಲಿ 25ರಂದು ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರದಾನ

ಕಾರವಾರ : ಕನ್ನಡ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 25ರಂದು ಕಾರವಾರದಲ್ಲಿ ಜರುಗಲಿದೆ. ಈ ವಿಷಯವನ್ನು ಅಕಾಡಮಿ ಅಧ್ಯಕ್ಷ ಗಿರೆಡ್ಡಿ ಗೋವಿಂದರಾಜ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 1999ರ ಸಾಲಿನ ಕೃತಿಗಳಿಗೆ ಪ್ರಶಸ್ತಿ ಪಡೆದಿರುವ 20 ಲೇಖಕರಿಗೆ ಹಾಗೂ 2000ದ ಸಾಲಿನ ಗೌರವ ಆಯ್ಕೆಯಾಗಿರುವ ಐವರಿಗೆ 25ರಂದು ಇಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ಹೇಳಿದರು.

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌, ಖ್ಯಾತ ಸಾಹಿತಿ ಎಸ್‌.ಎಲ್‌. ಭೈರಪ್ಪ ಮೊದಲಾದವರು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ಜತೆಗೆ ಕಾರವಾರದಲ್ಲಿ ಅಕಾಡಮಿಯ ಸರ್ವ ಸದಸ್ಯರ ಸಭೆಯೂ ನಡೆಯುತ್ತಿದೆ.

ಪ್ರಶಸ್ತಿ ಪುರಸ್ಕೃತರಿವರು : ಗೌರವ ಪ್ರಶಸ್ತಿ - ಬಿ.ಆರ್‌. ವಾಡಪ್ಪಿ, ಡಾ. ರಾಮೇಗೌಡ, ಡಾ.ಸಿ.ಎನ್‌. ರಾಮಚಂದ್ರನ್‌, ಕುಂ. ವೀರಭದ್ರಪ್ಪ, ಮಾಲತಿ ಪಟ್ಟಣಶೆಟ್ಟಿ.

ಪುಸ್ತಕ ಪ್ರಶಸ್ತಿ - ದೇಶ ಕುಲಕರ್ಣಿ, ಎಚ್‌. ನಾಗವೇಣಿ, ಬಾನು ಮುಷ್ತಾಕ್‌, ಎಲ್‌.ಎನ್‌. ಮುಕುಂದರಾಜ್‌, ಆರ್‌.ವಿ. ಕುಲಕರ್ಣಿ, ಎಂ. ರಾಜಗೋಪಾಲ್‌, ಬಿ.ಪಿ. ರಾಧಾಕೃಷ್ಣ, ಬಸವರಾಜ ಕಲ್ಗುಡಿ, ಶಿವಾನಂದ ಎಸ್‌. ವಿರಕ್ತಮಠ, ಪಳಕಳ ಸೀತಾರಾಮ ಭಟ್ಟ, ಕೆ. ಪುಟ್ಟಸ್ವಾಮಿ, ಕೃಪಾಕರ ಸೇನಾನಿ, ಶೈಲಜ ಹಿರೇಮಠ, ಎಚ್‌.ಎಸ್‌. ಶ್ರೀಮತಿ, ಕರೀಗೌಡ ಬೀಚನಹಳ್ಳಿ, ಎಲ್‌.ಜಿ. ಮೀರಾ, ಸಿದ್ಧಗಂಗಯ್ಯ ಕಂಬಾಳು, ಕಾರ್ಗಲ್‌ ಭೋಗರಾಜ್‌, ಓ.ಎಲ್‌ ನಾಗಭೂಷಣ ಸ್ವಾಮಿ, ಪ್ರಣವ ಮಂಜರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+