ಕಾಣಕೋಣ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು
ಕಾಣಕೋಣ : ಕೊಂಕಣ ರೈಲು ಮಾರ್ಗದಲ್ಲಿ ಮಂಗಳೂರಿನಿಂದ ಗೋವಾ ಮೂಲಕ ಹುಬ್ಬಳ್ಳಿಗೆ ಹೊರಟಿದ್ದ ಗೂಡ್ಸ್ ರೈಲು ಸೋಮವಾರ ಬೆಳಗ್ಗೆ ಕಾಣಕೋಣ ನಿಲ್ದಾಣ ದಾಟಿದ ನಂತರ ಎರಡು ಸುರಂಗಗಳ ಮಧ್ಯೆ ಹಳಿತಪ್ಪಿದ ಪರಿಣಾಮವಾಗಿ 21 ಬೋಗಿಗಳು ನೆಲಕ್ಕುರುಳಿವೆ.
ಈ ಗೂಡ್ಸ್ ರೈಲು ದುರಂತಕ್ಕೆ ಕಾರಣವೇನು ಎಂಬುದು ಈವರೆಗೆ ತಿಳಿದುಬಂದಿಲ್ಲ. ಹಳಿತಪ್ಪಿ ನೆಲಕ್ಕುರುಳಿರುವ ಬೋಗಿಗಳಲ್ಲಿ 23,150ಕ್ಕೂ ಹೆಚ್ಚು ಮಂಗಳ ಹಾಗೂ ಯೂರಿಯಾ ಗೊಬ್ಬರದ ಚೀಲಗಳಿದ್ದು, ಅವುಗಳನ್ನು ಸಾಗಿಸುವ ಕಾರ್ಯ ನಡೆದಿದೆ.
ಮುಂಬಯಿಯಿಂದ ರೈಲ್ವೆ ಸುರಕ್ಷತಾ ಆಯುಕ್ತರು ಅಪಘಾತ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಇನ್ನು 4-5 ದಿನಗಳಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಸಂಚಾರ ಸುಗಮವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಪರ್ಯಾಯ ಮಾರ್ಗದಲ್ಲಿ ಈಗ ರೈಲು ಸಂಚಾರ ಆರಂಭಗೊಂಡಿದೆ.












Click it and Unblock the Notifications