ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನೀವೀಗ ಹತ್ತಾರು ಸವಾಲುಗಳನ್ನು ಒಮ್ಮೆಗೇ ಎದುರಿಸುತ್ತಿದ್ದೀರಿ. ಈ ಒತ್ತಡಗಳ ಜೊತೆಗೆ ಅನಾರೋಗ್ಯವೂ ಜೊತೆಯಾಗಿದೆ. ಇಂಥಾ ಹೊತ್ತಿನಲ್ಲಿ ಪ್ರತಿ ಹೆಜ್ಜೆಯನ್ನೂ ಯೋಚಿಸಿ ಇಡಿ.ವೃಷಭ :ಇಂದು ಆಫೀಸಿನಲ್ಲಿ ಬಹಳಷ್ಟು ಕೆಲಸದ ಒತ್ತಡ . ತಲೆ ಚಿಟ್ಟು ಹಿಡಿಸುವ ಕಂಪ್ಯೂಟರ್ ಮುಂದೆಯಾದರೂ ಆದೀತು, ಹನುಮಾನ್ ಚಾಲೀಸ ಹೇಳಿಕೊಳ್ಳಿ. ನೆಮ್ಮದಿ ನಿಮ್ಮದಾಗುವುದು.
ಮಿಥುನ : ನಿಮಗೆ ತೀರಾ ಹತ್ತಿರಾದವರನ್ನು ಇವತ್ತಿನ ಮಟ್ಟಿಗಾದರೂ ದೂರದಿರಿ. ಅವರಿಂದಲೇ ನಿಮಗಿಂದು ಅದೃಷ್ಟ ಖುಲಾಯಿಸಲಿದೆ. ಹಾಗಂತ ಅವರನ್ನು ತೀರಾ ತಲೆ ಮೇಲೆ ಕೂರಿಸಿಕೊಳ್ಳುವುದೂ ಒಳ್ಳೆಯದಲ್ಲ.
ಕಟಕ : ಕಚೇರಿ ಜಂಜಡ ಮರೆತು ಬಿಡಿ. ಸಂಗೀತ- ಕಲಾರಾಧಕರೋ, ಅನುಭಾವಿಗಳೋ ನೀವಾಗಿದ್ದರೆ ಅದರತ್ತ ಇವತ್ತು ಮನ ಹರಿಯಬಿಡಿ. ಬ್ರಹ್ಮಾನಂದ ನಿಮ್ಮದಾಗುತ್ತದೆ.
ಸಿಂಹ : ಒಡವೆಯ ಗೊಡವೆ ನಮಗೇಕೆ ಅನ್ನುವ ಪರಿಸ್ಥಿತಿಯಲ್ಲಿರುವವರ ಮನಸ್ಸಿನ ಯಾವುದೋ ಮೂಲೆಯಲ್ಲಿರುವ ಚಿನ್ನದ ಮೇಲಿನ ಕಾಂಕ್ಷೆ ಇವತ್ತು ತೀರೀತು. ಅತಿ ಆಸೆ ಗತಿ ಕೇಡು ಅನ್ನುವುದನ್ನು ಚಿತ್ತದಲ್ಲಿಟ್ಟುಕೊಂಡೇ ಅದನ್ನು ಪರಾಂಬರಿಸಬೇಕು.
ಕನ್ಯಾ : ನಿಮ್ಮ ಹೊಸ ಫ್ಯಾಕ್ಟರಿಗಿಂದು ಅನಿರೀಕ್ಷಿತ ಬ್ರೇಕು. ಪ್ರತಿಸ್ಪರ್ಧಿಯನ್ನು ನೆಲಕಚ್ಚಿಸುವ ಅವಕಾಶ ನಿಮ್ಮದಾಗಲಿದೆ. ಅದನ್ನು ಹಿಂದೂಮುಂದೂ ನೋಡದೆ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕಷ್ಟೆ.
ತುಲಾ : ನೀವು ಪೂರ್ಣ ಆನಂದ ತುಂದಿಲರಾಗಿರುವ ದಿನವಿದು. ಕಸಿವಿಸಿ, ತಲೆಶೂಲೆ ಎಲ್ಲದರಿಂದಲೂ ಇವತ್ತು ವಿನಾಯಿತಿ. ಕಷ್ಟ ಬಂದರೂ ಅದನ್ನು ಎದುರಿಸುವ ನಿಮಗೇ ಗೊತ್ತಿಲ್ಲದಂಥ ಚೈತನ್ಯ ಇವತ್ತು ನಿಮ್ಮದಾಗಲಿದೆ.
ವೃಶ್ಚಿಕ : ನಿಮ್ಮ ನಲ್ಲೆಯಾಡುವ ಮಾತುಗಳು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡುವಂಥದ್ದಲ ್ಲ. ಬಿಟ್ಟರೋ ಕೆಟ್ಟಿರಿ. ಏನೋ ಅಳಕು ನಿಮ್ಮ ಮನದ ತುಂಬಾ ಕತ್ತಲೆ ಕವಿದಿದೆ. ಅಲ್ಲಿ ದೀಪ ಹಚ್ಚೋ ಕೆಲಸ ನಿಮ್ಮ ಮನದನ್ನೆ ಮಾಡುತ್ತಾಳೆ. ಮನದ ಕಣ್ಣು ತೆರೆದು ಅದ ನೋಡಿ.
ಧನಸ್ಸು :ಬಹು ದಿನಗಳಿಂದ ನೀವು ಹಪಹಪಿಸುತ್ತಿರುವ ಲಲಿತ ಕಲೆ ನಿಮಗೆ ಕರಗತವಾಗುವ ದಿನವಿದು. ಅಂತರೀಕ್ಷಣೆಯಿಂದ ಆತ್ಮಸಾಕ್ಷಾತ್ಕಾರ ಅನ್ನೋದನ್ನ ನೆಪ್ಪಿಡಿ. ನಿಮ್ಮ ಸಾಧನೆಯನ್ನು ಮನಸೋ ಇಚ್ಛೆ ಆಚರಿಸಿಬಿಡಿ. ನಾಳೆ ಹೀಗೆ ಅಂತ ಹೇಳೋಕಾಗಲ್ಲ.
ಮಕರ : ಯಾಕಪ್ಪ ಇಷ್ಟೊಂದು ಮನಿ ಮೈಂಡೆಡ್ ಆಗಿದ್ದೀರಿ. ನಾವೇನು ಎಲ್ಲಾ ಹೊತ್ಕೊಂಡ ಹೋಗ್ತೀವಿ. ನೆಮ್ಮದಿ ಮುಖ್ಯ. ನಿಮಗೆ ಅದೇ ಇಲ್ವೆ. ಇಫ್ ವೆಲ್ತ್ ಈಸ್ ಲಾಸ್ಟ್ ನಥಿಂಗ್ ಈಸ್ ಲಾಸ್ಟ್ . ಚೀರ್ ಅಪ್, ದೇವ್ರು ದಿಂಡ್ರು ಅಂತ ಯೋಚಿಸಿ. ನೆಮ್ಮದಿ ತಾನೇ ತಾನಾಗಿ ನಿಮ್ಮದಾಗುತ್ತೆ.
ಕುಂಭ : ನಿಮ್ಮ ಮಾರ್ಕ್ಸ್‌ಕಾರ್ಡಿನ ಮೇಲೆ ‘ಗುಡ್’, ಬಾಸ್‌ರಿಂದ ‘ಕೀಪ್ ಇಟ್ ಅಪ್’, ಗುರುಗಳಿಂದ ‘ಅದ್ಭುತ’ ಅನ್ನುವಂಥ ಶಹಬಾಸ್‌ಗಿರಿಗಳು. ಹಿರಿಹಿರಿ ಹಿಗ್ಗಿ. ಆದರೆ ಅಲ್ಲಿಗೇ ನಿಲ್ಲಬೇಡಿ. ಇದಿನ್ನೂ ಆರಂಭ.
ಮೀನ : ಬಹುದಿನಗಳ ಸಂಶೋಧನೆ ಇಂದು ಫಲಿಸೀತು. ನಿಮ್ಮ ಸೃಜನಶೀಲತೆಗೆ ಕಂಡಾಪಟ್ಟೆ ಬಹುಮಾನ ಸಿಗುವ ದಿನವಿದು. ಮರೆವು. ಕುದಿ ಮೌನ. ಮನಸ್ಸಿಲ್ಲಿ ಏನನ್ನೋ ಇಟ್ಟುಕೊಂಡು ಕೊರಗುತ್ತಿದ್ದೀರಿ. ಯಾರಾದರೂ ಆಪ್ತರಲ್ಲಿ ಎಲ್ಲವನ್ನೂ ಹೇಳಿಬಿಡಿ. ನಿರ್ಲಿಪ್ತತೆ ನಿಮ್ಮದಾಗಲಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications