ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಣಿಕೆ ಡಬ್ಬ

By Super
|
Google Oneindia Kannada News

ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ, ಕೇರ್‌ ಆಫ್‌ ಕಾರ್ಯದರ್ಶಿ, ಪಿಎಂಒ, ಸೌತ್‌ಬ್ಲಾಕ್‌, ನವದೆಹಲಿ - 110011. ಈ ವಿಳಾಸಕ್ಕೆ ಚೆಕ್‌ ಹಾಗೂ ಡಿಡಿಗಳನ್ನು ಕಳುಹಿಸಬಹುದು. ಅಥವಾ, ಸೆಂಟ್ರಲ್‌ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ಗಳ ಯಾವುದೇ ಶಾಖೆಯಲ್ಲಿ ಚೆಕ್‌ ಅಥವಾ ಡಿಡಿ ರೂಪದಲ್ಲಿ ಪ್ರಧಾನಿಗಳ ಪರಿಹಾರ ನಿಧಿಗೆ ನಿಮ್ಮ ದೇಣಿಗೆ ನೀಡಲು ಅವಕಾಶವಿದೆ.

ಗುಜರಾತ್‌ ಭೂಕಂಪ ಸಂತ್ರಸ್ತರಿಗೆ ಸಹಾಯ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿ ಸ್ಥಾಪಿಸಿದೆ. ಸಹೃದಯರು ಹಣ ರೂಪದ ಸಹಾಯವನ್ನು ಚೆಕ್‌ ಅಥವಾ ಡಿಡಿ ರೂಪದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿ(ಗುಜರಾತ್‌ ಭೂಕಂಪ)ಗೆ ಕಳುಹಿಸಬಹುದು. ವಿಳಾಸ : ಗೋನಲ್‌ ಭೀಮಪ್ಪ , ಕೊಠಡಿ ಸಂಖ್ಯೆ 235, 2 ನೇ ಕೊಠಡಿ, ವಿಧಾನಸೌಧ, ಬೆಂಗಳೂರು - 1. ದೂರವಾಣಿ ಸಂಖ್ಯೆ 080-2251792 (ಕಚೇರಿ) ಹಾಗೂ 080-2251792(ವಸತಿ) ಗಳಲ್ಲಿ ಭೀಮಪ್ಪನವರನ್ನು ಸಂಪರ್ಕಿಸಬಹುದು.

ಪ್ರಧಾನ ಕಾರ್ಯದರ್ಶಿ, ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ ರಾಜ್ಯಶಾಖೆ, ನಂ. 1-1, ತಿಮ್ಮಯ್ಯ ರಸ್ತೆ , ಕೆಎಸ್‌ಎಫ್‌ಸಿ ಕಟ್ಟಡ ಸಂಕೀರ್ಣ, ಬೆಂಗಳೂರು- 52.
ರಾಷ್ಟ್ರೀಯ ಭೂಕಂಪ ನಿಧಿ, ಉಳಿತಾಯ ಖಾತೆ ಸಂಖ್ಯೆ 10316, ಕರ್ನಾಟಕ ಪ್ರದೇಶ ಬಲಿಜ ಸಂಘ, 1 ನೇ ಮುಖ್ಯರಸ್ತೆ , ಚಾಮರಾಜಪೇಟೆ, ಬೆಂಗಳೂರು - 18.

ಗುಜರಾತ್‌ ಭೂಕಂಪ ಸಂತ್ರಸ್ತರಿಗೆ ನೆರವು ಒದಗಿಸುವ ಕಾರ್ಯಕ್ಕಾಗಿ ರಾಜ್ಯ ಸರ್ಕಾರ ಏಳು ಹಿರಿಯ ಅಧಿಕಾರಿಗಳ ತಂಡವನ್ನು ರಚಿಸಿದೆ. ಹಣಕಾಸು ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯ ನೋಡಲ್‌ ಆಫೀಸರ್‌. ಅವರ ಸಂಪರ್ಕ ಸಂಖ್ಯೆ 080- 2257336(ಕಚೇರಿ), 080- 5272266 (ಮನೆ). ಔಷಧಿ ಪರಿಹಾರ ಹೊಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತ ಸಂಜಯ್‌ ಕೌಲ್‌ ಹೊತ್ತಿದ್ದಾರೆ. ಅವರ ಸಂಪರ್ಕ ಸಂಖ್ಯೆ, 080- 2874037(ಕ) ಹಾಗೂ 080- 6782444(ಮ). ಬೆಂಗಳೂರು ವಿಭಾಗೀಯ ಆಯುಕ್ತ ಟಿ. ತಿಮ್ಮೇಗೌಡ ಬೆಂಗಳೂರಿನ ಸಂಯೋಜಕರು. ಬೆಂಗಳೂರು ನಗರ ಮತ್ತು ಗ್ರಾಮೀಣ ವಿಭಾಗಗಳ ಡೆಪ್ಯುಟಿ ಕಮೀಷನರ್‌ಗಳು ಪರಿಹಾರ ನಿಧಿ ಮತ್ತು ಸಾಮಗ್ರಿಗಳಿಗೆ ಸಂಬಂಧಿಸಿದ ಜವಾಬ್ದಾರಿ ಹೊತ್ತಿದ್ದಾರೆ. ಹಣಕಾಸು ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಆಯುಕ್ತ ವಿಜಯ್‌ಕುಮಾರ್‌ ಪರಿಹಾರ ಸಾಮಗ್ರಿಗಳ ನೇತೃತ್ವ ವಹಿಸಿದ್ದಾರೆ.
ರಾಜ್ಯದ ಬಹುತೇಕ ಎಲ್ಲಾ ಪತ್ರಿಕಾ ಸಮೂಹಗಳು ಪರಿಹಾರ ನಿಧಿಯನ್ನು ಸ್ಥಾಪಿಸಿವೆ. ಅವುಗಳೆಂದರೆ-

1. ಭೂಕಂಪ ಸಂತ್ರಸ್ತರ ಪರಿಹಾರ ನಿಧಿ, ವಿಜಯ ಕರ್ನಾಟಕ, ಹುಬ್ಬಳ್ಳಿ

2. ಡೆಕ್ಕನ್‌ ಹೆರಾಲ್ಡ್‌ - ಪ್ರಜಾವಾಣಿ ರಿಲೀಫ್‌ ಟ್ರಸ್ಟ್‌ , ಪ್ರಜಾವಾಣಿ ಕಚೇರಿ, 75, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು- 1

3. ಸಂಯುಕ್ತ ಕರ್ನಾಟಕ, ಗುಜರಾತ್‌ ಭೂಕಂಪ ಪರಿಹಾರ ನಿಧಿ, ಸಂಯುಕ್ತ ಕರ್ನಾಟಕ ಕಾರ್ಯಾಲಯ, ಕೊಪ್ಪೀಕರ ರಸ್ತೆ , ಹುಬ್ಬಳ್ಳಿ ಅಥವಾ ಸಂಯುಕ್ತ ಕರ್ನಾಟಕ, ಗುಜರಾತ್‌ ಭೂಕಂಪ ಪರಿಹಾರ ನಿಧಿ, ನಂ. 2, ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ರಸ್ತೆ , ಬೆಂಗಳೂರು- 25 ಅಥವಾ ಸಂಯುಕ್ತ ಕರ್ನಾಟಕ, ಗುಜರಾತ್‌ ಭೂಕಂಪ ಪರಿಹಾರ ನಿಧಿ, ವಲ್ಲಭಭಾಯಿ ಪಟೇಲ್‌ ಚೌಕ, ಗುಲ್ಬರ್ಗಾ.

4. ಗುಜರಾತ್‌ ಭೂಕಂಪ ಪರಿಹಾರ ನಿಧಿ, ಜನ ಮಾಧ್ಯಮ ಪ್ರಕಾಶನ ಲಿ, ನಂ. 332, ದಾರು ಸಲಾಂ ಬಿಲ್ಡಿಂಗ್‌, ಕ್ವೀನ್ಸ್‌ ರಸ್ತೆ, ಬೆಂಗಳೂರು- 52

ಪತ್ರಿಕೆ ಸ್ಥಾಪಿಸಿರುವ ಪರಿಹಾರ ನಿಧಿಗಳಿಗೆ ಚೆಕ್‌ ಅಥವಾ ಡಿಡಿ ರೂಪದಲ್ಲಿ ನಿಮ್ಮ ನೆರವನ್ನು ಕಳುಹಿಸಬಹುದು. ನಿಮ್ಮ ಕೊಡುಗೆಗಳಿಗೆ ವರಮಾನ ತೆರಿಗೆ ಕಾಯ್ದೆ 1961 ಸೆಕ್ಷನ್‌ 80- ಜಿ ಪ್ರಕಾರ ತೆರಿಗೆ ವಿನಾಯಿತಿ ಲಭ್ಯ.

English summary
Karnataka lends its helping hand to Gujarat earth quake victims
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X