ರಾಜ್ಯದಲ್ಲಿ ನಕಲಿ ಸಾಫ್ಟ್‌ವೇರ್ ನಿರ್ಮೂಲನಾ ಯೋಜನೆ ಜಾರಿ
ಬೆಂಗಳೂರು : ನಕಲಿ ಸಾಫ್ಟ್‌ವೇರ್ ಜಾಲಗಳನ್ನು ಬಯಲಿಗೆಳೆಯುವ ಹಾಗೂ ಅದರ ಬಗೆಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ದೇಶದಲ್ಲೇ ಮೊದಲ ಬಾರಿಗೆ ಯೋಜಿತ ಕಾರ್ಯಾಚರಣೆ ಜಾರಿಗೆ ತಂದಿದೆ.
ಶನಿವಾರ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯ ಮೊದಲ ಸಭೆ ಮುಂದಿನ ವರ್ಷ ಜನವರಿ ಹೊತ್ತಿಗೆ ಸರ್ಕಾರವನ್ನು ‘ನಕಲಿ ರಹಿತ ಸಂಸ್ಥೆ’ ಹಾಗೂ ಕರ್ನಾಟಕವನ್ನು ‘ನಕಲಿ ಜಾಲ ರಹಿತ ರಾಜ್ಯ’ವನ್ನಾಗಿಸುವ ಸಂಕಲ್ಪ ತೊಟ್ಟಿತು. ಸಭೆಯ ನಂತರ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕಳೆದ ವರ್ಷ ಸೆಪ್ಟೆಂಬರ್ 11ರಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಈ ಸಮಿತಿಯನ್ನು ರಚಿಸಿದ್ದರು. ಸರ್ಕಾರಿ ಪ್ರಾಸಿಕ್ಯೂಟರ್‌ಗಳು ಹಾಗೂ ಜಿಲ್ಲಾ ಮುಖ್ಯ ನ್ಯಾಯಾಧೀಶರಲ್ಲಿ ನಕಲಿ ಸಾಫ್ಟ್‌ವೇರ್ ಬಗೆಗೆ ತಿಳಿವಳಿಕೆ ಮೂಡಿಸುವುದು ಸಮಿತಿಯ ಕಾರ್ಯಕ್ರಮಗಳಲ್ಲಿ ಸೇರಿದೆ. ನಕಲಿ ಸಾಫ್ಟವೇರ್ ಹಾವಳಿ ಹತ್ತಿಕ್ಕಲು ಅಪರಾಧಿ ಪ್ರಕ್ರಿಯಾ ಸಂಹಿತೆಗೆ ತಿದ್ದುಪಡಿ ತರುವ ಅಥವಾ ಹೊಸ ಮಸೂದೆ ಜಾರಿಗೆ ತರುವ ಸಲಹೆಗಳನ್ನೂ ಸರ್ಕಾರ ಪರಿಶೀಲಿಸುತ್ತಿದೆ ಎಂದು ಖರ್ಗೆ ಹೇಳಿದರು.
10 ರಲ್ಲಿ 7 ನಕಲಿ , ಪ್ರಕರಣ ಇತ್ಯರ್ಥಕ್ಕೆ ವಿಶೇಷ ಕೋರ್ಟು: ಪ್ರಶ್ನೆಗಳಿಗೆ ಉತ್ತರಿಸುತ್ತಾ, ನಕಲಿ ಸಾಫ್ಟ್‌ವೇರ್ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ಕೋರ್ಟ್‌ಗಳನ್ನು ಸ್ಥಾಪಿಸುವ ಬಗೆಗೂ ಯೋಚಿಸಲಾಗುತ್ತಿದೆ ಎಂದರು. ಗೋಷ್ಠಿಯಲ್ಲಿ ಹಾಜರಿದ್ದ ಮಾಹಿತಿ ತಂತ್ರಜ್ಞಾನ ಕಾಯದರ್ಶಿ ವಿವೇಕ್ ಕುಲಕರ್ಣಿ, 10 ಕಂಪ್ಯೂಟರ್‌ಗಳ ಪೈಕಿ 7ರಲ್ಲಿ ನಕಲಿ ಸಾಫ್ಟ್‌ವೇರ್ ಬಳಸಲಾಗುತ್ತಿದೆ. ಪ್ರತಿಶತ 70ರಷ್ಟು ನಕಲಿ ಸಾಫ್ಟ್‌ವೇರ್ ಬಳಸಲಾಗುತ್ತಿದೆ. ಇಂಥ ಪ್ರಕರಣಗಳನ್ನು ಹತ್ತಿಕ್ಕಲು ದೇಶದಲ್ಲೇ ಮೊದಲ ಬಾರಿಗೆ ಯೋಜಿತ ಕಾರ್ಯಕ್ರಮ ಹಮ್ಮಿಕೊಂಡಿರುವ ಮೊದಲ ನಗರ ಬೆಂಗಳೂರು ಎಂದರು.
ಮೈಕ್ರೋಸಾಫ್ಟ್ ಕಾರ್ಪೊರೇಷನ್ನಿನ ಭಾರತದ ಶಾಖೆಯ ಮುಖ್ಯಸ್ಥ ರಾಜೀವ್ ನಾಯರ್ ಕೂಡ ಸಮಿತಿ ಸದಸ್ಯರಲ್ಲೊಬ್ಬರು. ನಮ್ಮ ದೇಶದ ಸಾಫ್ಟ್‌ವೇರ್ ಕಂಪನಿಗಳು ಹೊರನಾಡಿನಲ್ಲಿ ಹೆಸರು ಮಾಡುತ್ತಿದ್ದರೂ ನಮ್ಮಲ್ಲಿ ಬಳಸಲಾಗುತ್ತಿರುವ, ಅದರಲ್ಲೂ ವಿಶೇಷವಾಗಿ ಆಟಗಳ ಸಾಫ್ಟ್‌ವೇರ್‌ಗಳು ಬಹುತೇಕ ನಕಲಿ. ಮುಂದಿನ ವರ್ಷ ಜನವರಿ ಹೊತ್ತಿಗೆ ಸರ್ಕಾರದಲ್ಲಿ ಬಳಸಲಾಗುವ ಎಲ್ಲಾ ಸಾಫ್ಟ್‌ವೇರ್‌ಗಳು ಅಸಲಿ ಎಂಬುದನ್ನು ಖಾತ್ರಿ ಮಾಡಲು ಸಮಿತಿ ಪಣ ತೊಟ್ಟಿದೆ ಎಂದೂ ಅವರು ಹೇಳಿದರು.
(ಯುಎನ್‌ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications