Get Updates
Get notified of breaking news, exclusive insights, and must-see stories!

ವಾದಿ ಪ್ರತಿವಾದಿಗಳ ಅಹವಾಲು ಆಲಿಕೆ, ಭೋಜನಾ ನಂತರ ವಿಚಾರಣೆ

ನವದೆಹಲಿ : ಮೈಸೂರು ಜೈಲಿನಲ್ಲಿರುವ ಟಾಡಾ ಬಂದಿಗಳ ಬಿಡುಗಡೆ ಸಂಬಂಧದ ಅರ್ಜಿಯ ವಿಚಾರಣೆಯನ್ನು ಸರ್ವೋನ್ನತ ನ್ಯಾಯಾಲಯ ಬುಧವಾರ ಕೈಗೆತ್ತಿಕೊಂಡಿದೆ. ಟಾಡಾ ಮೊಕದ್ದಮೆಗಳನ್ನು ಕೈಬಿಡುವ ರಾಜ್ಯ ಸರಕಾರದ ನಿರ್ಧಾರವನ್ನು ಮೈಸೂರಿನ ಅಬ್ದುಲ್‌ ಕರೀಂ ಅವರು, ವಿಶೇಷ ತೆರವು ಅರ್ಜಿ ಸಲ್ಲಿಸುವ ಮೂಲಕ ಪ್ರಶ್ನಿಸಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ವಾದಿ - ಪ್ರತಿವಾದಿಗಳ ಆಹವಾಲುಗಳನ್ನು ಆಲಿಸಿತು. ಕೇವಲ ಕಾಡುಗಳ್ಳ ವೀರಪ್ಪನ್‌ನ ಬೇಡಿಕೆ ಈಡೇರಿಸುವ ಸಲುವಾಗಿ ರಾಜ್ಯ ಸರಕಾರ ಟಾಡಾ ಆರೋಪಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ವೀರಪ್ಪನ್‌ ಸಹಚರರಾದ ಈ ಆರೋಪಿಗಳು ಅರ್ಜಿದಾರರರಾದ ಅಬ್ದುಲ್‌ ಕರೀಂ ಅವರ ಪುತ್ರ ಶಖೀಲ್‌ ಅಹ್ಮದ್‌ ಸೇರಿದಂತೆ ಹಲವರ ಹತ್ಯೆ ಮಾಡಿದ್ದಾರೆ. ಇವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಅರ್ಜಿದಾರರ ವಾದವನ್ನು ಬೆಳಗಿನ ಅವಧಿಯಲ್ಲಿ ಆಲಿಸಿದ ನ್ಯಾಯಮೂರ್ತಿಗಳಾದ ಎಸ್‌.ಪಿ. ಬರೂಚ, ವೈ.ಕೆ. ಸಬರ್‌ವಾಲ್‌ ಹಾಗೂ ಡಿ.ಪಿ. ಮಹಾಪಾತ್ರ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠವು ವಿಚಾರಣೆಯನ್ನು ಮಧ್ಯಾಹ್ನ ಮುಂದುವರಿಸಲಿದೆ. ಈ ಅವಧಿಯಲ್ಲಿ ನ್ಯಾಯಪೀಠ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು ಎಂದು ವರದಿಗಳು ತಿಳಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+