ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಬದುಕಿನಲ್ಲಿ ಎಲ್ಲವೂ ಅನಿಶ್ಚಿತ ಎಂಬ ಸತ್ಯ ನಿಮಗೀಗ ಅರಿವಾಗತೊಡಗಿದೆ. ಎಲ್ಲ ಗಡಿಬಿಡಿಗಳನ್ನು ಪಕ್ಕಕ್ಕಿರಿಸಿ ಹಾಯಾಗಿ ಆಪ್ತರ ಜೊತೆ ಒಂದು ಸಿನಿಮಾ ನೋಡಲು ಈ ಹೊತ್ತು ಹೇಳಿ ಮಾಡಿಸಿದ ದಿನ.ವೃಷಭ : ಸದಾ ಹುಮ್ಮಸ್ಸಿನ ಜೊತೆಯಲ್ಲೆ ಸಾಗುವ ನೀವು ಅದಕ್ಕೊಂದಿಷ್ಟು ಕಡಿವಾಣ ಹಾಕಿಕೊಂಡರೆ ಒಳ್ಳೆಯದು. ಅತಿಯಾದರೆ ಅಮೃತವೂ ವಿಷ ಎಂಬುದು ನೆನಪಿರಲಿ.
ಮಿಥುನ : ಆಗುವುದೆಲ್ಲಾ ಒಳ್ಳೆಯದಕ್ಕೆ, ನೀವು ಎಲ್ಲಿ ದಾರಿ ತಪ್ಪಿದ್ದೀರಿ ಎಂದು ಯೋಚಿಸುತ್ತಾ ಕುಳಿತುಕೊಳ್ಳುವುದಕ್ಕಿಂತಾ ಹಳೆಯದನ್ನು ಬಿಡುವುದು ಉತ್ತಮ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದೀರಿ.
ಕಟಕ : ಈ ವೀಕೆಂಡ್ ನಿಮಗಾಗಿ ಹೇಳಿ ಮಾಡಿಸಿದಂತಿದೆ, ಹರಟೆ, ರಂಜನೆ... ಏನೇನೆಲ್ಲಾ ಸಾಧ್ಯ ಅದಕ್ಕಾಗಿ ಇನ್ನಷ್ಟು ಬಿಡುವು ಮಾಡಿಕೊಳ್ಳಬೇಕು. ಗೋ ಅಹೆಡ್.
ಸಿಂಹ : ಪರರ ಚಿಂತೆ ಮಾಡುವವನ ಮೆಚ್ಚ ಕೂಡಲಸಂಗಮದೇವಾ ಅನ್ನುವ ಮಾತನ್ನು ನಿಮಗೀಗ ನೆನಪಿಸಲೇಬೇಕಿದೆ. ಜಗತ್ತಿನ ಎಲ್ಲ ಬಾರವೇನೂ ನಿಮ್ಮ ಮೇಲೆ ಇಲ್ಲ. ಚಿಂತೆಗಳ ಗಂಟು ಕಳಚಿಡಿ.
ಕನ್ಯಾ : ಅವಕಾಶವಂಬ ಮಿಂಚು ತೀರಾ ಅಪರೂಪ. ಅದು ಜೀವನದಲ್ಲಿ ಒಮ್ಮೆ ಮಾತ್ರ ಬರುತ್ತದೆ. ಹಿಡಿದುಕೊಳ್ಳುವ ಚಾಕುಚಕ್ಯತೆ ನಿಮ್ಮಲ್ಲಿದೆ ವಿಶ್ವಾಸದಿಂದ ಮುಂದುವರಿಯಿರಿ.
ತುಲಾ : ಖರ್ಚಿಗೆ ಕಡಿವಾಣ ಹಾಕಿ. ಸಂತಸಕ್ಕೆ, ದುಃಖಕ್ಕೆ ಎಲ್ಲಕೂ ಹಣ ವ್ಯವ ಮಾಡಿ ಪರಿಹಾರ ಕಂಡುಕೊಳ್ಳುವ ಮಟ್ಟಕ್ಕಿಳಿಯಬೇಡಿ. ಅವಸರ ಅನಾಹುತಕ್ಕೆ ನಾಂದಿಯಾದೀತು ಜೋಕೆ.
ವೃಶ್ಚಿಕ : ಇಷ್ಟು ದಿನ ನಿರಾಳತೆ ಎಂದರೆ ಏನು ಎಂದು ಕೇಳುತ್ತಿದ್ದ ಜನ ನೀವು. ಹಾಗೇಂದರೇನೆಂದು ಇವತ್ತು ಗೊತ್ತಾಗಲಿದೆ. ಬ್ರೇಕೇ ಇಲ್ಲದ ಸಂತಸದ ಧಾರೆ ಸದಾ ಹರಿಯಲಿದೆ.
ಧನಸ್ಸು : ಯಾಕೋ ಬಿಟ್ಟ ಬಾಣಗಳೆಲ್ಲಾ ದಿಕ್ಕು ತಪ್ಪುತ್ತವೆ ಎನಿಸುತ್ತದೆಯಲ್ಲವೇ? ಹೌದು ಸಂದರ್ಭವೇ ಹಾಗಿದೆ. ಎಲ್ಲವನ್ನೂ ಕಾಲಕ್ಕೆ ತಕ್ಕಂತೆ ಅನ್ವಯಿಸಿಕೊಳ್ಳಬೇಕು, ಅರ್ಥೈಸಿಕೊಳ್ಳಬೇಕು. ಹೊರಟ ದಿಕ್ಕಿನಲ್ಲಿ ಗುರಿ ಇರಲಿ.
ಮಕರ : ಇವತ್ತಿನದು ಸುಂದರ ಸಂಜೆ. ನೀವು ಅನುಭವಿಸುವ ಆನಂದದ ಮಧ್ಯೆ ಯಾವುದೇ ಕರಡಿಗಳು ನುಗ್ಗುವುದಿಲ್ಲ. ಮಾತಿಗೆ ಕಡಿವಾಣ ಹಾಕಿ ಮೌನದಿಂದ ಎಂಜಾಯ್ ಮಾಡುವುದನ್ನು ಕಲಿತುಕೊಳ್ಳಿ. ಹ್ಯಾವ್ ಎ ಗುಡ್ ಡೇ.
ಕುಂಭ : ವೃತ್ತಿ ಜೀವನದ ತಿರುವಿನಲ್ಲಿ ನಿಮ್ಮ ಬದುಕು ಬಂದು ನಿಂತೆದೆ. ಆಯ್ಕೆಗಳು ಬಾಗಿಲು ತೆರೆದು ಸ್ವಾಗತಿಸುತ್ತಿವೆ. ಆರಿಸಿಕೊಳ್ಳಬೇಕಾದ ಜವಾಬ್ಧಾರಿ ನಿಮ್ಮದು. ಬದಲಾವಣೆ ಎಂಬ ನಿರೀಕ್ಷೆಯೇ ಸಾಕು ಖುಷಿಗೆ.
ಮೀನ : ಹತ್ತು ಕಟ್ಟುವ ಜಾಗದಲ್ಲಿ ಒಂದು ಮುತ್ತು ಕಟ್ಟು ಎಂಬ ಗಾದೆ ನೆನಪಿದೆಯೇ? ಅಂತ ದಿನ ನಿಮ್ಮ ಮುಂದಿದೆ ಏನೂ ಬೇಕೋ ಅದನ್ನು ನಿರಾಳವಾಗಿ ಕೊಂಡುಕೊಳ್ಳಿ. ಮೋಸ ಹೋಗುವ ಭಯ ಬೇಡ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications