Get Updates
Get notified of breaking news, exclusive insights, and must-see stories!

ಧರ್ಮದರ್ಶನದಲ್ಲಿ ನಾಗಪ್ಪ, ಕೆಲಸಕೊಡಿಸಲುಮುಖ್ಯಮಂತ್ರಿಗೆ ಮೊರೆ

ಬೆಂಗಳೂರು : ವೀರಪ್ಪನ್‌ ಅಡಗುತಾಣದಿಂದ ಓಡಿ ಬಂದ ಒತ್ತೆಯಾಳು ನಾಗಪ್ಪ ಹೊಟ್ಟೆಪಾಡಿಗೊಂದು ಉದ್ಯೋಗ, ಸ್ವಲ್ಪ ಹಣಕಾಸಿನ ನೆರವು ಹಾಗೂ ಗೃಹಮಂಡಳಿ ವತಿಯಿಂದ ಮನೆ ಕೊಡಿಸುವಂತೆ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಗುರುವಾರ ಬೆಳಿಗ್ಗೆ ಧರ್ಮದರ್ಶನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಾಗಪ್ಪ ತಮಗೆ ನೆರವು ನೀಡುವಂತೆ ಮನವಿ ಸಲ್ಲಿಸಿದರು. ಸದ್ಯಕ್ಕೆ ತಮಗೆ ಯಾವುದೇ ಉದ್ಯೋಗವಿಲ್ಲ . ಆದಾಯದ ಮೂಲಗಳೂ ಇಲ್ಲ . ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ನೆರವು ನೀಡಬೇಕೆಂದು ಮುಖ್ಯಮಂತ್ರಿಗಳನ್ನು ಕೋರಿದರು. ನಾಗಪ್ಪ ಅವರ ಮನವಿಯನ್ನು ಸಾವಧಾನದಿಂದ ಆಲಿಸಿದ ಮುಖ್ಯಮಂತ್ರಿಗಳು, ಅವರ ಮನವಿಯನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್‌ರೊಂದಿಗೆ ವನವಾಸ ಅನುಭವಿಸುವ ಮುನ್ನ , ನಾಗಪ್ಪನವರು ರಾಜ್‌ ಕ್ಯಾಂಪ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ವೀರಪ್ಪನ್‌ ಸೆರೆಯಿಂದ ಓಡಿಬಂದ ನಂತರ ಕೆಲಕಾಲ ಅಜ್ಞಾತವಾಸದಲ್ಲಿದ್ದ ಅವರು, ಆನಂತರ ಧಾರವಾಡ ಜಿಲ್ಲೆಯ ತಮ್ಮ ಸ್ವಗ್ರಾಮ ಮಾರಡಗಿಗೆ ತೆರಳಿದ್ದರು. ಪತ್ನಿ ಹಾಗೂ ಓರ್ವ ಪುತ್ರಿಯನ್ನು ಹೊಂದಿರುವ ನಾಗಪ್ಪ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ವೀರಪ್ಪ ನ್‌ ಸೆರೆಯಿಂದ ಓಡಿಬಂದ ಧೀರ ಎಂದು ನಮ್ಮ ಕನ್ನಡ ಹೋರಾಟಗಾರರು ನಾಗಪ್ಪ ಅವರಿಗೆ ಹಲವಾರು ಕಡೆಗಳಲ್ಲಿ ಸನ್ಮಾನ ಮಾಡಿದ್ದಾರೆ. ಆದರೆ, ಅದ್ಯಾವುದೂ ಅವರ ಹೊಟ್ಟೆ ತುಂಬಿಸಿಲ್ಲ . ಪ್ರಸ್ತುತ ನಾಗಪ್ಪ ಮುಖ್ಯಮಂತ್ರಿಗಳ ಮೊರೆ ಹೊಕ್ಕಿದ್ದಾರೆ. ಕಲಿಯುಗದಲ್ಲೂ ಕೃಷ್ಣ ಕರುಣೆ ಕುಚೇಲನ ಮೇಲೆ ಹರಿಯುತ್ತದೊ ನೋಡಬೇಕು.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+