Get Updates
Get notified of breaking news, exclusive insights, and must-see stories!

ಬಡ ರೋಗಿಗಳ ಹೃದಯಕ್ಕೆ ಹತ್ತಿರವಾದ ಪೇಸ್‌ಮೇಕರ್‌

ಬೆಂಗಳೂರು : ಬಡ ಹೃದ್ರೋಗಿಗಳ ಪಾಲಿಗೆ ವರದಾನ ಎಂದು ಬಣ್ಣಿಸಲಾಗಿರುವ ಪೇಸ್‌ಮೇಕರ್‌ ಬ್ಯಾಂಕನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಎ.ಬಿ. ಮಲಕರೆಡ್ಡಿ ನಗರದ ಮಣಿಪಾಲ್‌ ಹಾರ್ಟ್‌ ಫೌಂಡೇಶನ್‌ನಲ್ಲಿ ಮಂಗಳವಾರ ಉದ್ಘಾಟಿಸಿದರು.

ಹಾರ್ಟ್‌ ಫೌಂಡೇಶನ್‌ನ ವೈದ್ಯ ಡಾ. ದೇವಿ ಪ್ರಸಾದ್‌ ಶೆಟ್ಟಿ ಅವರಿಗೆ ಪೇಸ್‌ಮೇಕರ್‌ಗಳನ್ನು ಸಾಂಕೇತಿಕವಾಗಿ ನೀಡುವ ಮೂಲಕ ಮಲಕರೆಡ್ಡಿ ಬ್ಯಾಂಕ್‌ಗೆ ಚಾಲನೆ ನೀಡಿದರು. ಬಡ ರೋಗಿಗಳಿಗೆ ಉಚಿತವಾಗಿ ಪೇಸ್‌ಮೇಕರ್‌ಗಳನ್ನು ವಿತರಿಸಲು ನಿರ್ಧರಿಸಿರುವ ಹಾರ್ಟ್‌ ಫೌಂಡೇಶನ್‌ನ ನಿಲುವನ್ನು ಅವರು ಶ್ಲಾಘಿಸಿದರು. ಜಯದೇವ ಮುಂತಾದ ಪ್ರಮುಖ ಆಸ್ಪತ್ರೆಗಳಲ್ಲಿ ಇಂಥಾ ಬ್ಯಾಂಕ್‌ಗಳನ್ನು ಸ್ಥಾಪಿಸುವ ಮೂಲಕ ಬಡ ರೋಗಿಗಳಿಗೆ ದುಬಾರಿ ಬೆಲೆಯ ಪೇಸ್‌ಮೇಕರ್‌ಗಳನ್ನು ಒದಗಿಸುವಂತೆ ಮಲಕರೆಡ್ಡಿ ರೋಟರಿಕ್ಲಬ್‌ಗೆ ಮನವಿ ಮಾಡಿದರು.

ಹಾರ್ಟ್‌ಬೀಟ್‌ ಇಂಟರ್‌ನ್ಯಾಶನಲ್‌, ಅಮೆರಿಕ ಆಸ್ಪತ್ರೆಗಳಲ್ಲಿನ ವೈದ್ಯರ ಒಕ್ಕೂಟ, ರೋಟರಿ ಇಂಟರ್‌ನ್ಯಾಶನಲ್‌ ಹಾಗೂ ಕಾರ್ಡಿಯಾಕ್‌ ಪೇಸ್‌ಮೇಕರ್ಸ್‌ಗಳ ತಯಾರಕರ ಸಹಯೋಗದಲ್ಲಿ ಈ ಬ್ಯಾಂಕ್‌ ಸ್ಥಾಪಿತವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಬಡ ರೋಗಿಗಳಿಗೆ ಸಹಾಯ ಮಾಡುವುದು ಬ್ಯಾಂಕ್‌ನ ಉದ್ದೇಶ.

ಹಾರ್ಟ್‌ ಫೌಂಡೇಶನ್‌ನ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಸುಭಾಷ್‌ಚಂದ್ರ ಪೇಸ್‌ಮೇಕರ್‌ ಬಗ್ಗೆ ವಿವರಗಳನ್ನು ನೀಡಿದರು. ರೋಗಿಯಾಬ್ಬನಿಗೆ ಪೇಸ್‌ಮೇಕರ್‌ ಅಳವಡಿಸಲು 80 ಸಾವಿರ ರುಪಾಯಿ ಖರ್ಚಾಗುತ್ತದೆ. ಈಗಾಗಲೇ ನಾಲ್ವರು ರೋಗಿಗಳಿಗೆ ಉಚಿತವಾಗಿ ಪೇಸ್‌ಮೇಕರ್‌ಗಳನ್ನು ಹಾರ್ಟ್‌ ಫೌಂಡೇಶನ್‌ ಅಳವಡಿಸಿದ್ದು , ನಾಲ್ವರೂ ಆರೋಗ್ಯವಾಗಿದ್ದಾರೆ. ಪ್ರತಿ ತಿಂಗಳು 10 ರಿಂದ 15 ಪೇಸ್‌ ಮೇಕರ್‌ಗಳನ್ನು ಫೌಂಡೇಶನ್‌ನಲ್ಲಿ ಅಳವಡಿಸಲು ಸಾಧ್ಯವಿದೆ ಎಂದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+