ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಹೊತ್ತು ವಿಶ್ವ ಪ್ರವಾಸ ದಿನ ನಿಮ್ಮ ಪ್ರಯಾಣ ಸುಖಕರವಾಗಿರಲಿ

By ಟಿ. ಎಂ. ಸತೀಶ್‌
|
Google Oneindia Kannada News

karnataka
ಬೆಂಗಳೂರು : ಕರ್ನಾಟಕ ಸುಂದರ ನಾಡು, ಶಿಲ್ಪಕಲೆಗಳ ಬೀಡು, ನೈಸರ್ಗಿಕ ಕಾನನವುಳ್ಳ ಗಂಧದ ಬೀಡು( ವೀರಪ್ಪನ್‌ ಕೊಳ್ಳೆ ಹೊಡೆದದ್ದು ಬಿಟ್ಟು) ಚಿನ್ನದ ನಾಡು (ಕೋಲಾರ ಚಿನ್ನದ ಗಣಿ ಬರಿದಾಗಿರುವುದು ಬೇರೆ ಮಾತು). ಏನೆಲ್ಲಾ ಕರ್ನಾಟಕದ ಬಗ್ಗೆ ಹೇಳಿದರೂ, ಸಾಲದು. ಎಷ್ಟಾದರೂ ಕರ್ನಾಟಕ ನಮ್ಮ ತಾಯ್ನಾಡಲ್ಲವೇ? ಸುಂದರವಾದ ಅರಮನೆಗಳು, ವಿಶ್ವವಿಖ್ಯಾತ ಬಂದಾವನ ಉದ್ಯಾನ, ಬಂಡೀಪುರ ಅರಣ್ಯ, ರಂಗನತಿಟ್ಟು ಪಕ್ಷಿಧಾಮ, ಶ್ರವಣಬೆಳಗೊಳ, ಬೇಲೂರು, ಹಳೇಬೀಡು, ಸೋಮನಾಥಪುರ, ಬನವಾಸಿ, ಜೋಗದ ಜಲಪಾತವೇ ಮೊದಲಾದ ಪ್ರೇಕ್ಷಣೀಯ ಸ್ಥಳಗಳ ತವರು. ಇವೆಲ್ಲವುಗಳ ಜತೆಗೆ ಊರು, ದೇಶ ಬಿಟ್ಟು ಹೋದವರಿಗೆ ತಮ್ಮ ಊರು ಕೇರಿ ಮನೆ ಹೊಲ, ಇಡೀ ಕರ್ನಾಟಕವೇ ಒಂದು ಆತ್ಮೀಯ ಪ್ರೇಕ್ಷಣೀಯ ಸ್ಥಳ.

ವಿಶ್ವವೆಲ್ಲ ಸೆಪ್ಟೆಂಬರ್‌ 27ನ್ನು ಪ್ರವಾಸ ದಿನ ಎಂದು ಆಚರಿಸುತ್ತದೆ. ಕರ್ನಾಟಕವೂ ಸಂಭ್ರಮದಿಂದ ಈ ದಿನವನ್ನು ಆರಿಸುತ್ತಿತ್ತು. ಸಾಮಾನ್ಯವಾಗಿ ವಿಶ್ವ ಪ್ರವಾಸ ದಿನದ ಹಿಂದೆ ಮುಂದೆಯೇ ಮೈಸೂರು ದಸರ. ದೇಶ ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದರು. ಒಂದರ್ಥದಲ್ಲಿ ವಿಶ್ವವನ್ನೇ ಈ ಸಂದರ್ಭದಲ್ಲಿ ಮೈಸೂರು ತನ್ನತ್ತ ಸೆಳೆಯುತ್ತಿತ್ತು. ರಾಜ್ಯದಲ್ಲಿ ವಿಶ್ವ ಪ್ರವಾಸ ದಿನಕ್ಕೆ ವಿಶೇಷ ಅರ್ಥ ಬರುತ್ತಿತ್ತು.

ಸಂಭ್ರಮಕ್ಕೆ ಅಡ್ಡಿಯಾದ ವೀರಪ್ಪ : ಆದರೆ, ಈ ಬಾರಿ ವಿಶ್ವ ಪರಿಸರ ದಿನದ ಮಾರನೆ ದಿನವೇ ವಿಶ್ವ ವಿಖ್ಯಾತ ದಸರೆ ಆರಂಭವಾಗುವ ಹಿನ್ನೆಲೆಯಲ್ಲಿ ಸಾವಿರಾರು ವಿದೇಶೀ ಪ್ರವಾಸಿಗರು, ನಗರಕ್ಕೆ ಬರುತ್ತಾರೆ. ಪ್ರವಾಸೋದ್ಯಮದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ಲಾಭ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ರಾಜ್‌ ಅಪಹರಣದ ಕರಿನೆರಳು ವಿಶ್ವ ಪ್ರವಾಸದ ದಿನದ ಮೇಲೆ ಚಾಚಿಕೊಂಡಿದೆ.

28ರಂದೇ ಕರ್ನಾಟಕ ಬಂದ್‌ಗೂ ಕರೆ ನೀಡಿರುವ ಕಾರಣ ವಿಶ್ವದ ಪ್ರವಾಸಿಗರು, ರಾಜ್ಯಕ್ಕೆ ಬರಲೂ ಹಿಂದೇಟು ಹಾಕುತ್ತಿದ್ದಾರೆ. ಭಾರತದ ಇನ್ನಿತರ ಪ್ರವಾಸ ಧಾಮಗಳಲ್ಲಿ ಸಂಭ್ರಮ, ಸಡಗರ ಕಂಡು ಬಂದಿದೆ. ವಿದೇಶೀ ಪ್ರವಾಸಿಗರನ್ನು ಕೈಬೀಸಿ ಕರೆಯುವ ಸಂಭ್ರಮ - ಸಡಗರ ಈ ವರ್ಷ ಕರ್ನಾಟಕದ ಪಾಲಿಗೆ ಇಲ್ಲವಾಗಿದೆ. ರಮ್ಯವಾದ ಕೆ.ಆರ್‌.ಎಸ್‌.ನಲ್ಲಿ ಬಿಗಿ ಪೊಲೀಸ್‌ ಕಾವಲು ಹಾಕಲಾಗಿದೆ.

English summary
Against all odds we bet karnataka is the best
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X