ಎಸ್‌.ಟಿ.ಡಿ. ದರದಲ್ಲಿ ಭಾರಿ ಕಡಿತ, ಅಕ್ಟೋಬರ್‌ 1ರಿಂದ ಜಾರಿ

ನವದೆಹಲಿ : ದೂರವಾಣಿಯ ಒತ್ತಡ ಇರುವ ಸಮಯದಲ್ಲಿ ಎಸ್‌ಟಿಡಿ ಕರೆಗಳ ಮೇಲಿನ ದರವನ್ನು ಪ್ರತಿಶತ ಎಂಟರಿಂದ 33ರಷ್ಟು ಕಡಿತಗೊಳಿಸಲಾಗುತ್ತದೆ ಎಂದು ಕೇಂದ್ರ ಸರಕಾರ ಗುರುವಾರ ತಿಳಿಸಿದೆ. ಈ ಹೊಸ ದರ ಅಕ್ಟೋಬರ್‌ 1ರಿಂದ ಜಾರಿಗೆ ಬರುತ್ತದೆ.

ದೂರವಾಣಿ ಒತ್ತಡದ ಅವಧಿಯ ವೇಳೆಯನ್ನು ಸಹ ಬದಲಾಯಿಸಲಾಗಿದೆ. ಬೆಳಗ್ಗೆ 8ರಿಂದ ಸಂಜೆ 7 ಗಂಟೆಯ ವರೆಗಿದ್ದ ದೂರವಾಣಿ ದಟ್ಟಣೆಯ ಅವಧಿಯನ್ನು ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬದಲಾಯಿಸಲಾಗಿದೆ. ಈ ವಿಷಯವನ್ನು ಕೇಂದ್ರ ಸಂಪರ್ಕ ಖಾತೆ ರಾಜ್ಯ ಸಚಿವ ತಪನ್‌ ಸಿಕ್ದರ್‌ ಮಾಧ್ಯಮ ಪ್ರತಿನಿಧಿಗಳಿಗೆ ಇಂದು ತಿಳಿಸಿದರು.

ಸ್ಥಳೀಯ ಕರೆಗಳ ಮತ್ತು ದೂರವಾಣಿ ಬಾಡಿಗೆಯ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೊಸ ದರಗಳ ರೀತ್ಯ ದೂರವಾಣಿ ಒತ್ತಡ ಇರುವ ಅವಧಿಯಲ್ಲಿ 1000 ಕಿ.ಮೀಟರ್‌ ಗಿಂತ ಹೆಚ್ಚು ದೂರದ ಎಸ್‌ಟಿಡಿ ಕರೆಗಳಗೆ ನಿಮಿಷಕ್ಕೆ 73.20 ರುಪಾಯಿಗಳಾಗುತ್ತವೆ. ಈ ಹಿಂದೆ ಈ ದರ 87.60 ರು. ಇತ್ತು.

ಅದೇ ರೀತಿ 500ರಿಂದ 1000 ಕಿ.ಮೀಟರ್‌ ಅಂತರ ಕರೆಗೆ ಇದುವರೆಗೆ ಇದ್ದ 62.40 ರು. ದರವನ್ನು 54 ರುಪಾಯಿಗೆ ಇಳಿಸಲಾಗಿದೆ. 200ರಿಂದ 500 ಕಿ.ಮೀಟರ್‌ ನಡುವಣ ದೂರದ ಕರೆಗೆ ಈ ಹಿಂದೆ ಇದ್ದ 44.40 ರುಪಾಯಿಗಳಿಗೆ ಬದಲಾಗಿ 36 ರುಪಾಯಿಗಳಷ್ಟೇ ಆಗಲಿದೆ. ಅಂತೆಯೇ 50ರಿಂದ 200 ಕಿ.ಮೀಟರ್‌ ನಡುವಣ ಕರೆಯ ದರ 16.80ರಿಂದ 15.60 ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+