ಪಶ್ಚಿಮ ಘಟ್ಟದ ಬಸಿರಿಗೆ ಕನ್ನ: ಕೇಂದ್ರದ ತಂಡಕ್ಕೆ ಪರಿಸರವಾದಿಗಳ ದೂರು
ಸಾಗರ : ಹೊಸನಗರ ತಾಲ್ಲೂಕಿನಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಕ್ವಾರಿ ಕೆಲಸಗಳಿಂದ ಲಿಂಗನಮಕ್ಕಿ ಜಲಾಶಯ, ಮಾವಿನಹೊಳೆ ಬ್ರಹ್ಮೇಶ್ವರ ಬೆಟ್ಟಗಳು ಅವಸಾನದ ಅಂಚಿಗೆ ತಲುಪಿರುವುದಾಗಿ ಇಲ್ಲಿನ ವೃಕ್ಷ ಲಕ್ಷ ಆಂದೋಲನದ ಕಾರ್ಯಕರ್ತರು , ಕೇಂದ್ರ ಪರಿಸರ ಅರಣ್ಯ ಸಚಿವಾಲಯದ ಅರಣ್ಯಾಧಿಕಾರಿಗಳ ತಂಡಕ್ಕೆ ದೂರು ನೀಡಿದ್ದಾರೆ.
ಪಶ್ಚಿಮ ಘಟ್ಟದ ವೃಕ್ಷ ಲಕ್ಷ ಆಂದೋಲನ ಪರಿಸರ ನಾಶದ ಕುರಿತು ಕೇಂದ್ರ ಪರಿಸರ ಸಚಿವರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಪಶ್ಚಿಮಘಟ್ಟಕ್ಕೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಶೆಟ್ಟಿ ಹಳ್ಳಿ ಅಭಯಾರಣ್ಯ, ಬಿಸಗೋಡ, ದಾಂಡೇಲಿ ಅಭಯಾರಣ್ಯಗಳ ನಡುವೆ ಅನಧಿಕೃತ ಗಣಿ ವಸತಿ ಕ್ಯಾಂಪ್‌ಗಳು ಕೆಲಸ ನಡೆಸುತ್ತಿದ್ದು, ಅವುಗಳನ್ನು ಖಾಲಿ ಮಾಡಿಸಬೇಕೆಂದು ಆಂದೋಲನದ ಸದಸ್ಯರು ತಂಡವನ್ನು ಆಗ್ರಹಿಸಿದರು . ವೃಕ್ಷ ಲಕ್ಷ ಆಂದೋಲನದ ಮುಖಂಡ ಅನಂತ ಹೆಗಡೆ ಅಶೀಸರ , ಸರಕಾರದ ಯೋಜನೆಗಳಿಂದ ಮತ್ತು ಅನಧಿಕೃತವಾಗಿ ಕ್ವಾರಿ ಕೆಲಸ ನಡೆಸುತ್ತಿರುವವವರಿಂದ ಪರಿಸರದ ಮೇಲಾಗುವ ಹಾನಿಯನ್ನು ವಿವರಿಸಿ, ಪಶ್ಚಿಮ ಘಟ್ಟವನ್ನು ಅದರ ಪಾಡಿಗೆ ಬಿಟ್ಟಲ್ಲಿ ಕರ್ನಾಟಕದ ಅಮೂಲ್ಯ ಸಂಪತ್ತನ್ನು ಉಳಿಸಿದಂತಾಗುತ್ತದೆ ಎಂದರು.
ವಿವಾದಿತ ಕೊಲ್ಲಿ ಬಚ್ಚಲು ನೀರಾವರಿ ಅಣೆಕಟ್ಟು ಯೋಜನೆಗೆ ಸಂಬಂಧಿಸಿ ಸಮಗ್ರ ಮಾಹಿತಿ ಸಂಗ್ರಹಿಸಿ, ಈ ಯೋಜನೆಯಿಂದ ಆಗುವ ಪರಿಸರ ಹಾನಿಯ ಕುರಿತು ಪರಿಸರವಾದಿಗಳೊಂದಿಗೆ ಚರ್ಚೆ ನಡೆಸಿತು. ಕೊಲ್ಲಿ ಬಚ್ಚಲು ಕಣಿವೆ ರಕ್ಷಣೆಗೆಂದೇ ಕೊಲ್ಲಿ ಬಚ್ಚಲು ಕಣಿವೆ ಸಂರಕ್ಷಣಾ ಸಮಿತಿಯಾಂದು ಕೆಲಸ ಮಾಡುತ್ತಿದ್ದು, ಸಮಿತಿಯ ಅಧ್ಯಕ್ಷ ಚಂದ್ರಪ್ಪ, ಈ ಯೋಜನೆಯಿಂದಾಗಿ ಸೂಕ್ಷ್ಮ ಪರಿಸರ ಹೇಗೆ ಕರಗಲಿದೆ ಎಂದು ಅಧಿಕಾರಿಗಳಿಗೆ ವಿವರಿಸಿದರು.
ಶಿವಮೊಗ್ಗಾ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಶುಂಠಿ ಕೃಷಿಯಿಂದಾಗಿ ನಡೆಯುತ್ತಿರುವ ಅರಣ್ಯ ಹಾನಿಯ ಬಗ್ಗೆ ಪರಿಸರವಾದಿಗಳು ಅರಣ್ಯಾಧಿಕಾರಿಗಳ ತಂಡಕ್ಕೆ ವಿವರಿಸಿದರು. ಈ ಭೇಟಿಯ ಸಂದರ್ಭದಲ್ಲಿ , ಸಾಗರ, ಹೊಸನಗರ, ಶಿವಮೊಗ್ಗ ತಾಲ್ಲೂಕು ಅರಣ್ಯ ಪ್ರದೇಶಗಳಲ್ಲಿ ಅರಣ್ಯಾಧಿಕಾರಿಗಳ ತಂಡ ನಡೆಸಿದ ಅಧ್ಯಯನವನ್ನು ಕೇಂದ್ರ ಪರಿಸರ ಸಚಿವಾಲಯಕ್ಕೆ ನೀಡಲಾಗುವುದು.
(ಇನ್ಫೋ ವಾರ್ತೆ)
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications