ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರಿಗೆ ಸಾಲ ನೀಡಿಕೆ ಪ್ರಮಾಣ ಹೆಚ್ಚಿಸಲು ಸಿನ್ಹಾ ನಿರ್ದೇಶನ

By Staff
|
Google Oneindia Kannada News

ನವದೆಹಲಿ : ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ದೃಷ್ಟಿಯಿಂದ ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಸಾಲ ನೀಡಿಕೆ ಪ್ರಮಾಣದಲ್ಲಿ ಶೇಕಡಾ ಎರಡರಷ್ಟನ್ನು ಮಹಿಳೆಯರಿಗೆ ಮೀಸಲಿಡಬೇಕೆಂದು ಕೇಂದ್ರ ಹಣಕಾಸು ಸಚಿವ ಯಶವಂತ ಸಿನ್ಹಾ ನಿರ್ದೇಶನ ನೀಡಿದ್ದಾರೆ.

ಈ ಸಂಬಂಧ ಗುರುವಾರ ಹೇಳಿಕೆ ನೀಡಿರುವ ಸಿನ್ಹಾ ಅವರು ಸಾಲ ನೀಡಿಕೆ ಪ್ರಮಾಣವನ್ನು ಮುಂದಿನ ಐದು ವರ್ಷಗಳಲ್ಲಿ ಶೇಕಡಾ ಐದಕ್ಕೆ ಏರಿಸುವಂತೆಯೂ ಸೂಚಿಸಿದ್ದಾರೆ. ಬ್ಯಾಂಕುಗಳಿಂದ ಹಣಕಾಸು ನೆರವನ್ನು ಸುಲಭವಾಗಿ ತೆಗೆದುಕೊಳ್ಳಲು ಮಹಿಳೆಯರಿಗೆ ಅನುಕೂಲವಾಗುವಂತೆ ಇತರ ಕೆಲವು ಕ್ರಮಗಳನ್ನು ಕೈಗೊಳ್ಳುವುದು. 14 ಅಂಶಗಳ ಕಾರ್ಯಕ್ರಮದಡಿ ಈಗಿನ ನಿಯಮಗಳನ್ನು ಸರಳಗೊಳಿಸುವುದು. ಇತ್ತೀಚಿನ ಸೌಲಭ್ಯಗಳು ಮತ್ತು ಇತರ ಪೂರಕ ಮಾಹಿತಿಗಳನ್ನು ಒದಗಿಸಲು ಬ್ಯಾಂಕ್‌ಗಳು ಕ್ರಮ ಕೈಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಲಹಾ ಕೇಂದ್ರಗಳ ಸ್ಥಾಪನೆ : ಮಹಿಳಾ ಉದ್ಯಮಿಗಳ ಸಮಸ್ಯೆಗಳ ಪರಿಹಾರ ಮತ್ತು ಇತರ ಅಗತ್ಯಗಳನ್ನು ಪೂರೈಸಲು ಮಹಿಳೆಯರಿಗಾಗಿ ಪ್ರತ್ಯೇಕ ಶಾಖಾ ಬ್ಯಾಂಕ್‌ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿಲಾಗಿದೆ. ರಾಷ್ಟ್ರಾದ್ಯಂತ ಪ್ರತಿ ಜಿಲ್ಲೆಯಲ್ಲಿ ಇಂತದೊಂದು ಕೇಂದ್ರವನ್ನು ತೆರೆಯಲು ಕ್ರಮ ತೆಗೆದುಕೊಳ್ಳಲಾಗುವುದು. ಈ ಕೆಂದ್ರಗಳು ಮಹಿಳೆಯರ ಸಾಲ ಸಂಬಂಧಿತ ಸಮಸ್ಯೆಗಳನ್ನು ನಿಭಾಯಿಸಲಿದ್ದು ಸಲಹಾ ಕೇಂದ್ರಗಳಂತೆ ಕೆಲಸ ಮಾಡಲಿವೆ.

ಬ್ಯಾಂಕ್‌ಗಳ ಈಗಿನ ನಿಯಮಗಳಲ್ಲಿ ಬದಲಾವಣೆ ಮಾಡಿ ಪ್ರತಿ ಬ್ಯಾಂಕ್‌ಗಳಲ್ಲಿ ಮಹಿಳೆಯರಿಗಾಗಿಯೇ ಸಲಹೆ ನೀಡುವ ಪ್ರತ್ಯೇಕ ಕೌಂಟರ್‌ ಸ್ಥಾಪಿಸುವಂತೆ ನಿರ್ದೇಶನ ನೀಡಲಾಗಿದೆ. ಈ ಎಲ್ಲ ಕ್ರಮಗಳಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಾಯ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X