ಉದ್ಯಮಶೀಲತೆಯ ಕನ್ನಡಿಯಲ್ಲಿ ಕಂಡ ‘ ಮಾಯಾನಗರಿ’
ಬೆಂಗಳೂರು : ನಾರ್ಟೆಲ್ ನೆಟ್‌ವರ್ಕ್ಸ್ ಕಾರ್ಪೋರೇಷನ್‌ನ ಸಿಒಒ ಕ್ಲಾರೆನ್ಸ್ ಚಂದ್ರನ್ ಉದ್ಘಾಟಿಸಿದ ಇನ್‌ಫೋಸಿಸ್ ಸಿಟಿ, ಉದ್ಯಮಶೀಲತೆ ಮತ್ತು ಮೂಲಸೌಲಭ್ಯ ವಿಸ್ತರಣೆಯ ಕನ್ನಡಿಯಲ್ಲಿ ನೋಡಿದರೆ ಅದೊಂದು ಮಾಯಾನಗರಿಯೇ ಹೌದು. ಇಂಥ ‘ ನಗರ ’ ದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಧುನಿಕ ಕರ್ನಾಟಕ ನಿರ್ಮಾಣಕ್ಕಾಗಿ ಹೆಣಗುತ್ತಿರುವ ಎಸ್. ಎಂ. ಕೃಷ್ಣ ಅವರಲ್ಲದೆ ಇನ್ನಾರು ತಾನೆ ಮುಖ್ಯ ಅತಿಥಿಯಾಗಲು ಅರ್ಹರು ? ಇವರೆಲ್ಲರ ಜತೆ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಎನ್. ಆರ್. ನಾರಾಯಣಮೂರ್ತಿ ಹಾಗೂ ಅವರ 4354 ನೌಕರ ವರ್ಗ(ಬೆಂಗಳೂರು ನೌಕರರು ) ಇನ್‌ಫೋಸಿಯಾನ್ಸ್ ಬಳಗ ಹೊಸನಗರದ ಉದ್ಘಾಟನೆಯನ್ನು ತುದಿಗಾಲಲ್ಲಿ ನಿಂತು ವೀಕ್ಷಿಸಿತು.
ವಿದ್ಯಾದಾಯಿನಿ ಶಾರದೆಯನ್ನು ಸಂಸ್ಕೃತದ ಶ್ಲೋಕವೊಂದರಲ್ಲಿ ಸ್ತುತಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಮುಖ್ಯಮಂತ್ರಿ ಕೃಷ್ಣ , ಎಸ್. ಡಿ. ಶಿಬುಲಾಲ್, ಬಿ.ಬಿ. ಬೋಜಮ್ಮ , ಕ್ಲಾರೆನ್ಸ್ ಚಂದ್ರನ್, ದೀಪಕ್ ಸತ್ವೇಲ್‌ಕರ್ ಅವರುಗಳು ದೀಪಬೆಳಗಿ ಇನ್‌ಫೋಸಿಸ್ ಸಿಟಿಗೆ ವಿದ್ಯುಕ್ತ ಆರಂಭ ಒದಗಿಸಿದರು. ಕಂಪನಿ ನಡೆದು ಬಂದ ಬೀಳುಗಳಿಲ್ಲದ ಏರು ದಾರಿಯನ್ನು ನಂದನ್ ನಿಲೇಕನಿ ವಿವರಿಸಿದರೆ, ಸಿಟಿ ಮೈದಾಳಿದ ಬಗೆಯನ್ನು ಫಣೀಶ್ ಮೂರ್ತಿ ಬಣ್ಣಿಸಿದರು.
ವಿಶಾಲವಾದ, ಸುಸಜ್ಜಿತವಾದ ಸಿಟಿ ನಿರ್ಮಾಣದಲ್ಲಿ ಹಗಲಿರುಳು ಶ್ರಮಿಸಿದ ವಿವಿಧ ಕ್ಷೇತ್ರಗಳ ವೃತ್ತಿಪರರಿಗೆ ಮುಖ್ಯಮಂತ್ರಿ ಕೃಷ್ಣ ನೆನಹು ಕಾಣಿಕೆಗಳನ್ನು ನೀಡಿ ಪ್ರೋತ್ಸಾಹಿಸಿದರು.
ವಾರ್ತಾ ಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications