ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷಾಂತ್ಯದಲ್ಲಿ ಎನ್‌ಎಲ್‌ಎಯ ಲಘು ಸಂಚಾರಿ ವಿಮಾನ ಬಾನಿಗೆ

By Staff
|
Google Oneindia Kannada News

ಬೆಂಗಳೂರು : ರಾಷ್ಟ್ರೀಯ ಏರೋಸ್ಪೇಸ್‌ ಪ್ರಯೋಗಾಲಯ (ಎನ್‌ಎಎಲ್‌) ಕಳೆದ 10 ವರ್ಷಗಳಿಂದ ಅಭಿವೃದ್ಧಿ ಪಡಿಸಿರುವ ಬಹು ಉಪಯೋಗಿ ಲಘು ಸಂಚಾರಿ ವಿಮಾನ ಈ ವರ್ಷಾಂತ್ಯದಲ್ಲಿ ಬಾನಿಗೆ ಹಾರಲಿದೆ.

ಮೊದಲು ರಷ್ಯಾದ ವಿನ್ಯಾಸ ಕೇಂದ್ರದೊಡನೆ ಸೇರಿ ಪ್ರಾರಂಭಿಸಿದ ಸರಸ್‌ ಡ್ಯುಯೆಟ್‌ ಎಂಬ ಈ ಲಘು ವಿಮಾನ ಅಭಿವೃದ್ಧಿ ಯೋಜನೆ ನಂತರ ಎನ್‌ಎಲ್‌ಎಯ ಪೂರ್ಣ ಜವಾಬ್ದಾರಿಗೆ ಬಿತ್ತು. ಇದ್ದಕ್ಕಿದ್ದಂತೆ ರಷ್ಯಾ ಕೈಕೊಟ್ಟಿತು. ಹಣ, ತಾಂತ್ರಿಕ ನೆರವು ಸ್ಥಗಿತಗೊಂಡಿತು. ಈ ನಡುವೆಯೂ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ ಕೊಟ್ಟ ಸುಮಾರು 130 ಕೋಟಿ ರುಪಾಯಿಗಳ ನೆರವಿನಿಂದ ಯೋಜನೆಯನ್ನು ಎನ್‌ಎಲ್‌ಎ ಮುಂದುವರೆಸಿ, ತನ್ನ ಗುರಿ ತಲುಪಿತು.

ಹದಿನಾಲ್ಕು ಆಸನಗಳ ಈ ವಿಮಾನವನ್ನು ಜನ ಸಂಚಾರಕ್ಕಷ್ಟೇ ಅಲ್ಲದೆ ಆ್ಯಂಬ್ಯುಲೆನ್ಸ್‌ ಆಗಿ ಕೂಡ ಬಳಸಬಹುದಾಗಿದೆ. ಎರಡು ಪ್ಯಾಟ್‌ ಹಾಗೂ ವಿಟ್ನಿ ಕೆನಾಟಾ ಪಿಟಿ 6ಎ ಎಂಜಿನುಗಳನ್ನು ಅಳವಡಿಸಲಾಗಿರುವ ವಿಮಾನದ ಪ್ರೊಪೆಲ್ಲೆಂಟ್‌ ವೇಗ 2000 ಆರ್‌ಪಿಎಂ (ನಿಮಿಷಕ್ಕೆ 2000 ಸುತ್ತು). ಗಂಟೆಗೆ 520 ಕಿ.ಮೀ. ಗರಿಷ್ಠ ವೇಗದಲ್ಲಿ ಸಂಚರಿಸಬಲ್ಲ ಈ ವಿಮಾನದ ತೂಕ 6100 ಕೆ.ಜಿ.

ಎನ್‌ಎಎಲ್‌ ಅಲ್ಲದೆ 30 ಖಾಸಗಿ ಕಂಪನಿಗಳೂ ವಿಮಾನದ ಅಭಿವೃದ್ಧಿ ಕಾರ್ಯದಲ್ಲಿ ನಿರತವಾಗಿವೆ. ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ 5 ವಿಭಾಗಗಳೂ ಈ ಕಾರ್ಯಕ್ಕೆ ಕೈಜೋಡಿಸಿವೆ. 2003ರ ಹೊತ್ತಿಗೆ ನಾಗರಿಕ ವಿಮಾನ ಯಾನ ಇಲಾಖೆಯ ಪ್ರಧಾನ ನಿರ್ದೇಶಕರು ಇದಕ್ಕೆ ಪೂರ್ಣ ಪ್ರಮಾಣದ ಹಾರಲು ಯೋಗ್ಯ ಪ್ರಮಾಣ ಪತ್ರ ಕೊಡುವ ನಿರೀಕ್ಷೆಯಿದೆ.

ಭಾರತದೊಂದಿಗೆ ರಕ್ಷಣಾ ಯೋಜನೆಗಳ ಒಡಂಬಡಿಕೆಗೆ ತುದಿಗಾಲಲ್ಲಿ ಇಸ್ರೇಲ್‌

ಏರೋ ಇಂಡಿಯಾ 2001ರಲ್ಲಿ ಮುಖ್ಯ ಭೂಮಿಕೆ ವಹಿಸಿರುವ ಇಸ್ರೇಲ್‌ ಮಾನವ ರಹಿತ ವಿಮಾನ ಮತ್ತಿತರ ನೌಕಾ ಯಂತ್ರಗಳ ನಿರ್ಮಾಣದಲ್ಲಿ ಭಾರತದೊಂದಿಗೆ ಒಡಂಬಡಿಕೆಗೆ ಉತ್ಸುಕವಾಗಿದೆ ಎಂದು ಸೈಬ್ಯಾಟ್‌ನ ಇಸ್ರೇಲ್‌ನ ಪ್ರಾದೇಶಿಕ ನಿರ್ದೇಶಕ ಕರ್ನಲ್‌ ಯೋಪಾಶ್‌ ರುಬಿನ್‌ ಶುಕ್ರವಾರ ತಿಳಿಸಿದ್ದಾರೆ.

ವಿಮಾನ ಹಾಗೂ ನೌಕಾ ಯಂತ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಟರ್ಕಿ, ಚಿಲಿ, ಥೈಲ್ಯಾಂಡ್‌, ಬ್ರೆಜಿಲ್‌, ರುಮೇನಿಯಾ ಮೊದಲಾದ ದೇಶಗಳೊಂದಿಗೆ ಈಗಾಗಲೇ ಇಸ್ರೇಲ್‌ನ 2 ಬಿಲಿಯನ್‌ ಡಾಲರ್‌ ಮೊತ್ತದ ರಕ್ಷಣಾ ಉದ್ಯಮ ಒಪ್ಪಂದ ಮಾಡಿಕೊಂಡಿದೆ. ಇಸ್ರೇಲ್‌ನ ಕೆಲವು ಕಂಪನಿಗಳು ಭಾರತದೊಂದಿಗೆ ಈಗಾಗಲೇ ಕೆಲವು ರಕ್ಷಣಾ ಯೋಜಜನೆಗಳ ಒಪ್ಪಂದ ಮಾಡಿಕೊಂಡಿವೆ. ಈ ಸಂಬಂಧವನ್ನು ಇನ್ನಷ್ಟು ಉತ್ತಮಪಡಿಸುವುದೇ ನಮ್ಮ ಉದ್ದೇಶ ಎಂದು ರುಬಿನ್‌ ಹೇಳಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X