ಎಂಸಿಸಿ ಬ್ಯಾಂಕ್‌ನಲ್ಲಿ 100 ಕೋಟಿ ಠೇವಣಿ ಸಂಗ್ರಹ
ಮಂಗಳೂರು : ಮಂಗಳೂರು ದಿ. ಕ್ಯಥೋಲಿಕ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಕಳೆದ ಮಾರ್ಚ್ ಅಂತ್ಯದ ವೇಳೆಗೆ 100 ಕೋಟಿ ರೂಪಾಯಿಗಳಿಗೂ ಅಧಿಕ ಠೇವಣಿ ಸಂಗ್ರಹಿಸಿ ಶೆಡ್ಯೂಲ್ಡ್ ಬ್ಯಾಂಕ್ ಆಗಿ ಮಾನ್ಯತೆ ಪಡೆಯಲು ಅರ್ಹತೆ ಪಡೆ-ದಿದೆ ಎಂದು ಬ್ಯಾಂಕ್ ಅಧ್ಯಕ್ಷ ವೆಲೆಂಟೈನ್ ಡಿ ಸಿಲ್ವ ಹೇಳಿದ್ದಾರೆ.
ರಾಜ್ಯದ 297 ನಗರ ಸಹಕಾರಿ ಬ್ಯಾಂಕ್‌ಗಳ ಪೈಕಿ ತಮ್ಮ ಬ್ಯಾಂಕ್ 9ನೇ ಸ್ಥಾನದಲ್ಲಿದೆ ಎಂದು ಸಿಲ್ವ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಒಟ್ಟು 66.07 ಲಕ್ಷ ರೂಪಾಯಿ ಲಾಭ ಗಳಿಸಿದ್ದು, ಶೇ 15 ಡೆವಿಡೆಂಟನ್ನು ಸದಸ್ಯರಿಗೆ ವಿತರಿಸಲು ನಿರ್ಧರಿಸಲಾಗಿದೆ, ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ 100 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿದ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಲ್ಲಿ ಇದು ಮೊದಲನೆಯದಾಗಿದೆ ಎಂದರು.
(ಮಂಗಳೂರು ಪ್ರತಿನಿಧಿಯಿಂದ)












Click it and Unblock the Notifications